Gold Price: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಇಂದಿನ ಬೆಲೆ ಎಷ್ಟು ಗೊತ್ತೆ?
ಚಿನ್ನ ಇಲ್ಲದೆ ಯಾವುದೇ ಮನೆಯಲ್ಲಿ ಶುಭಕಾರ್ಯ ನಡೆಯುವುದಿಲ್ಲ, ಅದರಲ್ಲೂ ಹಿಂದೂ ಸಂಪ್ರದಾಯವು ಹೇಳುವಂತೆ ಯಾವುದೇ ಶುಭಕಾರ್ಯ ಇದ್ದರೂ ಮೊದಲಿಗೆ ಚಿನ್ನ ಖರೀದಿ ಮಾಡಬೇಕು ಅಂತಾರೆ. ಹೀಗಾಗಿ ಚಿನ್ನ ಅನ್ನೋದು ಭಾರತೀಯರ ಭಾವನೆ ಜೊತೆಗೆ ಬೆರೆತು ಹೋಗಿದೆ. ಹಿಂದೂಗಳ ಜೊತೆ ಬೇರೆ ಬೇರೆ ಧರ್ಮದಲ್ಲೂ ಚಿನ್ನಕ್ಕೆ ಮಹತ್ವದ ಸ್ಥಾನಮಾನ ಇದ್ದು, ಎಲ್ಲರೂ ಚಿನ್ನ ಇಷ್ಟಪಡುತ್ತಾರೆ. ಹಾಗಾದ್ರೆ ಎಲ್ಲರೂ ಇಷ್ಟಪಡುವ ಚಿನ್ನದ ಬೆಲೆ, ಇಂದು ಎಷ್ಟಿದೆ ಗೊತ್ತೆ? ಇಳಿಕೆ ಆಗಿರುವ ಚಿನ್ನದ ಬೆಲೆಯ ಮಾಹಿತಿ ಇಲ್ಲಿದೆ, ಮುಂದೆ ಓದಿ.
ಚಿನ್ನ ಅನ್ನೋದು ಹೂಡಿಕೆ ಮಾಡುವವರಿಗೆ ಖಜಾನೆ ಎನ್ನುವಂತಾಗಿದ್ದು ಏಪ್ರಿಲ್ ತಿಂಗಳಿನಲ್ಲಿ ಹಳದಿ ಲೋಹ ಅಂದ್ರೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಭರ್ಜರಿ ಲಾಭ ಆಗಿತ್ತು. ಹೀಗೆ ಚಿನ್ನ ಅನ್ನೋದು ಹೂಡಿಕೆದಾರರ ಜೇಬು ತುಂಬಿಸುವ ಅಕ್ಷಯ ಪಾತ್ರೆ ಕೂಡ ಆಗಿದೆ. ಹೀಗಿದ್ರೂ ಚಿನ್ನ ಇಷ್ಟಪಡುವ ಮಹಿಳೆಯರಿಗೆ ಈ ವರ್ಷ ಆಘಾತ ಎದುರಾಗಿತ್ತು. ಚಿನ್ನದ ಬೆಲೆ ಏರಿಕೆಯ ಹಿನ್ನೆಲೆ ಆಭರಣ ಪ್ರಿಯರು ಬೇಸರದಲ್ಲಿ ಕೂತಿದ್ದರು. ಆದರೆ ಇದೀಗ ಮತ್ತೆ ಚಿನ್ನದ ಬೆಲೆಯು ಭರ್ಜರಿ ಇಳಿಕೆ ಕಂಡಿದೆ. ಹಾಗಾದ್ರೆ ಇಂದು ಎಷ್ಟಿದೆ ಚಿನ್ನದ ಬೆಲೆ? ಬನ್ನಿ ತಿಳಿಯೋಣ.

ಚಿನ್ನದ ಬೆಲೆ ಈಗ ಎಷ್ಟು?
ಭಾರತದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ತಲುಪಿದೆ. ಹಾಗೇ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 71,730 ರೂಪಾಯಿ ಆಗಿದೆ, 100 ಗ್ರಾಂ ಬೆಳ್ಳಿ ಬೆಲೆ 8,250 ರೂಪಾಯಿ ಇದೆ. ಬೆಂಗಳೂರಲ್ಲಿ ಈಗ ಚಿನ್ನದ ಬೆಲೆ 10 ಗ್ರಾಂಗೆ 65,750 ರೂಪಾಯಿ ಆಗಿದ್ದರೆ ಬೆಳ್ಳಿಯ ಬೆಲೆ 100 ಗ್ರಾಂಗೆ 8,250 ರೂಪಾಯಿ ಆಗಿದೆ. ಈ ಮೂಲಕ ಚಿನ್ನದ ಬೆಲೆಯು ಭಾರಿ ಇಳಿಕೆ ಕಂಡಿದೆ. ಇನ್ನೊಂದು ಕಡೆ ಮುಂದಿನ ಕೆಲವು ದಿನಗಳಲ್ಲಿ ಚಿನ್ನದ ಬೆಲೆ ಇದೇ ರೀತಿ ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆ ದಟ್ಟವಾಗಿದೆ. ನಿನ್ನೆಗೆ ಹೋಲಿಕೆ ಮಾಡಿದರೆ ಚಿನ್ನದಲ್ಲಿ ಇಳಿಕೆ ಕಂಡು ಬಂದಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ ಭರ್ಜರಿ 500 ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು. ಈ ನಡುವೆ ಅಕ್ಷಯ ತೃತೀಯ ಸಂಭ್ರಮಕ್ಕೆ ಕೆಲವೇ ದಿನ ಇರುವಾಗ ಚಿನ್ನದ ಬೆಲೆ, ಇಳಿಕೆ ಕಾಣುತ್ತಿರುವುದು ಖುಷಿ ನೀಡಿದೆ.
