Gold Price: ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ ಕಾಣುತ್ತಾ? ಆಭರಣ ಪ್ರಿಯರಿಗೆ ಭರ್ಜರಿ ಸುದ್ದಿ!

ಚಿನ್ನ.. ಚಿನ್ನ.. ಚಿನ್ನ.. ಹೀಗೆ ಚಿನ್ನ ಅಂದ್ರೆ ಆಭರಣ ಪ್ರಿಯರಿಗೆ ಸಿಕ್ಕಾಪಟ್ಟೆ ಖುಷಿಯಾಗುತ್ತೆ. ಆದರೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದ ಕಾರಣಕ್ಕೆ ಆಭರಣ ಪ್ರಿಯರು ಬೇಸರ ಮಾಡಿಕೊಂಡು, ಯಾವಾಗ ಚಿನ್ನದ ಬೆಲೆ ಕಡಿಮೆ ಆಗುತ್ತೆ ಅಂತಾ ಕಾಯುತ್ತಿದ್ದರು. ಇದೇ ಸಮಯದಲ್ಲಿ ದಿಢೀರ್ ಕುಸಿದು ಬೀಳಲು ಆರಂಭಿಸಿದ ಚಿನ್ನ ಇದೀಗ ಭಾರಿ ಪ್ರಮಾಣದಲ್ಲೇ ಕುಸಿತ ಕಂಡಿದೆ. ಹಾಗಿದ್ರೆ, ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ ಕಾಣುತ್ತಾ? ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ!

ಚಿನ್ನದ ಬೆಲೆಯಲ್ಲಿ ಸತತವಾಗಿ ಕುಸಿತ ಕಂಡುಬಂದ ಹಿನ್ನೆಲೆ ಆಭರಣ ಪ್ರಿಯರಿಗೆ ಒಂದಷ್ಟು ನೆಮ್ಮದಿ ಈಗ ಸಿಕ್ಕಂತಾಗಿದೆ. ಯಾಕಂದ್ರೆ ಚಿನ್ನದ ಬೆಲೆ ಕೈಗೆ ಸಿಗದಷ್ಟು ಎತ್ತರಕ್ಕೆ ಹೋಗಿತ್ತು, ಅಲ್ಲದೆ ಚಿನ್ನ ಇಷ್ಟೊಂದು ದುಬಾರಿ ಆಗುತ್ತಿದೆ ಎಂಬುದು ಜನರ ನಿದ್ದಗೆಡಿಸಿತ್ತು. ಹೀಗಾಗಿ ಮುಂದೆ ಹೇಗೆ? ಮದುವೆ & ಶುಭಕಾರ್ಯ ನಡೆಸಲು ಚಿನ್ನ ಖರೀದಿ ಮಾಡಲು ಆಗುತ್ತದಾ? ಎಂಬ ಪ್ರಶ್ನೆ ಕೂಡ ಮೂಡಿತ್ತು. ಆದರೆ ಈಗ ಬಂಗಾರದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದು ಬೀಳುತ್ತಿದೆ.

Gold Price May Be Reach To 50000 Rupees After Heavy Decreasing In Price On November 2024

ಚಿನ್ನ 50,000 ರೂಪಾಯಿಗೆ ಕುಸಿತ?

ಬಂಗಾರ ಅಂದ್ರೆ ಯಾರಿಗೆ ಇಷ್ಟವಾಗಲ್ಲ ಹೇಳಿ? ಎಲ್ಲರ ಗಮನ ಸೆಳೆಯುವ ಚಿನ್ನ ಸಾಕಷ್ಟು ಡಿಮ್ಯಾಂಡ್ ಇರುವ ವಸ್ತು. ಇದೇ ಕಾರಣಕ್ಕೆ ಚಿನ್ನ ಅಂದ್ರೆ ಸಾಕಷ್ಟು ಇಷ್ಟಪಡುತ್ತಾರೆ ಈ ನಮ್ಮ ಭಾರತೀಯರು. ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಾಗಿ ಭಾರತದಲ್ಲೇ ಚಿನ್ನ ಖರೀದಿ ಭರಾಟೆ ನಡೆಯುತ್ತದೆ.

ವಿದೇಶಗಳಲ್ಲಿ ಚಿನ್ನವನ್ನ ಗೋಲ್ಡ್ ಬಾರ್ ರೂಪದಲ್ಲಿ ಸಂಗ್ರಹಿಸಿಟ್ಟು ಕಷ್ಟದ ಕಾಲದಲ್ಲಿ ಬಳಸಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಆಭರಣಗಳ ರೂಪದಲ್ಲಿ ಚಿನ್ನ ಸಂಗ್ರಹ ಮಾಡುತ್ತಾರೆ. ಅದರಲ್ಲೂ ಮದುವೆ & ಶುಭ ಕಾರ್ಯಕ್ರಮಗಳಿಗೆ ಚಿನ್ನ ಬೇಕೆ ಬೇಕು. ಹೀಗಿದ್ದಾಗಲೇ ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ ಕಾಣುತ್ತಾ?

