Gold Price Today : ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ, ಇಂದಿನ ಬೆಲೆ ಎಷ್ಟು ಗೊತ್ತಾ?
ಶುಕ್ರವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 400 ರೂಪಾಯಿ ಏರಿಕೆಯಾಗಿ 58,040 ರೂಪಾಯಿಗಳಿಗೆ ತಲುಪಿತ್ತು.
ನವದೆಹಲಿ, ಮಾರ್ಚ್ 20: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಮಾರ್ಚ್ 20 ರ ಸೋಮವಾರದಂದು ಹೆಚ್ಚಳವಾದ ಪರಿಣಾಮ ಹಳದಿ ಲೋಹ ಚಿನ್ನ ಸೋಮವಾರ ಸಾರ್ವಕಾಲಿಕ ಬೆಲೆ ಏರಿಕೆಯಾಗಿದೆ.
ಜಗತ್ತಿನಾದ್ಯಂತ ಈಕ್ವಿಟಿ ಮಾರುಕಟ್ಟೆಯಲ್ಲಿ ಮುಂದುವರಿದ ಮಾರಾಟದ ನಡುವೆ ಸೋಮವಾರ ಚಿನ್ನದ ಬೆಲೆಗಳು ಭಾರತದಲ್ಲಿ 10 ಗ್ರಾಂಗೆ 60,000 ರೂಪಾಯಿಯಾಯಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಚಿನ್ನದ ಬೆಲೆ 10 ಗ್ರಾಂಗೆ 400 ರೂಪಾಯಿ ಏರಿಕೆಯಾಗಿ 58,040 ರೂಪಾಯಿಗಳಿಗೆ ತಲುಪಿತ್ತು.

ಜಾಗತಿಕ ಆರ್ಥಿಕ ಅಸ್ಥಿರತೆಯ ಅಪಾಯಗಳ ಹೊರತಾಗಿಯೂ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ ಹಾಗೂ ಬ್ಯಾಂಕಿಂಗ್ ಬಿಕ್ಕಟ್ಟಿನ ಬಗ್ಗೆ ಕಳವಳಗಳು ಮುಂದುವರಿದ ಕಾರಣ ಹಳದಿ ಲೋಹದ ಬೆಲೆಯು ಏರಿಕೆ ಕಂಡು ಬಂದಿತು. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ಸ್ 12:55ರ ವೇಳೆಗೆ 897 ರೂಪಾಯಿ ಅಥವಾ ಶೇಕಡ 1.51ರಷ್ಟು ಏರಿಕೆಯಾಗಿ 60,280 ರೂಪಾಯಿಗೆ ತಲುಪಿತು.
ಅಮೆರಿಕಾ ಮತ್ತು ಯೂರೋಪ್‌ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟುಗಳು ಚಿನ್ನ ಖರೀದಿಗೆ ಮರಳುವಿಕೆಯನ್ನು ಪ್ರಚೋದಿಸಿದ ನಂತರ ಒಂದು ವರ್ಷದ ನಂತರ ಮೊದಲ ಬಾರಿಗೆ ಚಿನ್ನದ ಬೆಲೆ $2,000 ಕ್ಕಿಂತ ಹೆಚ್ಚಾಯಿತು. ಕ್ರೆಡಿಟ್ ಸ್ಯೂಸ್ ಗ್ರೂಪ್ ಎಜಿ ಮತ್ತು ಹಲವಾರು ಪ್ರಾದೇಶಿಕ ಅಮೆರಿಕನ್ ಸಾಲದಾತರು ಕುಸಿದಿದ್ದರಿಂದ ಮಾರ್ಚ್ 2020 ರಲ್ಲಿ ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳ ನಂತರ ಬುಲಿಯನ್ ಕಳೆದ ವಾರ 6.5% ರಷ್ಟು ಏರಿಕೆ ಕಂಡಿದೆ.