ಚಿನ್ನ ಈಗ ಅಂತಾರಾಷ್ಟ್ರೀಯ ಕರೆನ್ಸಿ?
ಪ್ರಪಂಚದ ಮಟ್ಟದಲ್ಲಿ ಈಗ ಚಿನ್ನಕ್ಕೆ ಯಾಕೆ ಇಷ್ಟು ಬೆಲೆ ಬಂದಿದೆ ಎಂದರೆ, ಯುದ್ಧಗಳು ಶುರುವಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಇಲ್ಲವಾಗಿದ್ದು. ಈ ಕಾರಣಕ್ಕೆ ಈಗ ಚಿನ್ನದ ಮೇಲೆ ಜನರಿಗೆ ತುಂಬಾ ನಂಬಿಕೆ ಬಂದಿದೆ. ಹೀಗಾಗಿ ಜನರು ಕೂಡ ಚಿನ್ನ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಚಿನ್ನ ಸಾಕಷ್ಟು ಏರಿಕೆ ಕಂಡಿತ್ತು. ಆದರೆ, ಇದೀಗ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಇಸ್ರೇಲ್ & ಇರಾನ್ ಯುದ್ಧ ನಡೆಯಲ್ಲ ಎಂಬ ನಂಬಿಕೆ ಸಿಕ್ಕ ನಂತರ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಇಂದು ಕೂಡ ಭಾರಿ ಕುಸಿತ ಕಂಡಿದೆ ಚಿನ್ನದ ಬೆಲೆ.
ಹಳದಿ ಲೋಹ ಎಲ್ಲರಿಗೂ ಇಷ್ಟ!
ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. ಹೀಗಾಗಿಯೇ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ, ಹಳದಿ ಲೋಹ ಬೆನ್ನೆಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹ ಅಂದ್ರೆ ಚಿನ್ನ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ದಟ್ಟವಾಗಿದೆ.
ಆಭರಣ ಪ್ರಿಯರಿಗೆ ಚಿನ್ನವೇ ಚನ್ನ!
ಒಂದು ಕಡೆ ಹೂಡಿಕೆ ಮಾಡುವವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ ಆಗುತ್ತದೆ, ಆದರೂ ಸಾಮಾನ್ಯವಾಗಿ ಆಭರಣಗಳನ್ನ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಮಾತ್ರ ಸಂತಸವಾಗುತ್ತದೆ. ಹೀಗೆ ಚಿನ್ನದ ಬೆಲೆಯು ಕಳೆದ 1 ತಿಂಗಳಿಂದ ಭಾರಿ ಏರಿಳಿತವನ್ನು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಂಡು, ಆ ನಂತರದಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳುತ್ತದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಆಭರಣವನ್ನ ಕೊಳ್ಳುವವರಿಗೆ ಈ ತಿಂಗಳು ಮತ್ತಷ್ಟು ಸಿಹಿಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಈ ರೀತಿ ಚಿನ್ನದ ಏರುಪೇರು ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕತೆಯನ್ನೇ ಅಲುಗಾಡಿಸುತ್ತಿದೆ.
ಚಿನ್ನದ ಬೆಲೆ 1 ಲಕ್ಷ ರೂಪಾಯಿ ಆಗುತ್ತಾ?
ಚಿನ್ನ ಹೂಡಿಕೆದಾರರ ಜೇಬು ತುಂಬಿಸುವ ಅಕ್ಷಯ ಪಾತ್ರೆ ಆಗಿದ್ದು, ಆದರೆ ಚಿನ್ನ ಇಷ್ಟಪಡುವ ಮಹಿಳೆಯರಿಗೆ ಈ ವರ್ಷ ಆಘಾತ ಎದುರಾಗುವುದು ಗ್ಯಾರಂಟಿ ಅಂತಿದ್ದಾರೆ ತಜ್ಞರು. ಯಾಕಂದ್ರೆ ಚಿನ್ನದ ಬೆಲೆಯು ಈ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಹೆಚ್ಚಿದೆ. ಮತ್ತೊಂದು ಕಡೆ ಈಗಿನ ಸ್ಥಿತಿಯಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದು ಚಿನ್ನವನ್ನ ಇಷ್ಟಪಡುವ ಮಹಿಳೆಯರಿಗೆ & ಚಿನ್ನ ಪ್ರಿಯರಿಗೆ ಸಖತ್ ಸುದ್ದಿ ನೀಡಿದಂತೆ ಆಗಿದೆ. ಒಟ್ನಲ್ಲಿ ಚಿನ್ನವು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಳಿತ ಕಾಣಲಿದ್ದು, ಹೀಗಾಗಿ ಏಳುಬೀಳು ಗ್ಯಾರಂಟಿ ಅಂತಾರೆ ತಜ್ಞರು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಿನ್ನಕ್ಕೆ ಭಾರಿ ಬೇಡಿಕೆ ಬಂದಿದೆ.