ಹಬ್ಬದ ಸಮಯದಲ್ಲಿ ಭಾರಿ ಏರಿಕೆ!

ದೀಪಾವಳಿ ಲಕ್ಷ್ಮೀ ಪೂಜೆ ಸಮಯದಲ್ಲಿ ಚಿನ್ನ ಖರೀದಿ ಮಾಡಬೇಕು ಅಂತಾ ಜನ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಮಧ್ಯಮ ವರ್ಗದ ಕನಸು ಈಡೇರಲೇ ಇಲ್ಲ. ಯಾಕಂದ್ರೆ, ಚಿನ್ನವು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಕಾರಣಕ್ಕೆ ದೀಪಾವಳಿ & ದಸರಾ ಹಬ್ಬದಲ್ಲಿ ಬಂಗಾರ ಹಾಗೂ ಬೆಳ್ಳಿ ಬೆಲೆ ಭಾರಿ ಏರಿಕೆ ಕಂಡು, ಖರೀದಿ ಮಾಡಲು ಕಷ್ಟವಾಗಿತ್ತು. ಆದ್ರೆ ದೀಪಾವಳಿ & ದಸರಾ ಹಬ್ಬ ಮುಗಿದ ತಕ್ಷಣ ಚಿನ್ನ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. 24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಈಗ 75,760 ರೂಪಾಯಿಗೆ ಮಾರಾಟ ಆಗುತ್ತಿದೆ.

ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ!

ಹಾಗೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿರುವ ಕಾರಣಕ್ಕೆ ಈಗ ಪ್ರತಿ 10 ಗ್ರಾಂಗೆ 69,450 ರೂಪಾಯಿಗೆ ಮಾರಾಟ ಆಗುತ್ತಿದೆ. ಅದರಲ್ಲೂ 22 ಕ್ಯಾರೆಟ್‌ನ ಆಭರಣ ಚಿನ್ನದ ಬೆಲೆಯು ಮತ್ತಷ್ಟು ಕುಸಿತ ಸಾಧ್ಯತೆ ದಟ್ಟವಾಗಿದೆ. ಇನ್ನೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಕೂಡ ಭಾರಿ ಇಳಿಕೆ ಕಂಡು ಬಂದಿದ್ದು, ಬೆಳ್ಳಿಯ ಬೆಲೆ ಪ್ರತಿ 1 ಕೆಜಿಗೆ ಬರೋಬ್ಬರಿ 89,500 ರೂಪಾಯಿಗೆ ತಲುಪಿದೆ. ಹೀಗಾಗಿ ಬಂಗಾರದ ಬೆಲೆ 50 ಸಾವಿರ ರೂಪಾಯಿ & ಬೆಳ್ಳಿ ಬೆಲೆಯು 75 ಸಾವಿರ ರೂಪಾಯಿ ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ.

ಕುಸಿದು ಬೀಳುತ್ತಿದೆ ಚಿನ್ನದ ಬೆಲೆ!

ಚಿನ್ನ ಅಮೂಲ್ಯ ವಸ್ತು, ಈ ಕಾರಣಕ್ಕೆ ಚಿನ್ನಕ್ಕೆ ಅತ್ಯುನ್ನತ ಸ್ಥಾನ ನೀಡಿದ್ದ ನಮ್ಮ ಪೂರ್ವಿಕರು ಅದನ್ನ ಜೋಪಾನ ಮಾಡಿಕೊಂಡು ಬಂದರು. ಹೀಗಿದ್ದಾಗ ಈ ಆಧುನಿಕ ಕಾಲಘಟ್ಟದಲ್ಲಿ ಚಿನ್ನ & ಬೆಳ್ಳಿಗೆ ಮತ್ತಷ್ಟು ಮಹತ್ವ ಬಂದಿದೆ. ಅದರಲ್ಲೂ, ಆಧುನಿಕ ಕಾಲದಲ್ಲಿ ಅತ್ಯಗತ್ಯ ಆಗಿರುವ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೂ ಚಿನ್ನ ಅತ್ಯಗತ್ಯ. ಆಭರಣ ಪ್ರಿಯರಿಗೂ ಚಿನ್ನದ ಮೇಲೆ ಪ್ರೀತಿ, ಹೂಡಿಕೆ ಮಾಡುವವರಿಗೆ ಕೂಡ ಚಿನ್ನವೇ ಬೆಸ್ಟ್ & ಮೊದಲ ಆಯ್ಕೆ. ಹೀಗೆ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇರುವಾಗಲೇ ಇದೀಗ ಹಳದಿ ಲೋಹ ಕುಸಿದು ಬೀಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+