Gold Price: ಚಿನ್ನದ ಬೆಲೆ 5,000 ರೂಪಾಯಿ ದಿಢೀರ್ ಕುಸಿತ, ಬೆಳ್ಳಿ ಖರೀದಿ ಮಾಡುವವರಿಗೂ ಭರ್ಜರಿ ಸುದ್ದಿ
ಚಿನ್ನದ ಬೆಲೆ ಕುಸಿತ ಮುಂದುವರಿದಿದೆ, ಆಕಾಶ ತಲುಪಿ ಇನ್ನೇನು ಚಿನ್ನ ಖರೀದಿ ಮಾಡುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣ ಆಗಿದ್ದಾಗಲೇ ಚಿನ್ನದ ಬೆಲೆ ಕುಸಿತ ಮುಂದುವರಿದಿದೆ. ಇಂದು ಒಂದೇ ದಿನದಲ್ಲಿ ಚಿನ್ನದ ಬೆಲೆ ಬರೋಬ್ಬರಿ 5,000 ರೂಪಾಯಿ ದಿಢೀರ್ ಕುಸಿತ ಕಂಡಿದೆ. ಹೀಗೆ ಆಭರಣ ಪ್ರಿಯರಿಗೆ ಚಿನ್ನದ ಬೆಲೆ ಕುಸಿತ ಭರ್ಜರಿ ಖುಷಿ ನೀಡಿದ್ದರೆ, ಅತ್ತ ಬೆಳ್ಳಿ ಬೆಲೆ ಕೂಡ ಈ ದಿನ ದೊಡ್ಡ ಮಟ್ಟದಲ್ಲಿ ಕುಸಿದು ಬಿದ್ದಿದೆ. ಹಾಗಾದ್ರೆ ಚಿನ್ನದ ಬೆಲೆ 5,000 ರೂಪಾಯಿ ದಿಢೀರ್ ಕುಸಿತ ಕಂಡ ನಂತರ ಈಗ ಎಷ್ಟಿದೆ ಬೆಲೆ? ಬನ್ನಿ ತಿಳಿಯೋಣ.
ಬಂಗಾರದ ಬೆಲೆ ಏರಿಕೆ ಕಂಡು ಜನರು ಸುಸ್ತಾಗಿ ಹೋಗಿದ್ದರು, ನೋಡ ನೋಡುತ್ತಲೇ ಭರ್ಜರಿ ಹೆಚ್ಚಾಗಿದ್ದ ಬಂಗಾರದ ಬೆಲೆ ಇನ್ನೇನು 2,00,000 ರೂಪಾಯಿ ತಲುಪುತ್ತಾ? ಎಂಬ ಭಯ ಕೂಡ ಶುರುವಾಗಿತ್ತು ಆಭರಣ ಪ್ರಿಯರಿಗೆ. ಅದರಲ್ಲೂ ಕೆಲವರು, ಮುಂದೆ ಜೀವನದಲ್ಲಿ ಚಿನ್ನ ಖರೀದಿ ಮಾಡಲು ಆಗಲ್ಲ ಎಂಬ ರೀತಿ ಬೇಸರ ಹೊರ ಹಾಕುತ್ತಿದ್ದರು. ಹಾಗೇ ಚಿನ್ನದ ಬೆಲೆ ಕುಸಿತ ಕಾಣಲಿ ಅಂತಾ ದೇವರ ಬಳಿ ಪ್ರಾರ್ಥನೆ ಮಾಡಿದ್ದವರೂ ಉಂಟು. ಈಗ ಇವರೆಲ್ಲರ ಪ್ರಾರ್ಥನೆ ಫಲಿಸಿದ ರೀತಿ ಕಾಣುತ್ತಿದ್ದು, ಚಿನ್ನದ ಬೆಲೆ ನಿರಂತರವಾಗಿ ಕುಸಿತ ಕಾಣುತ್ತಿದೆ. ಇಂದು ಕೂಡ ಒಂದೇ ದಿನ ಭರ್ಜರಿ 5,000 ರೂಪಾಯಿ ಕುಸಿದಿದೆ ಚಿನ್ನದ ಬೆಲೆ.

