Gold Price: ಚಿನ್ನದ ಬೆಲೆ ಮುಗಿಲು ಮುಟ್ಟುತ್ತಿದೆ ನೋಡಿ!
ಚಿನ್ನಕ್ಕೆ ಸಿಕ್ಕಾಪಟ್ಟೆ ಬೆಲೆ ಬಂದಿದೆ, ಹೀಗಾಗಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿದೆ. ಭಾರತೀಯರು ಕೂಡ ಚಿನ್ನದ ಮೇಲೆ ಹೂಡಿಕೆ ಮಾಡಲು ಮುಗಿಬೀಳುತ್ತಿರುವ ಕಾರಣಕ್ಕೆ, ಇದೀಗ ಹೊಸ ಇತಿಹಾಸ ಬರೆದಿದೆ ಚಿನ್ನದ ಬೆಲೆ. ಅದ್ರಲ್ಲೂ ಕಳೆದ 2 ದಿನಗಳ ಕಾಲ ಚಿನ್ನದ ಬೆಲೆ ಸತತ ಏರಿಕೆ ಕಂಡಿದೆ. ಚಿನ್ನದ ಬೆಲೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಚಿನ್ನದ ಬೆಲೆ ಕಳೆದ 1 ತಿಂಗಳಿಂದಲೂ ಭಾರಿ ಏರಿಕೆ ಕಾಣುತ್ತಿದೆ. ಈ ಪೈಕಿ ಸತತ ಎರಡು ದಿನ ಭರ್ಜರಿ ಏರಿಕೆ ಆದ ಚಿನ್ನದ ಬೆಲೆ ಈಗ ಮುಗಿಲು ಮುಟ್ಟಿದೆ. ಪ್ರತಿ 10 ಗ್ರಾಂಗೆ ಸಾರ್ವಕಾಲಿಕ ದಾಖಲೆ ಮುಟ್ಟಿ 70,000 ರೂಪಾಯಿ ಗಡಿ ದಾಟಿದೆ. ಹಾಗೇ ಆಭರಣ ಚಿನ್ನದ ಬೆಲೆ ಇದೀಗ 70 ಸಾವಿರ ರೂಪಾಯಿ ಗಡಿ ದಾಟಿದೆ. ಈ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಿದವರ ಮುಖದಲ್ಲಿ ಮಂದಹಾಸ ಮೂಡಿದ್ದು, ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದೇ ಸಮಯದಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡಲು ಸಿದ್ಧವಿದ್ದ ಜನರಿಗೆ ಇದರಿಂದ ಆಘಾತ ಸಿಕ್ಕಿದೆ. ಹಾಗಾದರೆ ಯಾವ ಯಾವ ನಗರದಲ್ಲಿ ಎಷ್ಟಿದೆ ಚಿನ್ನದ ಬೆಲೆ? ಬನ್ನಿ ತಿಳಿಯೋಣ.

ಚಿನ್ನದ ಬೆಲೆಯ ಸಂಪೂರ್ಣ ಮಾಹಿತಿ
ಇದೀಗ ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 64,600 ರೂಪಾಯಿ ಬೆಲೆ ಇದ್ದು, 24 ಕ್ಯಾರೆಟ್ ಚಿನ್ನಕ್ಕೆ ಬೆಂಗಳೂರಲ್ಲಿ 70,470 ಬೆಲೆ ಇದೆ. ಹಾಗೇ ಚೆನ್ನೈ ನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 65,450 ಮತ್ತು 24 ಕ್ಯಾರೆಟ್ ಚಿನ್ನಕ್ಕೆ 71,400 ರೂಪಾಯಿ ಇದೆ. ದೆಹಲಿ ನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 66,750 ರೂಪಾಯಿ ಬೆಲೆ ಇದ್ದು, 24 ಕ್ಯಾರೆಟ್ ಚಿನ್ನಕ್ಕೆ 70,620 ಬೆಲೆ ಇದೆ. ಹೈದರಾಬಾದ್ ನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 64,600 ರೂಪಾಯಿ ಬೆಲೆ ಇದ್ದು, 24 ಕ್ಯಾರೆಟ್ ಚಿನ್ನಕ್ಕೆ 70,470 ಬೆಲೆ, ಕೋಲ್ಕತ್ತಾ ನಗರದಲ್ಲಿ 61,700 ಸಾವಿರ ಮತ್ತು 70,470 ಸಾವಿರ ರೂಪಾಯಿ ಬೆಲೆ ಇದ್ರೆ, ಮುಂಬೈ ಮಹಾನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 64,600 ರೂಪಾಯಿ ಬೆಲೆ ಇದ್ದು, 24 ಕ್ಯಾರೆಟ್ ಚಿನ್ನಕ್ಕೆ 70,470 ಬೆಲೆ ಇದೆ.
