Gold Price: ಚಿನ್ನದ ಬೆಲೆ ಇಳಿಕೆ, ಬಂಗಾರ ಖರೀದಿ ಮಾಡುವವರಿಗೆ ಭರ್ಜರಿ ಸುದ್ದಿ!
ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗುತ್ತಿದ್ದು, ಸತತವಾಗಿ 3 ದಿನಗಳ ಕಾಲ ಏರಿಕೆ ಕಂಡಿದ್ದ ಬಂಗಾರದ ಬೆಲೆ ದಿಢೀರ್ ಕುಸಿತ ಕಂಡಿದೆ. ಮದುವೆ & ಶುಭ ಕಾರ್ಯಗಳು ಸೇರಿದಂತೆ ಈಗ ಹಬ್ಬಗಳು ಕೂಡ ಆರಂಭ ಆಗಿರುವ ಬೆನ್ನಲ್ಲೇ, ಚಿನ್ನದ ಬೆಲೆಯಲ್ಲಿ ಈ ರೀತಿ ಕುಸಿತ ಕೂಡ ದಾಖಲಾಗಿರುವುದು ಭಾರಿ ಗಮನ ಸೆಳೆದಿದೆ. ಹಾಗಾದ್ರೆ ಇದೀಗ ಬೆಂಗಳೂರು & ಕರ್ನಾಟಕದಲ್ಲಿ ಎಷ್ಟಿದೆ ಬಂಗಾರ & ಬೆಳ್ಳಿ ಬೆಲೆ? ಚಿನ್ನದ ಬೆಲೆಯನ್ನು ಇಲ್ಲಿ ತಿಳಿಯೋಣ ಬನ್ನಿ.
ಚಿನ್ನದ ಬೆಲೆ ಬರೀ ಒಡವೆ ಅಥವಾ ಆಭರಣಗಳ ಮೇಲೆ ಮಾತ್ರವಲ್ಲ, ದೇಶದ ಆರ್ಥಿಕತೆಯ ಮೇಲೆ ಕೂಡ ದೊಡ್ಡ ಪ್ರಮಾಣ ಪರಿಣಾಮ ಬೀರುತ್ತದೆ. ಚಿನ್ನ ಹಾಗೂ ಬೆಳ್ಳಿ ಇದೀಗ ಅದೆಷ್ಟು ಮುಖ್ಯ ಎಂದರೆ, ಚಿನ್ನ & ಬೆಳ್ಳಿ ಇಲ್ಲದೆ ಬಹುತೇಕ ವಸ್ತುಗಳನ್ನು ತಯಾರಿಸಲು ಆಗುವುದೇ ಇಲ್ಲ ಎನ್ನಬಹುದು. ಯಾಕಂದ್ರೆ ಚಿನ್ನ ಹಾಗೂ ಬೆಳ್ಳಿ ಆಭರಣವಾಗಿ ಮಾತ್ರವಲ್ಲ, ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಮೊಬೈಲ್ ಸೇರಿ ಹಲವು ಎಲೆಕ್ಟ್ರಾನಿಕ್ ಉಪಕರಣ ತಯಾರಿಕೆಗೆ ಕೂಡ ಚಿನ್ನ & ಬೆಳ್ಳಿ ಅತ್ಯಗತ್ಯ. ಹೀಗಾಗಿ ಚಿನ್ನ & ಬೆಳ್ಳಿ ಈಗ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡಿವೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿಯ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆ ಈಗ ಎಷ್ಟಿದೆ?
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 100 ಗ್ರಾಂಗೆ 1000 ರೂಪಾಯಿ ಕುಸಿತ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ 100 ರೂಪಾಯಿ ಕಡಿತವಾಗಿದೆ. ಆಭರಣ ಚಿನ್ನದ ಬೆಲೆ ಕುಸಿತದ ಬಳಿಕ ಪ್ರತಿ 10 ಗ್ರಾಂಗೆ 65,550 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದಿದೆ. ಕುಸಿತ ಕಂಡ ಬಳಿಕ 24 ಕ್ಯಾರೆಟ್ ಚಿನ್ನ ಬೆಲೆ, 100 ಗ್ರಾಂಗೆ 1,100 ರೂಪಾಯಿ ಇಳಿಕೆ ಕಂಡಿದೆ. ಹಾಗಾದರೆ ಬೆಳ್ಳಿಯ ಬೆಲೆ ಇದೀಗ ಎಷ್ಟಿದೆ ಮಾಹಿತಿ ಗೊತ್ತೆ? ಆ ಮಾಹಿತಿಗಾಗಿ ಮುಂದೆ ಓದಿ.
ಬೆಳ್ಳಿ ಬೆಲೆ ಕಥೆ ಏನು?
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,100 ರೂಪಾಯಿ ಇಳಿಕೆ ಕಂಡು, ಇಳಿಕೆ ನಂತರ ಪ್ರತಿ 10 ಗ್ರಾಂಗೆ 71,510 ರೂಪಾಯಿಗೆ ಮಾರಾಟ ಆಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ ಬೆಳ್ಳಿ ಪ್ರತಿ ಕೆಜಿಗೆ 80,000 ರೂಪಾಯಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ. ಶೀಘ್ರದಲ್ಲೇ ಆಭರಣ ಚಿನ್ನವು 10 ಗ್ರಾಂಗೆ 50000 ರೂಪಾಯಿಗೆ ಕುಸಿತ ಕಾಣುತ್ತಾ? ಎಂಬ ಕುತೂಹಲದಲ್ಲಿ ಚಿನ್ನ ಪ್ರಿಯರು ಕಾಯ್ತಿದ್ದಾರೆ. ಹಾಗೇ ಬೆಳ್ಳಿ ಬೆಲೆ ಕೂಡ ಮತ್ತಷ್ಟು ಇಳಿಕೆ ಕಾಣುವ ನಿರೀಕ್ಷೆ ಮನೆಮಾಡಿದೆ.












Click it and Unblock the Notifications