Gold Price: ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಹೆಚ್ಚಳ, ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಬೆಂಗಳೂರು ಫೆಬ್ರವರಿ 18: ಶಿವರಾತ್ರಿಗೂ ಮೊದಲು ಚಿನ್ನದ ದರದಲ್ಲಿ ಬದಲಾವಣೆ ಆಗಿದೆ. ಸ್ವಲ್ಪ ಸ್ವಲ್ಪವೇ ಏರಿಕೆ ಆಗುತ್ತಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದೆ. ಇದು ಚಿನ್ನ ಮತ್ತು ಬೆಳ್ಳಿ ಖರೀದಿ ಹಾಗೂ ಅದಕ್ಕಿರುವ ಬೇಡಿಕೆಯನ್ನು ಸೂಚಿಸುತ್ತಿದೆ. ಯಾವುದೇ ಹಬ್ಬ ಹರಿದಿನಗಳೂ ಬಂದರೂ ಚಿನ್ನ ಖರೀದಿಸುವವರು ಇದ್ದಾರೆ. ಸದ್ಯ ದೇಶದಲ್ಲಿ ಮದುವೆ ಸೀಸನ್ ಶುರುವಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ ಮತ್ತು ಬೆಲೆ ಎರಡು ಹೆಚ್ಚಾಗುತ್ತಿದೆ.
ಚಿನ್ನದ ಬೆಲೆಯು ಸತತವಾಗಿ ಏರಿಕೆ ಕಾಣುತ್ತಿದೆ. ಸೋಮವಾರ ಚಿನ್ನದ ಬೆಲೆ 5,500 ರೂಪಾಯಿ ಹೆಚ್ಚಾಗಿತ್ತು. ಇದು ಸಾಲದೆಂಬಂತೆ ಇಂದು ಮಂಗಳವಾರ (ಫೆ.18)ದಂದು ಮತ್ತೆ 3,300 ರೂಪಾಯಿ ಏರಿಕೆ ಆಗಿದೆ. ಚಿನ್ನದ ಬೆಲೆಯಲ್ಲಿ ಮಾತ್ರವೇ ಏರಿಕೆ ಆಗಿದ್ದು, ಬೆಳ್ಳಿ ದರವು ಯಥಾಸ್ಥಿತಿಯಲ್ಲಿದೆ ಎಂದು ಅಂಕಿ-ಅಂಶಗಳು ಮಾಹಿತಿ ನೀಡಿವೆ.

10 ಗ್ರಾಂ 22 ಕ್ಯಾರಟ್ ಚಿನ್ನ ಬೆಲೆ 79,300 ರೂಪಾಯಿಯಿಂದ ಇಂದು 79,700 ರೂಪಾಯಿಗೆ ಏರಿಕೆ ಆಗಿದೆ. ಇದೇ ಚಿನ್ನದ 100 ಗ್ರಾಂಗೆ 794000 ರೂ.ನಿಂದ 797000 ರೂ.ಗೆ ಏರಿಕೆ ಆಗಿದ್ದು, ಈ ಮೂಲಕ 3000 ರೂಪಾಯಿಗೆ ಏರಿಕೆ ಕಂಡಂತಾಗಿದೆ.
ಬಂಗಾರದ ಬೆಲೆ 3,300 ರೂಪಾಯಿ
10 ಗ್ರಾಂ 24 ಕ್ಯಾರಟ್ ಚಿನ್ನ ಬೆಲೆ 86,620 ರೂಪಾಯಿಯಿಂದ ಇಂದು 86,950 ರೂಪಾಯಿಗೆ ಏರಿಕೆ ಆಗಿದೆ. ಇದೇ ಚಿನ್ನದ 100 ಗ್ರಾಂಗೆ 7,66,500 ರೂ.ನಿಂದ 7,69,000 ರೂ.ಗೆ ಅಂದರೆ ಬರೋಬ್ಬರಿ 3,300 ರೂಪಾಯಿ ಏರಿಕೆ ಆಗಿದೆ. ಇದು ಚಿನ್ನಾಭರಣ ಪ್ರಿಯಾರಿಗೆ ಶಿವರಾತ್ರಿ ಮೊದಲೇ ಆಘಾತ ನೀಡಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇದೇ ರೀತಿ ಇದ್ದು, ವೇಸ್ಟೇಜ್, ಇತರ ಶುಲ್ಕ ಸೇರಿ ಆಯಾ ನಗರಗಳಲ್ಲಿ ಬೆಲೆ ಕೊಂಚ ಬದಲಾವಣೆ ಆಗಬಹುದು. ಇನ್ನು ಬೆಳ್ಳಿ ದರದಲ್ಲಿ ಯಾವುದೆ ಬದಲಾವಣೆ ಆಗಿಲ್ಲ. ಬೆಂಗಳೂರು, ಕರ್ನಾಟಕದಲ್ಲಿ 100 ಗ್ರಾಂ ಬೆಳ್ಳಿಗೆ 10,050 ರೂಪಾಯಿ ಇದ್ದರೆ, 1 ಕೆ.ಜಿ. ಬೆಳ್ಳಿಗೆ 1,00,500 ರೂಪಾಯಿ ಇದೆ.
ನಗರವಾರು 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ಎಷ್ಟಿದೆ?
ಬೆಂಗಳೂರು: 79,700 ರೂಪಾಯಿ
ದೆಹಲಿ: 79,850 ರೂಪಾಯಿ
ಕೇರಳ: 79,700 ರೂಪಾಯಿ
ಭುವನೇಶ್ವರ್: 79,700 ರೂಪಾಯಿ
ಅಹ್ಮದಾಬಾದ್: 79,750 ರೂಪಾಯಿರೂ
ಚೆನ್ನೈ: 79,700 ರೂಪಾಯಿ
ಕೋಲ್ಕತ್ತಾ: 79,700 ರೂಪಾಯಿ
ಜೈಪುರ್: 79,850 ರೂಪಾಯಿ
ಮುಂಬೈ: 79,700 ರೂಪಾಯಿ












Click it and Unblock the Notifications