Gold Price: ಚಿನ್ನದ ಬೆಲೆ 70,000 ರೂಪಾಯಿ, ಬಂಗಾರದ ಬೆಲೆ ಕಂಡು ಶಾಕ್!

ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನ ಖರೀದಿಗೆ ಕಾದು ಕುಳಿತ ಜನರಿಗೆ ಮತ್ತೊಮ್ಮೆ ಆಘಾತ ನೀಡಿದೆ. ಸತತ ಇಳಿಕೆ ಕಾಣುತ್ತಿದ್ದ ಚಿನ್ನ & ಬೆಳ್ಳಿ ಬೆಲೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದೆ. ಅದರಲ್ಲೂ ಚಿನ್ನದ ಬೆಲೆ ಮತ್ತೊಮ್ಮೆ 70,000 ರೂಪಾಯಿ ತಲುಪಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ?

ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಯಾಕೆ ಇಷ್ಟು ಬೆಲೆ ಬರುತ್ತಿದೆ ಅಂದ್ರೆ ಯುದ್ಧ ಶುರುವಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಇಲ್ಲವಾಗಿದೆ. ಇದೇ ಕಾರಣಕ್ಕೆ ಈಗ ಚಿನ್ನದ ಮೇಲೆ ಜನರಿಗೆ ತುಂಬಾ ನಂಬಿಕೆ ಬಂದಿದೆ. ಹೀಗೆ ಜನ ಕೂಡ ಚಿನ್ನ ಖರೀದಿಗೆ ಮುಗಿ ಬಿದ್ದಿದ್ದಾರೆ. ಹೀಗಾಗಿ ಮತ್ತೊಮ್ಮೆ ಚಿನ್ನಕ್ಕೆ ಭಾರಿ ಬೇಡಿಕೆ ಬರುತ್ತಿದೆ ಎನ್ನಲಾಗಿದೆ. ಅತ್ತ ಇರಾನ್ & ಇಸ್ರೇಲ್ ನಡುವೆ ಘೋರ ಯುದ್ಧವು ನಡೆಯುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಚಿನ್ನದ ಬೆಲೆ & ಬೆಳ್ಳಿ ಬೆಲೆ ಭಾರಿ ಏರಿಕೆ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ? ಮುಂದೆ ಓದಿ.

Gold Price Has Been Reached 70000 Rupees Again After Big Gap

ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ?

ಕರ್ನಾಟಕ & ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲೆ ಹೋಗಿದೆ. 100 ಗ್ರಾಂಗೆ 5,400 ರೂಪಾಯಿ ಏರಿಕೆಯನ್ನು ಕಂಡ 24 ಕ್ಯಾರೆಟ್ ಶುದ್ಧ ಚಿನ್ನ ಮತ್ತೊಮ್ಮೆ 70 ಸಾವಿರ ರೂಪಾಯಿ ಗಡಿ ದಾಟಿದೆ. ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,03,600 ರೂಪಾಯಿ ಆಗಿದೆ. ಇದರ ಜೊತೆಗೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 70,360 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಏರಿಕೆ ಕಂಡಿದ್ದು, ಬೆಳ್ಳಿ ಬೆಲೆ ಮತ್ತೊಮ್ಮೆ 1 ಲಕ್ಷ ರೂಪಾಯಿ ಮುಟ್ಟುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.

ಬೆಳ್ಳಿ ಬೆಲೆ ಈಗ ಎಷ್ಟಿದೆ?

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಏರಿಕೆ ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 5,000 ರೂಪಾಯಿ ಹೆಚ್ಚಾಗಿದೆ. 10 ಗ್ರಾಂ ಆಭರಣ ಚಿನ್ನದ ಬೆಲೆಯು ಈಗ 500 ರೂಪಾಯಿ ಏರಿಕೆ ಆಗಿ ಪ್ರತಿ 10 ಗ್ರಾಂಗೆ 64,500 ರೂಪಾಯಿ ಮಾರಾಟ ಆಗ್ತಿದೆ. ಮತ್ತೊಂದ್ಕಡೆ ಬೆಳ್ಳಿ ಬೆಲೆಯಲ್ಲಿ 1500 ರೂಪಾಯಿ ಏರಿಕೆ ಕಂಡು, 1 ಕೆಜಿಗೆ 85,500 ರೂಪಾಯಿಗೆ ಮಾರಾಟ ಆಗುತ್ತಿದೆ ಬೆಳ್ಳಿ. ಒಟ್ಟಾರೆ ಹೇಳುವುದಾದರೆ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡುಬರುತ್ತಿದ್ದು, ಮುಂದೆಯು ಕೂಡ ಇದೇ ರೀತಿ ಚಿನ್ನ ಏರಿಕೆ ಕಾಣುವ ನಿರೀಕ್ಷೆ ಇದೆ. ಹಾಗೇ ಬೆಳ್ಳಿ ಬೆಲೆ ಮತ್ತೊಮ್ಮೆ 1 ಲಕ್ಷಕ್ಕೆ ತಲುಪಿದರೂ ಅಚ್ಚರಿ ಇಲ್ಲ.

ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!

ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲಾ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಚಿನ್ನದ ಬೆಲೆ ಈ ವರ್ಷದ ಅಂತ್ಯಕ್ಕೆ, 1 ಲಕ್ಷ ರೂಪಾಯಿ ಆಸುಪಾಸಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+