Gold Price: ಚಿನ್ನದ ಬೆಲೆ ಭರ್ಜರಿ ಇಳಿಕೆ, ಇಲ್ಲಿದೆ ಗುಡ್ ನ್ಯೂಸ್!
ಚಿನ್ನ ಖರೀದಿ ಮಾಡಬೇಕು ಎಂದು ಕಾಯುತ್ತಿರುವ ಮಹಿಳೆಯರಿಗೆ ಹಾಗೂ ಚಿನ್ನವನ್ನು ತುಂಬಾ ಇಷ್ಟಪಡುವ ಜನರಿಗೆ ಇಲ್ಲಿದೆ ಗುಡ್‌ನ್ಯೂಸ್. ಯಾಕಂದ್ರೆ ದಿಢೀರ್ ಚಿನ್ನದ ಬೆಲೆ ಇಳಿಕೆ ಆಗಿದೆ. ಹಾಗಾದ್ರೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ? ಸದ್ಯ ಚಿನ್ನವನ್ನ ಖರೀದಿ ಮಾಡಬಹುದಾ? ಬನ್ನಿ ತಿಳಿಯೋಣ.
ಏಪ್ರಿಲ್ ತಿಂಗಳಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆ ಬಂದಿತ್ತು, ಹಾಗೇ ಭರ್ಜರಿ ಏರಿಕೆಯನ್ನ ಕೂಡ ಕಂಡಿತ್ತು ಚಿನ್ನ. ಆದ್ರೆ ಇದೀಗ ನಿಧಾನವಾಗಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಈ ಮೂಲಕ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿದೆ. ಹೀಗಾಗಿ ಚಿನ್ನ ಖರೀದಿಗೆ ಕಾದು ಕುಳಿತಿದ್ದ ಚಿನ್ನ ಪ್ರಿಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಹಾಗಾದ್ರೆ ಈಗ ಚಿನ್ನದ ಬೆಲೆ ಎಷ್ಟಿದೆ? ಮುಂದೆ ಓದಿ.

ಯಾವ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಅಂದಹಾಗೆ ಈಗ ಭಾರತದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,550 ರೂಪಾಯಿ ತಲುಪಿದೆ. ಹಾಗೇ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 72,600 ರೂಪಾಯಿ ಆಗಿದೆ 100 ಗ್ರಾಂ ಬೆಳ್ಳಿ ಬೆಲೆ 8,400 ರುಪಾಯಿ ಇದೆ. ಬೆಂಗಳೂರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 66,550 ರೂಪಾಯಿ ಆಗಿದ್ದರೆ ಬೆಳ್ಳಿಯ ಬೆಲೆ 100 ಗ್ರಾಂಗೆ 8,350 ರೂಪಾಯಿ ಆಗಿದೆ. ಅದೇ ರೀತಿ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಅಂತಾ ನೋಡೋದಾದರೆ, ಬೆಂಗಳೂರಲ್ಲಿ 66,550 ರೂಪಾಯಿ, ಚೆನ್ನೈ ನಗರದಲ್ಲಿ 67,400 ರೂಪಾಯಿ, ಮುಂಬೈನಲ್ಲಿ 66,550 ರೂಪಾಯಿ, ದೆಹಲಿ ನಗರದಲ್ಲಿ 66,700 ರೂಪಾಯಿ ಇದೆ.
ಯುದ್ಧದ ಎಫೆಕ್ಟ್ ಇದು?
ಜಾಗತಿಕವಾಗಿ ಯುದ್ಧ ಶುರುವಾದಾಗ, ಮೊದಲು ಆ ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ & ಡೀಸೆಲ್ ಮೇಲೆ. ಯಾಕಂದ್ರೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ. ಹೀಗಾಗಿ ಯುದ್ಧ ಶುರುವಾದ ತಕ್ಷಣ, ಚಿನ್ನದ ರೂಪಕ್ಕೆ ತಮ್ಮ ಸಂಪತ್ತು ಅಂದರೆ ಹವಣವನ್ನು ಬದಲಾಯಿಸಿ ಸಂಗ್ರಹ ಮಾಡಲು ಜನ ಮುಂದಾಗುತ್ತಾರೆ. ಹಾಗೆ ದೇಶಗಳು ಕೂಡ ಅಪಾರ ಪ್ರಮಾಣದ ಚಿನ್ನವನ್ನ ಯುದ್ಧ ಸಮಯ ಬಂದಾಗ ಖರೀದಿ ಮಾಡುತ್ತವೆ, ಏಪ್ರಿಲ್ ತಿಂಗಳಲ್ಲಿ ಕೂಡ ಅದೇ ಆಗಿತ್ತು.
ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತೆ ಹಾಗೇ ಷೇರು ಮಾರುಕಟ್ಟೆಯ ಇತರ ಹೂಡಿಕೆಗಳು ಕುಸಿದು ಬೀಳುತ್ತವೆ. ಹೀಗಾಗಿ ಜನ ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಾರೆ. ಇದೇ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತೆ. ಹಾಗೆ ಇನ್ನೂ ಹಲವು ಕಾರಣಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಆಗುತ್ತವೆ. ಈಗ ಚಿನ್ನ 75,000 ರೂಪಾಯಿ ಗಡಿ ದಾಟಿದ್ದು, ಇನ್ನೇನು 1 ಲಕ್ಷ ರೂಪಾಯಿ ಗಡಿಯನ್ನೂ ದಾಟುವ ನಿರೀಕ್ಷೆ ಇದೆ.
ಚಿನ್ನ ಈಗ ಅಂತಾರಾಷ್ಟ್ರೀಯ ಕರೆನ್ಸಿ?
ಪ್ರಪಂಚದ ಮಟ್ಟದಲ್ಲಿ ಈಗ ಚಿನ್ನಕ್ಕೆ ಯಾಕೆ ಇಷ್ಟು ಬೆಲೆ ಬಂದಿದೆ ಎಂದರೆ, ಯುದ್ಧಗಳು ಶುರುವಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಇಲ್ಲವಾಗಿದ್ದು. ಈ ಕಾರಣಕ್ಕೆ ಈಗ ಚಿನ್ನದ ಮೇಲೆ ಜನರಿಗೆ ತುಂಬಾ ನಂಬಿಕೆ ಬಂದಿದೆ. ಹೀಗಾಗಿ ಜನರು ಕೂಡ ಚಿನ್ನ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಚಿನ್ನ ಸಾಕಷ್ಟು ಏರಿಕೆ ಕಂಡಿತ್ತು. ಆದರೆ, ಇದೀಗ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಇಸ್ರೇಲ್ & ಇರಾನ್ ಯುದ್ಧ ನಡೆಯಲ್ಲ ಎಂಬ ನಂಬಿಕೆ ಸಿಕ್ಕ ನಂತರ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಕೂಡ ಚಿನ್ನ ಖರೀದಿಯನ್ನು ಆರಾಮವಾಗಿ ಮಾಡಬಹುದು.
ಚಿನ್ನದ ಬೆಲೆ 1 ಲಕ್ಷ ರೂಪಾಯಿ ಆಗುತ್ತಾ?
ಚಿನ್ನ ಅನ್ನೋದು ಹೂಡಿಕೆ ಮಾಡುವವರಿಗೆ ಖಜಾನೆಯೇ ಎನ್ನುವಂತಾಗಿದೆ. ಯಾಕಂದ್ರೆ ಹಳದಿ ಲೋಹ ಅಂದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಯಾರಿಗೆ ಆದರೂ ಲಾಭ ಗ್ಯಾರಂಟಿ. ಹೀಗೆ ಚಿನ್ನ ಅನ್ನೋದು ಹೂಡಿಕೆದಾರರ ಜೇಬು ತುಂಬಿಸುವ ಅಕ್ಷಯ ಪಾತ್ರೆ ಆಗುತ್ತಿದೆ. ಆದರೆ ಚಿನ್ನ ಇಷ್ಟಪಡುವ ಮಹಿಳೆಯರಿಗೆ ಈ ವರ್ಷ ಆಘಾತ ಎದುರಾಗುವುದು ಗ್ಯಾರಂಟಿ ಅಂತಿದ್ದಾರೆ ತಜ್ಞರು. ಯಾಕಂದ್ರೆ ಚಿನ್ನದ ಬೆಲೆ ಈ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಹೆಚ್ಚಿದೆ. ಮತ್ತೊಂದು ಕಡೆ ಸದ್ಯದ ಸ್ಥಿತಿಯಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದು ಚಿನ್ನ ಇಷ್ಟಪಡುವ ಮಹಿಳೆಯರಿಗೆ ಹಾಗೂ ಚಿನ್ನ ಪ್ರಿಯರಿಗೆ ಸಖತ್ ಸುದ್ದಿ ನೀಡಿದಂತೆ ಆಗಿದೆ.
