Gold Price: ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿ ಕುಸಿತ!
ಚಿನ್ನದ ಬೆಲೆ ಕುಸಿತ ಕಾಣುತ್ತಿದ್ದು, ಇಂದು ಕೂಡ ಭರ್ಜರಿ ಇಳಿಕೆ ಕಂಡಿದೆ. ಬಂಗಾರ ಬೆಲೆ ಒಂದೇ ದಿನದಲ್ಲಿ ಬರೋಬ್ಬರಿ 2,500 ರೂಪಾಯಿ ಕುಸಿತ ಕಂಡಿದೆ. ಅರೆರೆ ಹಾಗಾದ್ರೆ ಇದೀಗ ಚಿನ್ನದ ಬೆಲೆ ಎಷ್ಟಿದೆ? ಬೆಳ್ಳಿ ರೇಟ್ ಎಷ್ಟು? ಚಿನ್ನದ ಬೆಲೆ ಕುಸಿತಕ್ಕೆ ಪ್ರಮುಖವಾದ ಕಾರಣ ಏನು? ಅನ್ನೋದನ್ನ ತಿಳಿಯಬೇಕಾ, ಹಾಗಾದ್ರೆ ಮುಂದೆ ಓದಿ.
ಚಿನ್ನದ ಬೆಲೆ ಮತ್ತೆ ಭಾರಿ ಕುಸಿತ ಕಂಡಿದ್ದು ಈ ಮೂಲಕ ಚಿನ್ನ ಕೊಳ್ಳಲು ಭರ್ಜರಿ ಚಾನ್ಸ್ ಸಿಕ್ಕಂತಾಗಿದೆ. ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಪಾತಾಳ ಸೇರುತ್ತಿದೆ. ಹೀಗಿದ್ದಾಗ ಈಗ ಕೂಡ ಚಿನ್ನದ ಬೆಲೆ ದಿಢೀರ್ ಕುಸಿತ ಕಂಡಿದೆ. ಕಳೆದ 1 ದಶಕದಲ್ಲಿ ಚಿನ್ನದ ಬೆಲೆ ಸಾಕಷ್ಟು ಬದಲಾವಣೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಬರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದು ಬಿಡಿ ಈಗಿರುವ ಬೆಲೆಯನ್ನ ಕೂಡ ಚಿನ್ನ & ಬೆಳ್ಳಿ ಉಳಿಸಿಕೊಳ್ಳುತ್ತಿಲ್ಲ. ಹಾಗಾದ್ರೆ ಇಂದು ಕುಸಿತದ ನಂತರ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆ ಭಾರಿ ಕುಸಿತ!
ಒಡವೆ ಚಿನ್ನದ ಬೆಲೆ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಕುಸಿತ ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 2,500 ರೂಪಾಯಿ ಕುಸಿತ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 250 ರೂಪಾಯಿ ಕಡಿತವಾಗಿದ್ದು, ಆಭರಣ ಚಿನ್ನದ ಬೆಲೆಯು ಕುಸಿತದ ನಂತರ 10 ಗ್ರಾಂಗೆ 66,000 ರೂಪಾಯಿ ರೀತಿ ಮಾರಾಟ ಆಗುತ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 2,300 ರೂಪಾಯಿ ಕುಸಿತ ಕಂಡಿದೆ.
ಬೆಳ್ಳಿ ಬೆಲೆ ಕಥೆ ಏನಾಯ್ತು?
24 ಕ್ಯಾರೆಟ್ ಚಿನ್ನದ ಬೆಲೆ 72,000 ರೂಪಾಯಿ ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿತ ಕಂಡು ಹಳದಿ ಲೋಹದ ಬೆಲೆ ಕುಸಿತದ ಹಾದಿ ಹಿಡಿದಿದೆ. ಇದು ಸಾಲದು ಎಂಬಂತೆ ಬೆಳ್ಳಿ ಬೆಲೆ ಕೂಡ 1000 ರೂಪಾಯಿ ಕುಸಿತ ಕಂಡಿದೆ. ಆದರೆ ಹೀಗಿದ್ದಾಗಲೇ ಮತ್ತೊಂದು ಕಡೆ ಷೇರು ಪೇಟೆ ಇಂದು ಭರ್ಜರಿ ಏರಿಕೆ ಕಂಡಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ನಿಫ್ಟಿ-50 ಸುಮಾರು 147 ಅಂಕ ಏರಿಕೆ ಕಂಡಿದ್ದು, 23,868 ಅಂಕದ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದ್ದು.
ಇನ್ನುಳಿದಂತೆ ಸೆನ್ಸೆಕ್ಸ್ 620 ಪಾಯಿಂಟ್ಸ್ ಏರಿಕೆ ಕಂಡು 78,674 ಅಂಕದಲ್ಲಿ ವಹಿವಾಟು ಮುಗಿಸಿದೆ. ಬ್ಯಾಂಕ್ ನಿಫ್ಟಿ ಕೂಡ 264 ಅಂಕ ಏರಿಕೆ ಕಂಡಿದೆ. ಆದರೆ ಇದೇ ವೇಳೆಗೆ, ಚಿನ್ನ & ಬೆಳ್ಳಿ ಬೆಲೆಯಲ್ಲಿ ಕುಸಿತ ಕಂಡುಬಂದಿದ್ದು ಹೂಡಿಕೆ ಮಾಡಿದವರಿಗೆ ಒಂದಷ್ಟು ತಲೆನೋವು ತರಿಸಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಾಣುವ ನಿರೀಕ್ಷೆ ಇದೆ.












Click it and Unblock the Notifications