Gold Price: ಚಿನ್ನದ ಬೆಲೆ 10 ಗ್ರಾಂಗೆ ಭರ್ಜರಿ 800 ರೂಪಾಯಿ ಏರಿಕೆ, ಈಗ ಎಷ್ಟಿದೆ ಬೆಲೆ?
ಚಿನ್ನ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿರುವ ಕಾರಣಕ್ಕೆ ಇದೀಗ ಸಂಚಲನ ಸೃಷ್ಟಿಯಾಗಿದೆ. ಚಿನ್ನದ ಬೆಲೆ ಇಂದು ಒಂದೇ ದಿನ ಪ್ರತಿ 10 ಗ್ರಾಂಗೆ ಭರ್ಜರಿ 800 ರೂಪಾಯಿ ಏರಿಕೆ ಆಗಿದ್ದು, ಆಭರಣ ಪ್ರಿಯರಿಗೆ ಈ ಸುದ್ದಿ ದೊಡ್ಡ ಆಘಾತ ನೀಡಿದೆ. ಯಾಕಂದ್ರೆ ಇನ್ನೇನು ಮದುವೆ ಸೀಸನ್ ಮುಗಿದು ಹೋಗಿದ್ದು, ಈಗ ಚಿನ್ನದ ಬೆಲೆ ಕುಸಿತ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ಜನ ಇದ್ದರು. ಆದರೆ ಈಗ ಭಾರಿ ಏರಿಕೆ ಕಂಡಿರುವ ಚಿನ್ನ ಇದೀಗ ಎಷ್ಟಿದೆ? ಹಾಗೇ ಚಿನ್ನದ ಬೆಲೆ ಏರಿಕೆಗೆ ಕಾರಣ ಏನು?
ಚಿನ್ನಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಕಾರಣ ಈಗ ಪ್ರತಿ 10 ಗ್ರಾಂಗೆ ಚಿನ್ನ ಭರ್ಜರಿ 800 ರೂಪಾಯಿ ಏರಿಕೆ ಕಂಡಿದೆ. ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುವ ನಿರೀಕ್ಷೆಯು ಕಳೆದ ಕೆಲವು ದಿನಗಳಿಂದ ಮೂಡಿತ್ತು. ಹೀಗಿದ್ದಾಗ ದಿಢೀರ್ ಚಿನ್ನ ಬೆಲೆ, ಪ್ರತಿ 10 ಗ್ರಾಂಗೆ 800 ರೂಪಾಯಿ ಹಾಗೂ ಪ್ರತಿ 100 ಗ್ರಾಂಗೆ 8,000 ರೂಪಾಯಿ ಏರಿಕೆ ಕಂಡಿದ್ದು ಹೇಗೆ? ಚಿನ್ನದ ಬೆಲೆ ಇದೀಗ ಎಷ್ಟು ಸಾವಿರ ರೂಪಾಯಿ ಇದೆ? ಮಾಹಿತಿ ತಿಳಿಯಲು ಮುಂದೆ ಓದಿ.

ಚಿನ್ನದ ಬೆಲೆ 72,850 ರೂಪಾಯಿ!
ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದ್ರೆ ಚಿನ್ನ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿ ಬಿಟ್ಟಿದೆ. ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆಯು ಬರುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಆಭರಣ ಚಿನ್ನ ಅಂತಾ ಕರೆಯಲಾಗುವ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಪ್ರತಿ 10 ಗ್ರಾಂಗೆ ಭರ್ಜರಿ 800 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 72,850 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ ಎಷ್ಟು ರೂಪಾಯಿ ಇದೆ?
ಮತ್ತೊಂದು ಕಡೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 870 ರೂಪಾಯಿ ಏರಿಕೆಯ ಕಂಡು, ಇದೀಗ 79,470 ರೂಪಾಯಿಗೆ ತಲುಪಿದೆ. ಹಾಗೇ ಚಿನ್ನದ ರೀತಿ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಬೆಳ್ಳಿ ಬೆಲೆ ಆಕಾಶ ಮುಟ್ಟುತ್ತಿದೆ.
ಬೆಳ್ಳಿ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ. ಸದ್ಯಕ್ಕೆ 95,500 ರೂಪಾಯಿ ಪ್ರತಿ 1 ಕೆಜಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ ಬೆಳ್ಳಿ. ಹಾಗೇ ಬೆಳ್ಳಿ ಬೆಲೆಯಲ್ಲಿನ ಭಾರಿ ಏರಿಕೆ ಕೂಡ ಆಭರಣ ಪ್ರಿಯರಲ್ಲಿ ದೊಡ್ಡ ಟೆನ್ಷನ್ ಕೊಡುತ್ತಿದೆ.












Click it and Unblock the Notifications