10 ಗ್ರಾಂಗೆ 1,54,000 ರೂಪಾಯಿ
ಚಿನ್ನದ ಬೆಲೆ ಬೆಂಗಳೂರು ಸೇರಿ ದೇಶದ ಬಹುತೇಕ ಕಡೆಗಳಲ್ಲಿ ಭಾರಿ ಕುಸಿತ ಕಂಡಿದೆ. ಅದರಲ್ಲೂ ಶುದ್ಧ ಚಿನ್ನ ಎಂದು ಕರೆಯಲಾಗುವ 24 ಕ್ಯಾರೆಟ್ ಬಂಗಾರ ಇಂದು ಒಂದೇ ದಿನದಲ್ಲಿ 5,000 ರೂಪಾಯಿ ಪ್ರತಿ 10 ಗ್ರಾಂಗೆ ಕುಸಿತ ಕಂಡಿದೆ. ಈ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನ ಈಗ ಪ್ರತಿ 10 ಗ್ರಾಂಗೆ 1,54,000 ರೂಪಾಯಿಗೆ ತಲುಪಿದೆ. ಅದೇ ರೀತಿಯಾಗಿ ಆಭರಣ ಚಿನ್ನ ಎನ್ನಲಾಗುವ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 4,600 ರೂಪಾಯಿ ಕುಸಿದು ಹೋಗಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,41,000 ರೂಪಾಯಿ ತಲುಪಿದೆ. ಹೀಗಾಗಿ ಆಭರಣ ಪ್ರಿಯರು ಇದೀಗ ಸಿಕ್ಕಾಪಟ್ಟೆ ಖುಷಿಯಲ್ಲಿ ಕುಣಿದಾಡಿದ್ದಾರೆ.
ಬೆಳ್ಳಿ ಬೆಲೆಯಲ್ಲಿ ಕೂಡ ಭಾರಿ ಕುಸಿತ
ಇತ್ತೀಚಿನ ಮಾಹಿತಿ ಪ್ರಕಾರ ಚಿನ್ನದ ಬೆಲೆ ಶೇಕಡಾ 4 ರಷ್ಟು ಕುಸಿತ ಕಂಡಿದ್ದರೆ, ಇನ್ನೊಂದು ಕಡೆ ಬೆಳ್ಳಿಯ ಬೆಲೆ ಕೂಡ ಭಾರಿ ಕುಸಿತ ಕಂಡು ಶೇಕಡಾ 11 ರಷ್ಟು ಇಳಿಕೆ ಕಂಡಿದೆ. ಈ ಮೂಲಕ ಇದೀಗ ಬೆಳ್ಳಿ ಬೆಲೆ 3,00,000 ರೂಪಾಯಿಗೆ ಕುಸಿತ ಕಂಡಿದ್ದು, ಇಂದು ಒಂದೇ ದಿನದಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 20,000 ಇಳಿಕೆ ಕಂಡಿದೆ. ಈ ಮೂಲಕ ಆಭರಣ ಖರೀದಿ ಮಾಡಲು ಹಾಗೂ ಬೆಳ್ಳಿ ಖರೀದಿ ಮಾಡಲು ಶುಭ ಸಮಯ ಬಂದಂತೆ ಇದೆ. ಆಭರಣ ಪ್ರಿಯರು ಕೂಡ ಬೆಲೆ ಇಳಿಕೆ ಹಿನ್ನೆಲೆ ಸಖತ್ ಖುಷಿಯಾಗಿದ್ದು, ಇನ್ನೇನು ಶುಭಕಾರ್ಯಗಳ ಸೀಸನ್ ಆರಂಭ ಆಗುವ ಹೊತ್ತಲ್ಲೇ ಚಿನ್ನ & ಬೆಳ್ಳಿ ಕುಸಿತ ಖುಷಿ ನೀಡಿದೆ. ಹಾಗೇ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆಯಲ್ಲಿ ಜನರು ಇದ್ದು, ಮಾರುಕಟ್ಟೆ ಇದನ್ನು ನಿರ್ಧಾರ ಮಾಡಲಿದೆ. ಜಾಗತಿಕ ಚಿನ್ನ ಮಾರುಕಟ್ಟೆಯಲ್ಲಿ ಕೂಡ ನಿರಂತರ ಕುಸಿತ ಇದೀಗ ದಾಖಲಾಗುತ್ತಿದೆ.












Click it and Unblock the Notifications