ಕುಸಿಯುತ್ತಿದೆ ಚಿನ್ನದ ಬೆಲೆ!
ಚಿನ್ನ ಅಂದ್ರೆ ಯಾರಿಗೆ ಇಷ್ಟ ಇರೋದಿಲ್ಲ ಹೇಳಿ? ಅದ್ರಲ್ಲೂ ಮಹಿಳೆಯರಿಗೆ ಚಿನ್ನ ಭಾರಿ ಇಷ್ಟ. ವಿಧ ವಿಧದ ಆಭರಣ ಹಾಕಿಕೊಂಡು, ಚಿನ್ನದ ಜೊತೆಗೆ ಮಿಂಚುವುದು ಮಹಿಳೆಯರ ಜೀವನದ ಮಹಾನ್ ಉದ್ದೇಶ. ಹೀಗಾಗಿ ಚಿನ್ನ ಎಷ್ಟೇ ಏರಿಕೆ ಕಂಡರೂ, ಚಿನ್ನದ ಖರೀದಿಗೆ ಭಾರತೀಯರು ಮುಗಿಬೀಳುತ್ತಾರೆ. ಆದರೆ ಈಗ ಬ್ರೇಕಿಂಗ್ ನ್ಯೂಸ್ ಒಂದು ಬಂದಿದೆ. ಅದು ಏನೆಂದರೆ, ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದ್ದು, 1000 ರೂಪಾಯಿ ಕಡಿಮೆ ಆಗಿದೆ! ಇದು ಚಿನ್ನ ಖರೀದಿ ಮಾಡಬೇಕು ಅಂತಾ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಅಲ್ಲದೆ ಇನ್ನು ಕೆಲವೇ ದಿನದಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆ ಇದೆ.
ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!
ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲಾ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಚಿನ್ನದ ಬೆಲೆ ಈ ವರ್ಷದ ಅಂತ್ಯಕ್ಕೆ, 1 ಲಕ್ಷ ರೂಪಾಯಿ ಆಸುಪಾಸಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು.
ಅಮೂಲ್ಯ ವಸ್ತು ಚಿನ್ನ!
ಸಾವಿರಾರು ವರ್ಷಗಳಿಂದ ಕೂಡ ಚಿನ್ನ ಒಂದು ಅಮೂಲ್ಯ ವಸ್ತು ವಾತಾವರಣದಲ್ಲಿ ಅತಿ ಬೇಗ ಬೇರೆ ವಸ್ತುಗಳ ಜೊತೆ ಬೆರೆಯದ ಕಾರಣಕ್ಕೆ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಹಾಗೂ ಈ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಶುರುವಾದ್ರೆ ಚಿನ್ನಕ್ಕೆ ಬೇಡಿಕೆಯು ಹೆಚ್ಚಾಗುತ್ತದೆ. ಈಗ ಅಂತಹದ್ದೇ ಸ್ಥಿತಿ ನಿರ್ಮಾಣವಾಗಿದ್ದು ಜಾಗತಿಕವಾಗಿ ಎರಡು ಭೀಕರ ಯುದ್ಧವು ನಡೆಯುತ್ತಿವೆ. ಒಂದು ಕಡೆ ರಷ್ಯಾ & ಉಕ್ರೇನ್ ಮತ್ತು ಇಸ್ರೇಲ್ & ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿದೆ. ಇದು ಕೂಡ ಚಿನ್ನದ ಬೆಲೆ ಏರಿಕೆ ಮೇಲೆ ಪ್ರಭಾವ ಬೀರುತ್ತಿದೆ ಎನ್ನಲಾಗುತ್ತಿದೆ. ಹೀಗಿದ್ದಾಗ ಚಿನ್ನ ತನ್ನ ಬೆಲೆಯಲ್ಲಿ ಏರಿಳಿತ ಮಾಡಿಕೊಳ್ಳುತ್ತಿದೆ.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು. ಇದು ಆಭರಣ ಪ್ರಿಯರಿಗೆ ಬೇಸರ ತರಿಸಿದರೂ, ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆ ಖುಷಿ ನೀಡುತ್ತಿದೆ.