ಅಮೂಲ್ಯ ವಸ್ತು ಚಿನ್ನ!
ಸಾವಿರಾರು ವರ್ಷಗಳಿಂದ ಕೂಡ ಚಿನ್ನ ಒಂದು ಅಮೂಲ್ಯ ವಸ್ತು ವಾತಾವರಣದಲ್ಲಿ ಅತಿ ಬೇಗ ಬೇರೆ ವಸ್ತುಗಳ ಜೊತೆ ಬೆರೆಯದ ಕಾರಣಕ್ಕೆ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಹಾಗೂ ಈ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಶುರುವಾದ್ರೆ ಚಿನ್ನಕ್ಕೆ ಬೇಡಿಕೆಯು ಹೆಚ್ಚಾಗುತ್ತದೆ. ಈಗ ಅಂತಹದ್ದೇ ಸ್ಥಿತಿ ನಿರ್ಮಾಣವಾಗಿದ್ದು ಜಾಗತಿಕವಾಗಿ ಎರಡು ಭೀಕರ ಯುದ್ಧವು ನಡೆಯುತ್ತಿವೆ. ಒಂದು ಕಡೆ ರಷ್ಯಾ & ಉಕ್ರೇನ್ ಹಾಗೂ ಇಸ್ರೇಲ್ & ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿದೆ. ಇದು ಕೂಡ ಚಿನ್ನದ ಬೆಲೆ ಏರಿಕೆ ಮೇಲೆ ಪ್ರಭಾವ ಬೀರುತ್ತಿದೆ ಎನ್ನಲಾಗುತ್ತಿದೆ.
ಅಮೆರಿಕದಲ್ಲಿ ಅತಿಹೆಚ್ಚು ಚಿನ್ನ ಇದೆ!
ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಇರುವುದು ಅಮೆರಿಕದ ಬಳಿ. ಹೀಗೆ ಆರ್ಥಿಕವಾಗಿ ಕೂಡ ಈ ದೇಶ ಮುಂದೆ ಇದ್ದು, ಹಾಗೆಯೇ ತನ್ನ ಬಳಿ ಜಗತ್ತಿನ ಅತಿಹೆಚ್ಚು ಚಿನ್ನವನ್ನು ಅಮೆರಿಕವು ಇಟ್ಟುಕೊಂಡಿದೆ. ಈ ಕಾರಣಕ್ಕೆ ಚಿನ್ನದ ಬೆಲೆ ಏರಿಕೆಯಲ್ಲಿ ಅಮೆರಿಕದ ಘಟನಾವಳಿ ಕೂಡ ಪ್ರಭಾವ ಬೀರುತ್ತವೆ. ಹಾಗೆ ಅರಬ್ ದೇಶಗಳಲ್ಲೂ ಚಿನ್ನದ ಬಳಕೆ ಮತ್ತು ಶೇಖರಣೆ ಹೆಚ್ಚು ಎನ್ನಬಹುದು. ಇನ್ನು ಆಭರಣ ಪ್ರಿಯ ಭಾರತೀಯರು ಚಿನ್ನವನ್ನು ಹೆಚ್ಚು ಇಷ್ಟಪಡುತ್ತಾರೆ ಅಂತಾ ಕೂಡ ಹೇಳಬಹುದು. ಹೀಗೆ ಇಡೀ ಜಗತ್ತಿನಲ್ಲಿ ಚಿನ್ನ ಒಂದಲ್ಲ ಒಂದು ರೀತಿಯಲ್ಲಿ ಬೇಕೆ ಬೇಕು!












Click it and Unblock the Notifications