ಕಡಿಮೆ ಆಗುತ್ತಿದೆ ಚಿನ್ನದ ಬೆಲೆ!
ಚಿನ್ನದ ಬೆಲೆಯು ಇಳಿಕೆ ಕಂಡ ನಂತರ ಖರೀದಿ ಮಾಡೋಣ ಅಂತಾ ಕಾಯುತ್ತಿದ್ದ ಮಹಿಳೆಯರು ಸೇರಿದಂತೆ, ಚಿನ್ನ ಪ್ರಿಯರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆ ಒಂದೇ ಸಮನೆ ಏರಿಕೆ ಆಗುತ್ತಿದೆ ಅಂತಾ ಮಹಿಳೆಯರು & ಚಿನ್ನ ಖರೀದಿ ಮಾಡಬೇಕಿದ್ದವರು ಬೇಸರ ಹೊರಹಾಕಿದ್ದರು. ಆದರೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಕಡಿಮೆ ಆಗಿದೆ. ಮತ್ತೊಂದು ಕಡೆ ಇನ್ನೇನು ಅಕ್ಷಯ ತೃತೀಯ ಹತ್ತಿರ ಬಂದ ಕಾರಣಕ್ಕೆ ಆಭರಣ ಪ್ರಿಯರು ಕೂಡ ಚಿನ್ನವನ್ನು ಖರೀದಿ ಮಾಡೋಕೆ ಮುಗಿಬೀಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅಕ್ಷಯ ತೃತೀಯ ಬರಲಿದ್ದು, ಇದಕ್ಕಾಗಿ, ಆಭರಣಗಳ ಅಂಗಡಿ ಮಾಲೀಕರು ಕೂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗೇ ಭಾರಿ ಡಿಸ್ಕೌಂಟ್ ಕೂಡ ಘೋಷಿಸುತ್ತಿದ್ದಾರೆ.
ಚಿನ್ನ ಇದ್ದರೆ ಕಷ್ಟಕಾಲದ ಬಂಧು!
ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ, ಅದರಲ್ಲೂ ಆಭರಣಗಳನ್ನು ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಎಲ್ಲೂ ಹಣವನ್ನು ಹೊಂದಿಸಲು ಆಗದ ಸ್ಥಿತಿ ಬಂದಾಗ, ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅಡ ಇಟ್ಟು ಅಥವಾ ಚಿನ್ನ ಮಾರಿ ಹಣ ಪಡೆಯಬಹುದು. ಈ ಮೂಲಕ ತುರ್ತು ಸಮಯದಲ್ಲಿ ಜೀವ ಉಳಿಸೋದಕ್ಕೆ ಚಿನ್ನ ಸಹಾಯಕ. ಈ ಎಲ್ಲಾ ಕಾರಣಕ್ಕೆ ಚಿನ್ನ ಖರೀದಿ ಅಥವಾ ಚಿನ್ನದ ಮೇಲೆಯೇ ಈ ರೀತಿ ಹೆಚ್ಚಾಗಿ ಹೂಡಿಕೆ ಮಾಡಲು ಪ್ರಮುಖ ಕಾರಣ ಎನ್ನಲಾಗುತ್ತದೆ.
ಚಿನ್ನ ಇಲ್ಲದೆ ಏನೂ ನಡೆಯಲ್ಲ!
ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಅದೆಷ್ಟು ಮುಖ್ಯ ಎಂದರೆ, ಚಿನ್ನವು ಇಲ್ಲದೆ ಏನೂ ನಡೆಯಲ್ಲ ಎನ್ನಬಹುದು. ಯಾಕಂದ್ರೆ ಚಿನ್ನ ಆಭರಣವಾಗಿ ಮಾತ್ರವಲ್ಲ, ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಕೂಡ ಬಳಕೆ ಮಾಡಲಾಗುತ್ತೆ. ಮೊಬೈಲ್ ಸೇರಿದಂತೆ, ಹಲವು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಗೆ ಕೂಡ ಚಿನ್ನ ಬೇಕೆ ಬೇಕಾಗುತ್ತೆ. ಹೀಗಾಗಿಯೇ ಚಿನ್ನ ಈಗ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡಿದೆ. ಹೀಗೆಯೇ, ಎಲ್ಲಾ ಕಡೆಯಿಂದ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ, ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದ್ದು. ಮುಂದೆ ಇನ್ನಷ್ಟು ಏರಿಳಿತ ಕಾಣಬಹುದು ಅಂತಾರೆ ತಜ್ಞರು.












Click it and Unblock the Notifications