Gold Price: ಇಂದು ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ! ದಸರಾ ವೇಳೆ ಚಿನ್ನದ ಬೆಲೆ ಭಾರೀ ಇಳಿಕೆ

Gold Price on Sep 25th: ವಾರಗಳ ಅಂತರದಲ್ಲಿ ಬಹುತೇಕ ದಿನಗಳು ಏರಿಕೆ ಕಂಡಿದ್ದ ಚಿನ್ನವು ಸತತ ಎರಡನೇ ದಿನವು ಇಳಿಕೆ ಆಗಿದೆ. ನೆನ್ನೆ ಬುಧವಾರ ನಂತರ ಇಂದು ಗುರುವಾರವು ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಇಂದು ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂದು ಚಿನ್ನ ಖರೀದಿದಾರರಿಗೆ ಭರ್ಜರಿ ನ್ಯೂಸ್ ಸಿಕ್ಕಿದೆ ಎನ್ನಬಹುದು.

ಹಬ್ಬಗಳ ಸಂದರ್ಭದಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ ಆಗಿದ್ದರ ಬಗ್ಗೆ ಚಿಂತೆ ಹಲವರಲ್ಲಿ ಇತ್ತು. ಇದೀಗ ಆ ಚಿಂತೆ ದೂರಾಗಿದ್ದು, ಇವತ್ತು ಚಿನ್ನ ಕೊಳ್ಳುವವರಿಗೆ ಸಮಾಧಾನಕರ ಬೆಲೆ ಸಿಗಲಿದೆ. ಅಂತಾರಾಷ್ಟ್ರೀಯ ಸುಂಕ ನೀತಿ, ಯುದ್ಧಗಳ ಕಾರಣದಿಂದ ಮೊದಲಿಗೆ 24 ಕ್ಯಾರಟ್ ಚಿನ್ನವು ಒಂದು ಲಕ್ಷ ರೂಪಾಯಿ ಗಡಿ ದಾಟಿತ್ತು. ನಂತರ 94 ಸಾವಿರ ರೂ. ಆಸುಪಾಸಿನಲ್ಲಿದ್ದ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯು ಸಹ 1 ಲಕ್ಷ ರೂಪಾಯಿ ದಾಟಿದೆ.

Gold Price Drops Again on Sep 25 Relief for Buyers Silver Rate Stable

ಇಂದು24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 930 ರೂಪಾಯಿ ಇಳಿಕೆ ಆಗಿದೆ. ನೆನ್ನೆ 1,15,370 ರೂಪಾಯಿಗೆ ಕುಸಿದಿದ್ದ ಚಿನ್ನದ ಬೆಲೆ ಇಂದು ₹1,14,440 ಗೆ ಇಳಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯು 9300 ರೂಪಾಯಿ ಕುಸಿತ ಕಂಡಿದೆ.

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯುಲ್ಲಿ ಸಹ ಇಂದು ಒಂದೇ ದಿನ 850 ರೂಪಾಯಿ ಇಳಿಕೆ ಆಗಿದೆ. ನೆನ್ನೆ ಹತ್ತು ಗ್ರಾಂ ಚಿನ್ನಕ್ಕೆ 1,05,750 ರೂಪಾಯಿ ಇದ್ದದ್ದು, ಇಂದು 1,04,900 ರೂಪಾಯಿಗೆ ಕುಸಿತ ಕಂಡಿದೆ. ಇನ್ನೂ 100 ಗ್ರಾಂಗೆ ಒಂದೇ ದಿನಕ್ಕೆ 8500 ರೂಪಾಯಿ ಇಳಿಕೆ ಆದಂತಾಗಿದೆ. ದಸರಾ ಹಬ್ಬಕ್ಕೆ ಯಾರೆಲ್ಲ ಚಿನ್ನ ಖರೀದಿಸಲು ಮುಂದಾಗಿದ್ದರೋ ಅವರಿಗೆಲ್ಲ ದರ ಇಳಿಕೆ ಕೊಂಚ ನೆಮ್ಮದಿ ತಂದಿದೆ.

ಬೆಂಗಳೂರಿನಲ್ಲಿ ಚಿನ್ನ ಬೆಲೆಯು 10 ಗ್ರಾಂಗೆ 1,04,900 ರೂಪಾಯಿ ಇದೆ. ಬೆಳ್ಳಿ ದರವು 100 ಗ್ರಾಂಗೆ 14,260 ರೂಪಾಯಿ ಇದ್ದರೆ, 1ಕೆಜಿಗೆ 1,42,600 ರೂಪಾಯಿ ಇದೆ. ಇಂದು ಬೆಳ್ಳಿ ದರದಲ್ಲಿ ಯಾವ ಏರಿಳಿತಗಳು ಕಂಡು ಬಂದಿಲ್ಲ. ನೀವು ಚಿನ್ನಾಭರಣ ಖರೀದಿಸುತ್ತಿದ್ದರೆ, ವೇಸ್ಟೇಜ್, ಇತರ ಶುಲ್ಕ, ಜಿಎಸ್‌ಟಿ ಸೇರಿ ಬೇರೆ ಬೇರೆ ಮಳಿಗೆಗಳಲ್ಲಿ ಬೆಲೆಯಲ್ಲಿ ಕೊಂಚ ವ್ಯತ್ಯಾಸವಾಗಬಹದು. ಅದನ್ನು ಗಮನಿಸಿ ಕೊಳ್ಳಬೇಕಿದೆ. ಇಂದಿನ 22ಕ್ಯಾರಟ್ 10 ಗ್ರಾಂ ಚಿನ್ನದ ನಗರವಾರು ದರ ವಿವರ ಇಲ್ಲಿದೆ.

ಇಂದಿನ 22ಕ್ಯಾರಟ್ ಚಿನ್ನದ ದರಪಟ್ಟಿ

ಬೆಂಗಳೂರು: 1,06,854.43 ರೂಪಾಯಿ

ಚೆನ್ನೈ: 1,06,000 ರೂಪಾಯಿ

ಹೈದರಾಬಾದ್: 1,05,750 ರೂಪಾಯಿ

ಮುಂಬೈ: 1,05,750 ರೂಪಾಯಿ

ಕೋಲ್ಕತ್ತಾ: 1,04,900 ರೂಪಾಯಿ

ದೆಹಲಿ: 104,900 ರೂಪಾಯಿ

ಕೇರಳ: 1,05,750 ರೂಪಾಯಿ

ಲಕ್ನೋ: 10,505 ರೂಪಾಯಿ

ಭುವನೇಶ್ವರ್: 10,490 ರೂಪಾಯಿ

ಅಹ್ಮದಾಬಾದ್: 10,495 ರೂಪಾಯಿ

ಜೈಪುರ: 10,505 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+