Gold Price: ಚಿನ್ನದ ದರ ₹21,200 ದುಬಾರಿ: ವರ್ಷದಲ್ಲಿ ಚಿನ್ನದ ಬೆಲೆ ಶೇ. 35% ಬೆಳ್ಳಿ ಬೆಲೆ ಶೇ.36% ಏರಿಕೆ

ಬೆಂಗಳೂರು, ನವೆಂಬರ್ 01: ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಕಸ್ಟಮ್ಸ್ ಸುಂಕ್ ಕಡಿತ ಮಾಡಿದ ಬಳಿಕ ಚಿನ್ನ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಲಿದೆ ಎಂದು ನಿರೀಕ್ಷಿಲಾಗಿತ್ತು. ಆದರೆ ದಿನೇ ದಿನೆ ಚಿನ್ನದ ಬೆಲೆ ಗಗನಮುಖಿಯಾಗಿದೆ. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಗ್ರಾಹಕರ ಕೈ ಸುಡುತ್ತಿದೆ. ಇದೀಗ ದೀಪಾವಳಿ ಹಬ್ಬಕ್ಕೆ ಚಿನ್ನದ ಬೆಲೆಯು 82,400 ರೂಪಾಯಿ ಇದೆ. ಕಳೆದ ವರ್ಷ ಇದೇ ವೇಳೆಯ ದರಕ್ಕೂ ಹಾಗೂ ಇಂದಿನ ದರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಹೀಗಿದ್ದರೂ ಚಿನ್ನಕ್ಕೆ ಬೇಡಿಕೆ ಮಾತ್ರ ಮುಂದುವರಿಯುತ್ತಲೇ ಇದೆ.

ಚಿನ್ನದ ದರದಲ್ಲಿ ಭಾರೀ ಏರಿಕೆ ಆಗಿದೆ. 2023ರ ಅಕ್ಟೋಬರ್ ಅಂತ್ಯಕ್ಕೆ ಚಿನ್ನದ ಕೇವಲ 61,200 ರೂಪಾಯಿ ಇತ್ತು. ಅದು ಈ ವರ್ಷ ಭರ್ಜರಿ ಏರಿಕೆ ಆಗಿದ್ದು, 82400 ರೂಪಾಯಿ ಯಷ್ಟು ಹೆಚ್ಚಾಗುವ ಮೂಲಕ ಒಂದು ವರ್ಷಕ್ಕೆ ಚಿನ್ನದ ದರ ಭಾರತದಲ್ಲಿ ಶೇಕಡಾ 35ರಷ್ಟು ಏರಿಕೆ ಆಗಿದೆ ಎಂದು 'ಅಖಿಲ ಭಾರತ ಸರಾಫ್ ಅಸೋಸಿಯೇಷನ್' ಮಾಹಿತಿ ನೀಡಿದೆ ಎಂದು ವರದಿ ಆಗಿದೆ.

Gold Price in India is 21200 Rupees Expensive Compared to Last one Year Silver Rate

ಇತ್ತೀಚೆಗೆ ಚಿನ್ನದ ಬೆಲೆಯು ಒಂದೇ ದಿನಕ್ಕೆ 7100 ರೂಪಾಯಿ ಏರಿಕೆ ಆಗಿತ್ತು. ಮೊನ್ನೆಯಷ್ಟೇ ಮತ್ತ ಒಂದೇ ದಿನಕ್ಕೆ 1000 ರೂಪಾಯಿ ಏರಿಕೆ ಜೊತೆಗೆ ದರ ಏರಳಿತ ಮುಂದುವರಿದಿದೆ. ಕಳೆದ ವರ್ಷಕ್ಕೂ ಈ ವರ್ಷದ ಚಿನ್ನದ ಬೆಲೆಯಲ್ಲಿ ರೂಪಾಯಿ 21,200 ರೂ.ನಷ್ಟು ದುಬಾರಿಯಾಗಿದೆ ಎಂದು ಅಸೋಸಿಯೇನ್ ತಿಳಿಸಿದೆ. ಇನ್ನೂ ಚಿನ್ನದ ಬೆಲೆಯಲ್ಲಿ ಇದೇ ಒಂದು ವರ್ಷದ ಅವಧಿಯಲ್ಲಿ ಭರ್ಜರಿ ಶೇಕಡಾ 36ರಷ್ಟು ಏರಿಕೆ ಕಂಡಿದೆ. 2023ರ ಅಕ್ಟೋಬರ್ ಅಂತ್ಯದಲ್ಲಿ ಬೆಳ್ಳಿಯ ಬೆಲೆ 1 ಕೆಜಿಗೆ 74000 ರೂಪಾಯಿ ಇತ್ತು. ಭಾರತದಲ್ಲಿ ಚಿನ್ನಾಭರಣ ವಾರದಿಂದ ವಾರಕ್ಕೆ ಕೈಗೆಟುಕದ ಬೆಲೆಗೆ ದುಬಾರಿ ಆಗಿದೆ. ಬೇಡಿಕೆ ಕೊಂಚ ಕಡಿಮೆ ಆಯಿತು ಎನ್ನವಷ್ಟರಲ್ಲಿ ಮತ್ತೆ ಹೆಚ್ಚಿನ ಬೇಡಿಕೆ ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿದೆ.

ಉಕ್ರೇನ್, ರಷ್ಯಾ, ಇಸ್ರೇಲ್, ಇಸ್ರೇಲ್ ಗಾಜಾ ಮೇಲಿನ ದಾಳಿ ಸೇರಿದಂತೆ ಒಂದಷ್ಟು ಜಾಗತಿಕ ಬಿಕ್ಕಟ್ಟುಗಳ ಪರಿಣಾಮವಾಗಿ ವಿಶ್ವಚ ಚಿನ್ನದ ಮಾರುಕಟ್ಟೆಯಲ್ಲಿ ಪರಿಣಾಮ ಬೀರಿದೆ. ಹೀಗಾಗಿ ಚಿನ್ನದ ದರವು ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಚಿನ್ನದರ 1 ಲಕ್ಷ ರೂಪಾಯಿಗೆ ಏರಿಕೆ ಆಗುವ ಸಾಧ್ಯತೆಗಳು ಇದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಸದ್ಯ ಭಾರತದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 82,400 ರೂಪಾಯಿ ತಲುಪಿದೆ. ಬೆಳ್ಳಿಯ ಬೆಲೆ ಸದ್ಯ 100 ಗ್ರಾಂಗೆ 10,900 ಹಾಗೂ ಒಂದು ಕೆ.ಜಿ. ಬೆಳ್ಳಿಗೆ 1,09,000 ರೂಪಾಯಿ ಇದೆ. ದೇಶದ ವಿವಿಧ ನಗರಗಳಲ್ಲಿ ಈ ಚಿನ್ನಾಭರಣದ ಇಂದಿನ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಂಡು ಬರುತ್ತದೆ.

ದೀಪಾವಳಿ ಹಬ್ಬದ ಮಧ್ಯಯೇ ಚಿನ್ನದ ಬೆಲೆ ಏರಿಕೆ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಗುರುವಾರ 1000 ರೂಪಾಯಿ ಏರಿಕೆ ಆಗಿದೆ. ಕೊಂಚ ಕಡಿಮೆ ಆಗುವ ಚಿನ್ನದ ದರ ದಿಡೀರನೇ ದಾಖಲೆಯ ಮಟ್ಟದಲ್ಲಿ ಏರಿಕೆ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+