ಮಧ್ಯಾಹ್ನ 1:23 ಸಮಯದಲ್ಲಿ ಎಂಸಿಎಕ್ಸ್ ಬೆಳ್ಳಿ ದರವು ಏರಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿಗೂ 69,100 ರೂಪಾಯಿಯಾಗಿದೆ. ಸುಮಾರು 599 ರೂಪಾಯಿ ಅಥವಾ ಶೇಕಡ 0.87ರಷ್ಟು ಹೆಚ್ಚಳವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಮ ಜ್ಯುವೆಲ್ಲರಿಯ ಎಂಡಿ ಕಾಲಿನ್ ಶಾ, ಚಿನ್ನದ ದರವು ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಇದು ಪ್ರಮುಖವಾಗಿ ಆರ್ಥಿಕ ಬೆಳವಣಿಗೆ ಕುಸಿತ, ಬಡ್ಡಿದರ ಕುಸಿತದ ಪ್ರಮುಖ ಲಕ್ಷಣವಾಗಿದೆ. ಮುಂದಿನ ತಿಂಗಳುಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ಸ್ ಮಧ್ಯಾಹ್ನ 12:55 ರ ಸುಮಾರಿಗೆ 60,280 ರೂಪಾಯಿ ವಹಿವಾಟಿಗೆ ಮಾರಾಟವಾಗುತ್ತಿದೆ. ₹ 897 ಅಥವಾ 1.51 ರಷ್ಟು ಹೆಚ್ಚಾಗಿದೆ. ಎಂಸಿಎಕ್ಸ್ ಬೆಳ್ಳಿ ಬೆಲೆಗಳು ಕೂಡ ಏರಿಕೆಯಾಗಿ ಪ್ರತಿ ಕೆಜಿಗೆ ₹ 69,100 ರೂಪಾಯಿಗೆ ಮಾರಾಟವಾಗುತ್ತಿದೆ. ಮಧ್ಯಾಹ್ನ 1:23 ಕ್ಕೆ ₹ 599 ಅಥವಾ 0.87 ರಷ್ಟು ಹೆಚ್ಚಾಗಿದೆ.
ಚಿನ್ನದ ಬೆಲೆಗಳು ಗರಿಷ್ಠ ಮಟ್ಟವನ್ನು ಮುಟ್ಟುತ್ತಿರುವುದು ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸಲು ವ್ಯವಸ್ಥೆಗೆ ಸಹಾಯ ಮಾಡಲು ಸಾಕಷ್ಟು ಲಿಕ್ವಿಡಿಟಿಯೊಂದಿಗೆ ಕಡಿಮೆ ಬಡ್ಡಿದರಗಳು ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಸಂಕೇತವಾಗಿದೆ ಎಂದು ಕಾಮಾ ಜ್ಯುವೆಲರಿ ಎಂಡಿ ಕಾಲಿನ್ ಶಾ ಹೇಳಿದ್ದಾರೆ.
ಆಲ್ಫಾ ಕ್ಯಾಪಿಟಲ್‌ನ ಸಹ-ಸಂಸ್ಥಾಪಕ ಡಾ ಮುಖೇಶ್ ಜಿಂದಾಲ್, "ಯುಎಸ್ ಡಾಲರ್‌ಗೆ ಅನುಗುಣವಾಗಿ ಚಿನ್ನದ ದರವು ಏರಿಳಿತ ಕಾಣುವ ಸಾಧ್ಯತೆಯಿದೆ. ಯುಎಸ್‌ಡಿ ಇಂಡೆಕ್ಸ್‌ನಿಂದಾಗಿ ಚಿನ್ನದ ಮೇಲೆ ನೆಗೆಟಿವ್ ಪ್ರಭಾವ ಉಂಟಾಗುತ್ತದೆ. ಯುಎಸ್ ಡಾಲರ್ ಇಂಡೆಕ್ಸ್ ಇಳಿಕೆಯಾಗುವಾಗ ಚಿನ್ನದ ದರವು ಏರಿಕೆಯಾಗುತ್ತದೆ. ಯುಎಸ್ ಡಾಲರ್ ಇಂಡೆಕ್ಸ್ ಅಕ್ಟೋಬರ್ 22ರಿಂದ ಬಾರಿ ಇಳಿಕೆಯಾಗುತ್ತಿದೆ. ಇದರಿಂದಾಗಿ ಚಿನ್ನದ ದರವು ಅಕ್ಟೋಬರ್ 22ರಿಂದ ಏರಿಕೆಯಾಗುತ್ತಿದೆ," ಎಂದು ತಿಳಿಸಿದ್ದಾರೆ.












Click it and Unblock the Notifications