Gold Price: ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಇಂದಿನ ರೇಟ್ ತಿಳಿಯಿರಿ!

ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದೆ, ಅದು ಒಂದಲ್ಲ & ಎರಡಲ್ಲ ಬರೋಬ್ಬರಿ 8,000 ರೂಪಾಯಿ ಏರಿಕೆ ಕಂಡಿದೆ ಚಿನ್ನದ ಬೆಲೆ. ಕಳೆದ ವಾರ ಸತತವಾಗಿ ಕುಸಿತ ಕಂಡ ಚಿನ್ನದ ಬೆಲೆ, ಈ ವಾರ ಕೂಡ ಕುಸಿತದ ಹಾದಿಗೆ ಮರಳಿತ್ತು. ಆದರೆ ಇಂದು ದಿಢೀರ್ 8,100 ರೂಪಾಯಿ ಏರಿಕೆ ಕಂಡು ಆಭರಣ ಖರೀದಿಗೆ ಕಾಯುತ್ತಿದ್ದ ಮಹಿಳೆಯರಿಗೆ ಆಘಾತ ನೀಡಿದೆ. ಹಾಗಾದ್ರೆ ಈಗ ಎಷ್ಟಿದೆ ಚಿನ್ನದ ಬೆಲೆ? ಬನ್ನಿ ತಿಳಿಯೋಣ.

ಇಂದು ಚಿನ್ನದ ಬೆಲೆ ಭರ್ಜರಿ ಏರಿಕೆಯ ಕಂಡಿದ್ದು ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಗ್ಯಾರಂಟಿ ಎನ್ನಲಾಗುತ್ತಿದೆ. ನೋಡ ನೋಡುತ್ತಲೇ ಚಿನ್ನದ ಬೆಲೆ ಆಕಾಶವನ್ನೇ ಮುಟ್ಟುತ್ತಿದೆ. ಚಿನ್ನ ಸಂಗ್ರಹಕ್ಕೆ ಪ್ರತಿ ದೇಶವೂ ತಮ್ಮ ಆರ್ಥಿಕತೆಯಲ್ಲಿ ಒತ್ತು ನೀಡುತ್ತಿವೆ. ಅದ್ರಲ್ಲೂ ಕೊಲ್ಲಿ ರಾಷ್ಟ್ರಗಳು & ಅರಬ್ ದೇಶಗಳಿಗೆ ಚಿನ್ನ ಬೇಕೆ ಬೇಕಾಗಿದೆ, ಇನ್ನು ಅಮೆರಿಕ ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಹೀಗೆ ಸಂಕಷ್ಟ ಬಂದಾಗೆಲ್ಲಾ ಚಿನ್ನ ಸಹಾಯಕ್ಕೆ ಬರಲಿದೆ. ಹೀಗಿದ್ದಾಗ ಇಂದು ಚಿನ್ನದ ಬೆಲೆ ದಿಢೀರ್ 8,100 ರೂಪಾಯಿ ಏರಿಕೆ ಕಂಡಿದೆ. ಬಂಗಾರದ ಬೆಲೆ ಈಗ ಮಾರುಕಟ್ಟೆಯಲ್ಲಿ ಎಷ್ಟಿದೆ? ಮುಂದೆ ಓದಿ.

Gold Price Has Been Increased 8100 Rupees On 22nd June Of 2024

ಚಿನ್ನದ ಬೆಲೆ ಇಷ್ಟಿದೆ ನೋಡಿ!

ಶುದ್ಧ ಚಿನ್ನ ಅಥವಾ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 8,100 ರೂಪಾಯಿ ಏರಿಕೆ ಆಗಿದೆ. ಹೀಗಾಗಿ, ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,32,500 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 73,250 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿದೆ. ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 7500 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 750 ರೂಪಾಯಿ ಏರಿಕೆ ಆಗಿದೆ. ಆಭರಣ ಚಿನ್ನದ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 67,150 ರೂಪಾಯಿಗೆ ಮಾರಾಟ ಆಗುತ್ತಿದೆ.