ಹಳದಿ ಲೋಹ ಎಲ್ಲರಿಗೂ ಇಷ್ಟ!
ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. ಹೀಗಾಗಿಯೇ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ, ಹಳದಿ ಲೋಹ ಬೆನ್ನೆಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹ ಅಂದ್ರೆ ಚಿನ್ನ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ದಟ್ಟವಾಗಿದೆ.
ಆಭರಣ ಪ್ರಿಯರಿಗೆ ಚಿನ್ನವೇ ಚನ್ನ!
ಒಂದು ಕಡೆ ಹೂಡಿಕೆ ಮಾಡುವವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ ಆಗುತ್ತದೆ, ಆದರೂ ಸಾಮಾನ್ಯವಾಗಿ ಆಭರಣಗಳನ್ನ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಮಾತ್ರ ಸಂತಸವಾಗುತ್ತದೆ. ಹೀಗೆ ಚಿನ್ನದ ಬೆಲೆಯು ಕಳೆದ 1 ತಿಂಗಳಿಂದ ಭಾರಿ ಏರಿಳಿತವನ್ನು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಂಡು, ಆ ನಂತರದಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳುತ್ತದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಆಭರಣವನ್ನ ಕೊಳ್ಳುವವರಿಗೆ ಈ ತಿಂಗಳು ಮತ್ತಷ್ಟು ಸಿಹಿಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಈ ರೀತಿ ಚಿನ್ನದ ಏರುಪೇರು ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕತೆಯನ್ನೇ ಅಲುಗಾಡಿಸುತ್ತಿದೆ.
ಕಡಿಮೆ ಆಗುತ್ತಿದೆ ಚಿನ್ನದ ಬೆಲೆ!
ಚಿನ್ನದ ಬೆಲೆಯು ಇಳಿಕೆ ಕಂಡ ನಂತರ ಖರೀದಿ ಮಾಡೋಣ ಅಂತಾ ಕಾಯುತ್ತಿದ್ದ ಮಹಿಳೆಯರು ಸೇರಿದಂತೆ, ಚಿನ್ನ ಪ್ರಿಯರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆ ಒಂದೇ ಸಮನೆ ಏರಿಕೆ ಆಗುತ್ತಿದೆ ಅಂತಾ ಮಹಿಳೆಯರು & ಚಿನ್ನ ಖರೀದಿ ಮಾಡಬೇಕಿದ್ದವರು ಬೇಸರ ಹೊರಹಾಕಿದ್ದರು. ಆದರೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಕಡಿಮೆ ಆಗಿದೆ. ಮತ್ತೊಂದು ಕಡೆ ಇನ್ನೇನು ಅಕ್ಷಯ ತೃತೀಯ ಹತ್ತಿರ ಬಂದ ಕಾರಣಕ್ಕೆ ಆಭರಣ ಪ್ರಿಯರು ಕೂಡ ಚಿನ್ನವನ್ನು ಖರೀದಿ ಮಾಡೋಕೆ ಮುಗಿಬೀಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅಕ್ಷಯ ತೃತೀಯ ಬರಲಿದ್ದು, ಇದಕ್ಕಾಗಿ, ಆಭರಣಗಳ ಅಂಗಡಿ ಮಾಲೀಕರು ಕೂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗೇ ಭಾರಿ ಡಿಸ್ಕೌಂಟ್ ಕೂಡ ಘೋಷಿಸುತ್ತಿದ್ದಾರೆ.
ಚಿನ್ನ ಇದ್ದರೆ ಕಷ್ಟಕಾಲದ ಬಂಧು!
ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ, ಅದರಲ್ಲೂ ಆಭರಣಗಳನ್ನು ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಎಲ್ಲೂ ಹಣವನ್ನು ಹೊಂದಿಸಲು ಆಗದ ಸ್ಥಿತಿ ಬಂದಾಗ, ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅಡ ಇಟ್ಟು ಅಥವಾ ಚಿನ್ನ ಮಾರಿ ಹಣ ಪಡೆಯಬಹುದು. ಈ ಮೂಲಕ ತುರ್ತು ಸಮಯದಲ್ಲಿ ಜೀವ ಉಳಿಸೋದಕ್ಕೆ ಚಿನ್ನ ಸಹಾಯಕ. ಈ ಎಲ್ಲಾ ಕಾರಣಕ್ಕೆ ಚಿನ್ನ ಖರೀದಿ ಅಥವಾ ಚಿನ್ನದ ಮೇಲೆಯೇ ಈ ರೀತಿ ಹೆಚ್ಚಾಗಿ ಹೂಡಿಕೆ ಮಾಡಲು ಪ್ರಮುಖ ಕಾರಣ ಎನ್ನಲಾಗುತ್ತದೆ.
ಚಿನ್ನ ಇಲ್ಲದೆ ಏನೂ ನಡೆಯಲ್ಲ!
ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಅದೆಷ್ಟು ಮುಖ್ಯ ಎಂದರೆ, ಚಿನ್ನವು ಇಲ್ಲದೆ ಏನೂ ನಡೆಯಲ್ಲ ಎನ್ನಬಹುದು. ಯಾಕಂದ್ರೆ ಚಿನ್ನ ಆಭರಣವಾಗಿ ಮಾತ್ರವಲ್ಲ, ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಕೂಡ ಬಳಕೆ ಮಾಡಲಾಗುತ್ತೆ. ಮೊಬೈಲ್ ಸೇರಿದಂತೆ, ಹಲವು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಗೆ ಕೂಡ ಚಿನ್ನ ಬೇಕೆ ಬೇಕಾಗುತ್ತೆ. ಹೀಗಾಗಿಯೇ ಚಿನ್ನ ಈಗ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡಿದೆ. ಹೀಗೆಯೇ, ಎಲ್ಲಾ ಕಡೆಯಿಂದ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ, ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದ್ದು. ಮುಂದೆ ಇನ್ನಷ್ಟು ಏರಿಳಿತ ಕಾಣಬಹುದು ಅಂತಾರೆ ತಜ್ಞರು.
ಷೇರು ಮಾರುಕಟ್ಟೆಯಲ್ಲಿ ಚಿನ್ನದ ಹೂಡಿಕೆ
ಚಿನ್ನದ ಮೇಲೆ ಹಲವು ರೀತಿಯಲ್ಲಿ ಹೂಡಿಕೆ ಮಾಡಬಹುದು, ಒಂದು ಚಿನ್ನವನ್ನ ಖರೀದಿ ಮಾಡಿ ಅದರ ಮೇಲೆ ನೇರ ಹೂಡಿಕೆ ಮಾಡಬಹುದು. ಇದರ ಜೊತೆಗೆ 'ಗೋಲ್ಡ್ ಬಾಂಡ್' ಮೂಲಕ ಕೂಡ ಚಿನ್ನದ ಮೇಲೆ ಹೂಡಿಕೆ ಮಾಡಲು ಸೌಲಭ್ಯ ಇದೆ. ಹಾಗೇ ಈ ಹೂಡಿಕೆ ಮೂಲಕ ಲಾಭ ಕೂಡ ಪಡೆಯಬಹುದು ಅಂತಾರೆ ತಜ್ಞರು. ಹೀಗೆ ಚಿನ್ನವು ಹಲವು ರೀತಿ, ಹೂಡಿಕೆಗೆ ಜನರಿಂದ ಆಹ್ವಾನ ನೀಡುತ್ತದೆ. ಅದರಲ್ಲೂ ಭಾರತದಲ್ಲಿ ಅತ್ಯಂತ ನಂಬಿಕಸ್ಥ ಹೂಡಿಕೆ ವಿಭಾಗವಾಗಿ ಕೂಡ ಚಿನ್ನ ಆಧುನಿಕ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿದೆ. ನಮ್ಮಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಕೂಡ ಚಿನ್ನದ ಮೇಲಿನ ಹೂಡಿಕೆಯನ್ನ ಜನ ಹೆಚ್ಚಾಗಿ ನಂಬುತ್ತಾರೆ.












Click it and Unblock the Notifications