Gold Price on Aug 3rd: ವಾರಾಂತ್ಯಕ್ಕೆ ಗ್ರಾಹಕರಿಗೆ ಚಿನ್ನದ ಬೆಲೆ ಏರಿಕೆ ಶಾಕ್! ಇಂದಿನ ಚಿನ್ನ-ಬೆಳ್ಳಿ ದರಪಟ್ಟಿ
ಭಾರೀ ಬೇಡಿಕೆ ಸೃಷ್ಟಿಸಿಕೊಳ್ಳುತ್ತಿರುವ ಚಿನ್ನವು ಕಳೆದ ವಾರದಲ್ಲಿ ಎರಡು ಭಾರಿ ಭರ್ಜರಿ ಏರಿಕೆ ಕಂಡಿತ್ತು. ಇದೀಗ ಭಾನುವಾರ ಸಹ ವಾರಾಂತ್ಯಕ್ಕೆ ತನ್ನ ದರ ಮತ್ತಷ್ಟು ಹೆಚ್ಚಿಸಿಕೊಳ್ಳುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ ಹಾಗೂ 24 ಕ್ಯಾರಟ್ನ 10 ಗ್ರಾಂ ಬಂಗಾರದ ದರ ಮತ್ತೆ ಗಗನಕ್ಕೇರಿದೆ. ಇಂದು ಬೆಂಗಳೂರು, ಕರ್ನಾಟಕ ಸೇರಿದಂತೆ ನಿಮ್ಮ ಊರುಗಳಲ್ಲಿ ಎಷ್ಟಿದೆ? ದರಪಟ್ಟಿ ವಿವರ..
ಬೆಂಗಳೂರಿನಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನಕ್ಕೆ 92,900 ರೂಪಾಯಿ ಇದ್ದು, 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,01,350 ರೂಪಾಯಿಗೆ ಹೆಚ್ಚಾಗಿದೆ. 24 ಕ್ಯಾರಟ್ನ ಒಂದು ಗ್ರಾಂ ಚಿನ್ನಕ್ಕೆ ಇಂದು 153 ರೂಪಾಯಿ ಹಾಗೂ 24 ಕ್ಯಾರಟ್ನ ಒಂದು ಗ್ರಾಂಗೆ 140 ರೂಪಾಯಿ ಹೆಚ್ಚಳವಾಗಿದೆ. 100 ಗ್ರಾಂ ದರ ಬೆಳ್ಳಿಯು 11,300 ರೂಪಾಯಿ ಇದೆ ಎಂದು ಇಂದಿನ ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.

ವರಮಹಾಲಕ್ಷ್ಮೀ ಹಬ್ಬ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಲಿರುವ ವಿವಾಹ ಇನ್ನಿತರ ಸಮಾರಂಭಗಳ ಹೊತ್ತಿಗೆ ಚಿನ್ನಕ್ಕೆ ಮತ್ತಷ್ಟು ಡಿಮ್ಯಾಂಡ್ ಬರಲಿದ್ದು, ಆ ಹೊತ್ತಿಗೆ ದರದಲ್ಲಿ ಭಾರೀ ಏರಿಕೆ ಆಗುವ ಸಾಧ್ಯತೆ ಇದೆ. ಇಂದಿನ ಚಿನ್ನ ಹಾಗೂ ಬೆಳ್ಳಿ ದರ ವಿವರ ಹೀಗಿದೆ.
ಬೆಂಗಳೂರಲ್ಲಿ ಚಿನ್ನ-ಬೆಳ್ಳಿ ದರ
* 22 ಕ್ಯಾರಟ್ 10 ಗ್ರಾಂ ಗೋಲ್ಡ್ ದರ : ₹92,915
* 24 ಕ್ಯಾರಟ್ 10 ಗ್ರಾಂ ಗೋಲ್ಡ್ ದರ : ₹92,915
* ಬೆಳ್ಳಿ ದರ 100 ಗ್ರಾಂಗೆ: ₹11,300 ರಿಂದ ₹12,300
ಪ್ರಮುಖ ಸಿಟಿಗಳಲ್ಲಿ 22k ಗೋಲ್ಡ್ ರೇಟ್
* ಬೆಂಗಳೂರು: ₹92,915
* ದೆಹಲಿ: ₹93,073
* ಮುಂಬೈ: ₹92,927
* ಚೆನ್ನೈ: ₹92,921
* ಕೋಲ್ಕತಾ: ₹92,925
* ಪುಣೆ: ₹92,933
* ಅಹಮದಾಬಾದ್: ₹91,447
* ಹೈದರಾಬಾದ್: ₹91,474
ಪ್ರಮುಖ ಸಿಟಿಗಳಲ್ಲಿ 24k ಗೋಲ್ಡ್ ರೇಟ್
* ದೆಹಲಿ: ₹1,01,523
* ಮುಂಬೈ: ₹1,01,377
* ಬೆಂಗಳೂರು: ₹1,01,365
* ಚೆನ್ನೈ: ₹1,01,371
* ಕೋಲ್ಕತ್ತಾ: ₹1,01,375
(ವಿಶೇಷ ಸೂಚನೆ: ಚಿನ್ನ ಹಾಗೂ ಬೆಳ್ಳಿ ದರದಲ್ಲಿ ನಗರದಿಂದ ನಗರಕ್ಕೆ, ಮಳಿಗೆಯಿಂದ ಮಳಿಗೆಯಲ್ಲಿ ಕೊಂಚ ಬದಲಾವಣೆ ಇರುತ್ತದೆ. ಈ ಬದಲಾವಣೆಗೆ ಅಂಕಿ ಸಂಖ್ಯೆಗಳಿಗೆ ಒನ್‌ಇಂಡಿಯಾ ವೆಬ್‌ಸೈಟ್ ಜವಾಬ್ದಾರಿ ಅಲ್ಲ. ಈ ಸುದ್ದಿ ನಿಮ್ಮ ಮಾಹಿತಿಗೆ ಮಾತ್ರವೇ ಆಗಿರುತ್ತದೆ)












Click it and Unblock the Notifications