ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ: 1 ತಿಂಗಳಲ್ಲಿ ಕನಿಷ್ಠ ಮಟ್ಟ
ನವದೆಹಲಿ, ಜನವರಿ 27: ದುರ್ಬಲವಾದ ಜಾಗತಿಕ ದರಗಳ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ತೀವ್ರವಾಗಿ ಕುಸಿಯತೊಡಗಿದ್ದು, ಸತತ ನಾಲ್ಕನೇ ದಿನ ಇಳಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಶೇಕಡಾ 0.6ರಷ್ಟು ಇಳಿದು ಒಂದು ತಿಂಗಳ ಕನಿಷ್ಠ ಮಟ್ಟ 48,845 ರೂಪಾಯಿಗೆ ತಲುಪಿದೆ.
ಎಂಸಿಎಕ್ಸ್‌ನಲ್ಲಿ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.6ರಷ್ಟು ಕುಸಿದು 66,130 ರೂಪಾಯಿಗೆ ತಲುಪಿದೆ. ಅಮೆರಿಕಾದ ವಿಶೇಷ ಆರ್ಥಿಕ ಪ್ಯಾಕೇಜ್‌ಗಳು ವಿಳಂಬವಾಗಬಹುದು ಎಂಬ ಆತಂಕ ಇತ್ತೀಚೆಗೆ ಹಳದಿ ಲೋಹದ ಮೇಲೆ ಪರಿಣಾಮ ಬೀರುತ್ತಿದೆ.
ಚಿನ್ನವು ಔನ್ಸ್‌ಗೆ ಶೇಕಡಾ 0.3ರಷ್ಟು ಇಳಿಕೆಯಾಗಿ 1,845.30 ಡಾಲರ್‌ಗೆ ತಲುಪಿದ್ದರೆ, ಬೆಳ್ಳಿ ಔನ್ಸ್‌ಗೆ 25.43 ಡಾಲರ್‌ನಷ್ಟಿದೆ.

ಅಮೆರಿಕಾ ನೂತನ ಅಧ್ಯಕ್ಷ ಜೋ ಬಿಡೆನ್‌ರ 1.9 ಟ್ರಿಲಿಯನ್ ಡಾಲರ್ ಆರ್ಥಿಕ ಪರಿಹಾರ ಪ್ಯಾಕೇಜ್ ಅನ್ನು ಹೂಡಿಕೆದಾರರು ಗಮನದಲ್ಲಿಟ್ಟುಕೊಂಡಿದ್ದಾರೆ. ಕೋವಿಡ್ -19 ಪರಿಹಾರ ಯೋಜನೆಯ ಸಮಯದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬಯಸುತ್ತಿದ್ದಾರೆ.
ಏತನ್ಮಧ್ಯೆ, ಐಎಂಎಫ್ ಮಂಗಳವಾರ 2021 ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯ ತನ್ನ ಮುನ್ಸೂಚನೆಯನ್ನು ಹೆಚ್ಚಿಸಿದೆ ಮತ್ತು ಭಾರತದ ಆರ್ಥಿಕತೆಯು 2021ರಲ್ಲಿ ಶೇಕಡಾ 11.5ಕ್ಕೆ ಚೇತರಿಸಿಕೊಳ್ಳಲಿದೆ ಎಂದು ಹೇಳಿದೆ.












Click it and Unblock the Notifications