Gold Price on August 1st: ಚಿನ್ನದ ಬೆಲೆ ಸತತ ಎರಡನೇ ದಿನವು ಭರ್ಜರಿ ಇಳಿಕೆ, ದರಪಟ್ಟಿ

ಬೆಂಗಳೂರು, ಆಗಸ್ಟ್ 01: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಆಗಸ್ಟ್ ತಿಂಗಳ ಮೊದಲ ದಿನವೇ ಭರ್ಜರಿ ಇಳಿಕೆ ಆಗಿದೆ. ಕಳೆದೊಂದು ವಾರದಲ್ಲಿ ಅಷ್ಟಾಗಿ ಚಿನ್ನದ ದರ ಏರಿಕೆ ಆಗಿರಲಿಲ್ಲ. ಜುಲೈ 30ರಂದು ಒಂದು ದಿನ ಮಾತ್ರ ಅಲ್ಪ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಆಗಿತ್ತು. ಅದಾದ ಬಳಿಕ ನಿರಂತರ ಇಳಿಕೆ ಕಂಡಿದೆ. ಇಂದು ಶುಕ್ರವಾರ (ಆಗಸ್ಟ್ 01) ಕರ್ನಾಟಕ ಸೇರಿದಂತೆ ಭಾರತದ ಯಾವೆಲ್ಲ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ? ವಿವರ ಇಲ್ಲಿದೆ.

ಚಿನ್ನಾಭರಣ ಮತ್ತು ಬೆಳ್ಳಿ ಬೆಲೆ ಭಾರತ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಇಳಿಕೆ ಆಗಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಇಂದು ಚಿನ್ನದ ಬೆಲೆ 210 ರೂಪಾಯಿ ಇಳಿಕೆ ಆಗಿದ್ದರಿಂದ 10 ಗ್ರಾಂ 24 ಕ್ಯಾರಟ್ ಚಿನ್ನವು 1,00,030 ರೂಪಾಯಿಯಿಂದ ₹99,820ಗೆ ಕುಸಿದಿದೆ. 100 ಗ್ರಾಂ 2,100 ರೂಪಾಯಿ ಕುಸಿದಿದ್ದು,ದರ ₹9,98,200 ನಷ್ಟಿದೆ.

Gold Price Drops Sharply on August 1 Good News for Buyers Ahead of Festive Season

ಇನ್ನೂ 22 ಕ್ಯಾರಟ್ 10 ಗ್ರಾಂ ಚಿನ್ನದ ದರವು ಒಟ್ಟು 200 ರೂ. ಇಳಿಕೆಯಾಗಿದೆ. ನೆನ್ನೆ 91,700 ರೂಪಾಯಿಗೆ ಇದ್ದ ಬಂಗಾರ ಇಂದು 91,500 ರೂಪಾಯಿಗೆ ಇಳಿದಿದೆ. ಇದೇ ಚಿನ್ನದ 100 ಗ್ರಾಂ ದರವು ಬರೋಬ್ಬರಿ 2,000 ರೂ. ಇಳಿಕೆಯಾದರೆ, ಇಂದಿನ ದರ ₹9,15,000 ಇದೆ. ಇತ್ತ ಬೆಳ್ಳಿ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಇದರೊಂದಿಗೆ ಬೆಳ್ಳಿ ದರ 100 ಗ್ರಾಂಗೆ 200 ರೂಪಾಯಿ ಹಾಗೂ ಒಂದು ಕೆ.ಜಿಗೆ (1000 ಗ್ರಾಂ) 2000 ರೂಪಾಯಿ ತಗ್ಗಿದೆ. ಯಾರೆಲ್ಲ ಚಿನ್ನ-ಬೆಳ್ಳಿ ಖರೀದಿಗೆ ಪ್ಲಾನ್ ಮಾಡಿಕೊಂಡಿದ್ದೀರಾ ಸದ್ಯ ಖರೀದಿಸಲು ಉತ್ತಮ ಸಮಯವಾಗಿದೆ. ಮುಂದಿನ ದಿನಗಳಲ್ಲಿ ಹಬ್ಬಗಳು ಎದುರಾಗಲಿದ್ದು, ಮತ್ತಷ್ಟು ದರ ಇಳಿಕೆ ಆಗಬಹುದು. ಹೀಗಾಗಿ ಇನ್ನೂ ಸ್ವಲ್ಪ ದಿನ ಕಾಯಬಹುದು.

ಬೆಂಗಳೂರು ಚಿನ್ನ-ಬೆಳ್ಳಿ ದರ ವಿವರ

* 24 ಕ್ಯಾರೆಟ್ 10 ಗ್ರಾಂ ಚಿನ್ನ: ₹99,820

* 22 ಕ್ಯಾರೆಟ್ 10 ಗ್ರಾಂ ಚಿನ್ನ: 92,850

* 18 ಕ್ಯಾರೆಟ್ 10 ಗ್ರಾಂ ಚಿನ್ನ: ₹74,870

* ಬೆಳ್ಳಿ 1ಕೆ.ಜಿಗೆ : 1,13,000

ಇಂದಿನ 22k ಚಿನ್ನದ 10 ಗ್ರಾಂ ದರಪಟ್ಟಿ

ಬೆಂಗಳೂರು: ₹92,850

ಚೆನ್ನೈ: ₹91,700

ದೆಹಲಿ: ₹90,283

ಹೈದರಾಬಾದ್: ₹91,700

ಕೋಲ್ಕತ್ತಾ: ₹91,700

ಮುಂಬೈ: ₹91,700

ಇಂದಿನ 24k ಚಿನ್ನದ 10 ಗ್ರಾಂ ದರಪಟ್ಟಿ

ಬೆಂಗಳೂರು: ₹1,00,672.00 ರಿಂದ ₹1,00,035.00

ಚೆನ್ನೈ: ₹1,00,656.00 ರಿಂದ ₹1,00,180 ಅಥವಾ ₹98,950

ದೆಹಲಿ: ₹1,00,663.00 ರಿಂದ ₹1,00,180 ಅಥವಾ ₹98,490

ಮುಂಬೈ: ₹1,00,517.00 ರಿಂದ ₹1,00,030 ಅಥವಾ ₹98,660

ಅಹಮದಾಬಾದ್: ₹1,00,080 ರಿಂದ ₹98,790

ಭುವನೇಶ್ವರ: ₹1,00,510.00 ರಿಂದ ₹1,00,030

ಹೈದರಾಬಾದ್: ₹1,00,519.00 ರಿಂದ ₹1,00,030 ಅಥವಾ ₹98,820

ಕೋಲ್ಕತ್ತಾ: ₹1,00,515.00 ರಿಂದ ₹1,00,030 ಅಥವಾ ₹98,530

ಪುಣೆ: ₹1,00,517.00 ರಿಂದ ₹1,00,030 ಅಥವಾ ₹98,660

ಕೊಯಮತ್ತೂರು: ₹1,00,656.00 ರಿಂದ ₹1,00,030

(ವಿಶೇಷ ಸೂಚನೆ ಈ ದರದಲ್ಲಿ ಸಂಜೆ ಹೊತ್ತಿಗೆ ಬದಲಾವಣೆ ಆಗುವ ನಿರೀಕ್ಷೆ ಇದೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+