Gold Price: ಚಿನ್ನದ ಬೆಲೆ ಭರ್ಜರಿ ಕುಸಿತ, ಒಂದೇ ದಿನ 8,700 ಕುಸಿದ ಬಂಗಾರ!
ಚಿನ್ನದ ಬೆಲೆ ನಿನ್ನೆಯಷ್ಟೇ ಏರಿಕೆ ಕಂಡು, ಇಂದು ಮತ್ತೆ ಭಾರಿ ಕುಸಿತವನ್ನು ಕಂಡಿದೆ. ಈ ಮೂಲಕ ಚಿನ್ನ ಖರೀದಿಗೆ ಕಾಯುತ್ತಿದ್ದ ಆಭರಣ & ಒಡವೆ ಪ್ರಿಯರಿಗೆ ಇಂದು ಭರ್ಜರಿ ಸುದ್ದಿ ಸಿಕ್ಕಿದೆ. ಬಂಗಾರದ ಬೆಲೆ ಒಂದೇ ದಿನ 8,700 ರೂಪಾಯಿ ಕುಸಿತ ಕಂಡಿದ್ದು, ಈಗ ಎಷ್ಟಿದೆ ಗೊತ್ತಾ ಚಿನ್ನದ ಬೆಲೆ? ಬನ್ನಿ ತಿಳಿಯೋಣ.
ಮನುಷ್ಯ ನಾಗರಿಕತೆ ಕಡೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನ ಹೆಚ್ಚು ಬಳಸತೊಡಗಿದೆ. ಈ ಪೈಕಿ ಚಿನ್ನದ ಬಳಕೆಗೆ 5000 ವರ್ಷಗಳ ಇತಿಹಾಸ ಇದ್ದು, ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿಯೇ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಈ ರೀತಿ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡಲ್ಲ. ಆದರೆ ಚಿನ್ನಕ್ಕೆ ಮಾತ್ರ ಹೆಚ್ಚು ಬೆಲೆ ಇದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಅಂತಿದ್ದರು ತಜ್ಞರು. ಆದರೆ ಇಂದು ಒಂದೇ ದಿನ ಚಿನ್ನ ಭರ್ಜರಿ 8,700 ರೂಪಾಯಿ ಕುಸಿತ ಕಂಡಿದೆ.

ಚಿನ್ನದ ಬೆಲೆ ಭಾರಿ ಕುಸಿತ!
ಒಡವೆ ಚಿನ್ನದ ಬೆಲೆ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಕುಸಿತ ಕಂಡಿದ್ದು. ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 8,000 ರೂಪಾಯಿ ಕುಸಿತ ಕಂಡು, ಹೀಗೆ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 800 ರೂ. ಕಡಿತವಾಗಿದ್ದು, ಆಭರಣ ಚಿನ್ನದ ಬೆಲೆ ಕುಸಿತದ ನಂತರ ಪ್ರತಿ 10 ಗ್ರಾಂಗೆ 66,350 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದ್ದು 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 8,700 ರೂಪಾಯಿ ಕುಸಿತ ಕಂಡಿದೆ.
ಬೆಳ್ಳಿ ಬೆಲೆಯಲ್ಲೂ ಕುಸಿತ
24 ಕ್ಯಾರೆಟ್ ಚಿನ್ನದ ಬೆಲೆ ಈಗ 72,380 ರೂಪಾಯಿ ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿತ ಕಂಡು ಹಳದಿ ಲೋಹದ ಬೆಲೆ ಕುಸಿತದ ಹಾದಿ ಹಿಡಿದಿದೆ. ಇದರ ಜೊತೆ ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆ ಕಂಡಬರುತ್ತಿದ್ದು ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ. ಬೆಳ್ಳಿ ಬೆಲೆ ಈಗ ಸುಮಾರು 2000 ರೂಪಾಯಿ ಪ್ರತಿ ಕೆಜಿಗೆ ಕುಸಿತ ಕಂಡು 92,000 ರೂಪಾಯಿಗೆ ಬೆಳ್ಳಿ ಪ್ರತಿ ಕೆಜಿಗೆ ಮಾರಾಟ ಆಗುತ್ತಿದೆ.
ಹೂಡಿಕೆ ಮಾಡಿದ್ದವರಿಗೆ ಟೆನ್ಷನ್!
ಚಿನ್ನ ಮಾರುಕಟ್ಟೆಯಲ್ಲಿ ಸತತವಾಗಿ ಕುಸಿತ ಕಾಣುತ್ತಿದ್ದು, ಇದರಿಂದ ಹೂಡಿಕೆದಾರರಿಗೆ ಹೊಸ ಆತಂಕ ಶುರುವಾಗಿದೆ. ಯಾಕಂದ್ರೆ ಚಿನ್ನ ಕೂಡ ಆರ್ಥಿಕತೆಯ ಒಂದು ಭಾಗವೇ ಆಗಿದೆ. ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಸತತವಾಗಿ ಕುಸಿತ ದಾಖಲಾಗುತ್ತಿದೆ ಎಂಬುದು ಚಿಂತೆಗೆ ದೂಡಿದೆ. ಅದರಲ್ಲೂ ಕಳೆದ ಒಂದೆರಡು ವಾರದಿಂದ ನಿರಂತರವಾಗಿ ಚಿನ್ನವು ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ಹೀಗಿದ್ದಾಗ ಮೊನ್ನೆ ಬಂಪರ್ ಆಫರ್ ಸಿಕ್ಕಿತ್ತು. ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿತ್ತು. ಹೀಗಿದ್ದಾಗಲೇ ಮತ್ತೊಮ್ಮೆ ಚಿನ್ನದ ಬೆಲೆ ಈಗ ಮತ್ತೆ ಹಿನ್ನಡೆ ಕಂಡಿದೆ. ಹಾಗಿದ್ರೆ ಚಿನ್ನದ ಬೆಲೆ ಮತ್ತೆ ಕುಸಿತ ಕಾಣುತ್ತಾ? ಮುಂದೆ ಓದಿ.
ದೇಶದ ಆರ್ಥಿಕತೆ ನಿರ್ಧರಿಸುತ್ತದೆ!
ಚಿನ್ನ ಕೇವಲ ಒಂದು ಲೋಹವಲ್ಲ, ಚಿನ್ನ ಎಂಬುದು ಒಂದು ಅಪರೂಪದ ವಸ್ತು ಕೂಡ. ಚಿನ್ನ ಆಭರಣಕ್ಕೆ ಮಾತ್ರವಲ್ಲ, ಹಲವು ವಿಚಾರದಲ್ಲೂ ಬಳಕೆ ಆಗುತ್ತದೆ. ಈ ಅಮೂಲ್ಯ & ಅಪರೂಪದ ಲೋಹವನ್ನು ಪ್ರತಿಯೊಂದು ದೇಶವೂ ರಕ್ಷಣೆ ಮಾಡುತ್ತದೆ. ಅದ್ರಲ್ಲೂ ಚಿನ್ನ ಖರೀದಿ ಮಾಡಿ ಸಂಗ್ರಹ ಮಾಡುವುದು ಕೂಡ ಪ್ರತಿಯೊಂದು ದೇಶದ ಆರ್ಥಿಕತೆ ರಕ್ಷಿಸುವಲ್ಲಿ ಪ್ರಮುಖ ಪಾತ್ರ ಬೀರುತ್ತದೆ. ಶ್ರೀಮಂತ ದೇಶಗಳು ಚಿನ್ನ ಖರೀದಿ ಮಾಡಿ ಅದನ್ನ ರಕ್ಷಿಸುತ್ತವೆ.












Click it and Unblock the Notifications