ಬಂಗಾರ ಅಂದ್ರೆ ಭಾರತೀಯರಿಗೆ ಇಷ್ಟ!

ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ. ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದಾಗ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ ಅಥವಾ ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಡಿಮ್ಯಾಂಡ್ ಬರುತ್ತದೆ. ಹೀಗಾಗಿ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದ್ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರು ಲಾಭ ಪಡೆಯಲು ಹವಣಿಸುತ್ತಿದ್ದಾರೆ, ಯಾಕಂದ್ರೆ ಚಿನ್ನ ಈಗ ಅಷ್ಟು ದುಬಾರಿ ಆಗುತ್ತಿದೆ.

ಹೂಡಿಕೆ ಮಾಡಿದ್ದವರಿಗೆ ಟೆನ್ಷನ್!

ಚಿನ್ನ ಮಾರುಕಟ್ಟೆಯಲ್ಲಿ ಸತತವಾಗಿ ಕುಸಿತ ಕಾಣುತ್ತಿದ್ದು, ಇದರಿಂದ ಹೂಡಿಕೆದಾರರಿಗೆ ಹೊಸ ಆತಂಕ ಶುರುವಾಗಿದೆ. ಯಾಕಂದ್ರೆ ಚಿನ್ನ ಕೂಡ ಆರ್ಥಿಕತೆಯ ಒಂದು ಭಾಗವೇ ಆಗಿದೆ. ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಸತತವಾಗಿ ಕುಸಿತ ದಾಖಲಾಗುತ್ತಿದೆ ಎಂಬುದು ಚಿಂತೆಗೆ ದೂಡಿದೆ. ಅದರಲ್ಲೂ ಕಳೆದ ಒಂದೆರಡು ವಾರದಿಂದ ನಿರಂತರವಾಗಿ ಚಿನ್ನವು ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ಹೀಗಿದ್ದಾಗ ಮೊನ್ನೆ ಬಂಪರ್ ಆಫರ್ ಸಿಕ್ಕಿತ್ತು. ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿತ್ತು. ಹೀಗಿದ್ದಾಗಲೇ ಮತ್ತೊಮ್ಮೆ ಚಿನ್ನದ ಬೆಲೆ ಈಗ ಮತ್ತೆ ಹಿನ್ನಡೆ ಕಂಡಿದೆ. ಹಾಗಿದ್ರೆ ಚಿನ್ನದ ಬೆಲೆ ಮತ್ತೆ ಕುಸಿತ ಕಾಣುತ್ತಾ? ಮುಂದೆ ಓದಿ.

ದೇಶದ ಆರ್ಥಿಕತೆ ನಿರ್ಧರಿಸುತ್ತದೆ!

ಚಿನ್ನ ಕೇವಲ ಒಂದು ಲೋಹವಲ್ಲ, ಚಿನ್ನ ಎಂಬುದು ಒಂದು ಅಪರೂಪದ ವಸ್ತು ಕೂಡ. ಚಿನ್ನ ಆಭರಣಕ್ಕೆ ಮಾತ್ರವಲ್ಲ, ಹಲವು ವಿಚಾರದಲ್ಲೂ ಬಳಕೆ ಆಗುತ್ತದೆ. ಈ ಅಮೂಲ್ಯ & ಅಪರೂಪದ ಲೋಹವನ್ನು ಪ್ರತಿಯೊಂದು ದೇಶವೂ ರಕ್ಷಣೆ ಮಾಡುತ್ತದೆ. ಅದ್ರಲ್ಲೂ ಚಿನ್ನ ಖರೀದಿ ಮಾಡಿ ಸಂಗ್ರಹ ಮಾಡುವುದು ಕೂಡ ಪ್ರತಿಯೊಂದು ದೇಶದ ಆರ್ಥಿಕತೆ ರಕ್ಷಿಸುವಲ್ಲಿ ಪ್ರಮುಖ ಪಾತ್ರ ಬೀರುತ್ತದೆ. ಶ್ರೀಮಂತ ದೇಶಗಳು ಚಿನ್ನ ಖರೀದಿ ಮಾಡಿ ಅದನ್ನ ರಕ್ಷಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+