ಚಿನ್ನದ ಬೆಲೆ 1,00,000 ರೂಪಾಯಿ ತಲುಪಿ ಹೊಸ ದಾಖಲೆ, ಈಗ ಎಷ್ಟಿದೆ ಬಂಗಾರದ ರೇಟ್... Gold Price

ಚಿನ್ನ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನದ ಬೆಲೆಗೆ ಬ್ರೇಕ್ ಹಾಕಲು ಸಾಧ್ಯವೇ ಆಗುತ್ತಿಲ್ಲ. ಒಂದು ಕಡೆ ಜಾಗತಿಕ ಮಾರುಕಟ್ಟೆ ಕೂಡ ಚಿನ್ನ ಬೆಲೆ ಏರಿಕೆಗೆ ಕಾಣರವಾಗುತ್ತಿದೆ. ಇನ್ನೊಂದು ಕಡೆ ಭಾರತದಲ್ಲಿ ಕೂಡ ಬಂಗಾರಕ್ಕೆ ಭರ್ಜರಿ ಡಿಮ್ಯಾಂಡ್ ಇದ್ದು, ಚಿನ್ನ ಖರೀದಿ ಮಾಡಲು ಭಾರತೀಯರು ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಅದರಲ್ಲೂ ಆಷಾಢ ಮುಗಿದು ಇನ್ನೇನು ಶ್ರಾವಣ ಶುರುವಾಗಲಿದ್ದು, ಸಾಲು ಸಾಲು ಮದುವೆ ಕೂಡ ಆರಂಭ ಆಗಲಿವೆ. ಹೀಗಿದ್ದಾಗಲೇ, ಚಿನ್ನದ ಬೆಲೆ 1,00,000 ರೂಪಾಯಿ ತಲುಪಿ ಹೊಸ ದಾಖಲೆ, ಈಗ ಎಷ್ಟಿದೆ ಬಂಗಾರದ ರೇಟ್...

ಚಿನ್ನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವತ್ತ ಮುಂದೆ ನುಗ್ಗುತ್ತಿದೆ. ಚಿನ್ನ ಬೆಲೆಯಲ್ಲಿ ದಿಢೀರ್ ಏರಿಕೆಯ ಕಾರಣಕ್ಕೆ ಆಭರಣ ಪ್ರಿಯ ಸಾಮಾನ್ಯ ಜನರು ಕೂಡ ಸಾಕಷ್ಟು ಆಘಾತ ಎದುರಿಸುವಂತೆ ಆಗಿದೆ. ಚಿನ್ನದ ಬೆಲೆ ಇನ್ನೇನು ಭಾರಿ ಪ್ರಮಾಣದಲ್ಲಿ ಕುಸಿತ ಕಾಣಬಹುದು ಎಂಬ ನಿರೀಕ್ಷೆ ಇರುವಾಗ ಮತ್ತೆ ಆಘಾತ ಎದುರಾಗಿದೆ. ಅದರಲ್ಲೂ, ಚಿನ್ನದ ಬೆಲೆ ಇದೀಗ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಕಾರಣಕ್ಕೆ ಮದುವೆ ಮಾಡಿಕೊಳ್ಳುವವರು ಕೂಡ ಚಿನ್ನಕ್ಕೆ ಆರ್ಡರ್ ಕೊಡಲು ಕಾಯುವಂತೆ ಆಗಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

Gold Price Has Been Crossed 100000 Rupees Mark Again

ಚಿನ್ನ ಬೆಲೆ ಮತ್ತಷ್ಟು ಏರಿಕೆ...

ಬೆಂಗಳೂರಲ್ಲಿ ಇಂದು ಪ್ರತಿ 10 ಗ್ರಾಂ ಶುದ್ಧ ಚಿನ್ನ ಅಂದ್ರೆ 24 ಕ್ಯಾರೆಟ್ ಚಿನ್ನದ ಬೆಲೆ 1,00,150 ರೂಪಾಯಿ ಇದೆ. ಹಾಗೇ ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 91,800 ರೂಪಾಯಿ ಇದೆ. ಆದರೆ ಇದೀಗ ಚಿನ್ನ ಮಾರುಕಟ್ಟೆ ತಜ್ಞರು ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಹೀಗಿದ್ದರೂ ಚಿನ್ನದ ಬೆಲೆಯಲ್ಲಿ ಮಾತ್ರ ದೊಡ್ಡ ಮಟ್ಟದಲ್ಲಿ ವ್ಯತ್ಯಾಸ ಆಗಿ, ಇಳಿಕೆ ಮಾತ್ರ ಕಾಣುತ್ತಿಲ್ಲ. ಹೀಗಿದ್ದಾಗಲೇ, ಮತ್ತೆ ಮತ್ತೆ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇನ್ನಷ್ಟು ಟೆನ್ಷನ್ ತರಿಸುತ್ತಿದೆ. ಅಲ್ಲದೆ ಮಧ್ಯಮ & ಬಡ ವರ್ಗದ ಜನರು ಚಿನ್ನ ಖರೀದಿಗೆ ಯೋಚನೆ ಮಾಡುವಂತೆ ಆಗುತ್ತಿದೆ. ಇನ್ನೇನು ಆಷಾಢ ಕಳೆದು ಶ್ರಾವಣ ಬರಲಿದ್ದು ಮದುವೆ ಸೀಸನ್ ಕೂಡ ಶುರು ಆಗಲಿದೆ, ಅಷ್ಟರ ಒಳಗೆ ಚಿನ್ನ ಕುಸಿತ ಕಾಣಲಿ ಅಂತಾ ಡಿಮ್ಯಾಂಡ್ ಇಡುತ್ತಿದ್ದಾರೆ ಆಭರಣ ಪ್ರಿಯರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+