ಸತತ 4ನೇ ದಿನ ಚಿನ್ನದ ಬೆಲೆ ಇಳಿಕೆ: ನಾಲ್ಕು ದಿನದಲ್ಲಿ ಎಷ್ಟು ಕಡಿಮೆ ಗೊತ್ತಾ?

ನವದೆಹಲಿ, ಆಗಸ್ಟ್‌ 24: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಸೋಮವಾರ ಸತತ ನಾಲ್ಕನೇ ದಿನ ಇಳಿಮುಖಗೊಂಡಿದೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಯ ಆಯ್ಕೆಯಾಗಿ ರಕ್ತ ಪ್ಲಾಸ್ಮಾವನ್ನು ಬಳಸಲು ಯುಎಸ್ ಡ್ರಗ್ ರೆಗ್ಯುಲೇಟರ್ ಅಧಿಕಾರ ನೀಡಿದ ನಂತರ ಜಾಗತಿಕ ಮಾರುಕಟ್ಟೆಗಳನ್ನು ಅಪಾಯದ ಭಾವನೆ ಮಟ್ಟ ತಗ್ಗಿದೆ.

Recommended Video

      Congress ನಲ್ಲಿ ಹೆಚ್ಚಿದ ಆಂತರಿಕ ಬಿರುಕು , Kapil Sibal ಗರಂ | Oneindia Kannada

      ಎಂಸಿಎಕ್ಸ್‌ನಲ್ಲಿ ಅಕ್ಟೋಬರ್‌ ಚಿನ್ನದ ಭವಿಷ್ಯವು ಶೇಕಡಾ 0.3ರಷ್ಟು ಇಳಿಕೆಯಾಗಿದ್ದು, 10ಗ್ರಾಂಗೆ 51,865 ರೂಪಾಯಿಗೆ ತಲುಪಿದೆ. ಎಂಸಿಎಕ್ಸ್‌ನಲ್ಲಿ ಸೆಪ್ಟೆಂಬರ್ ಬೆಳ್ಳಿ ಭವಿಷ್ಯವು ಸುಮಾರು ಶೇಕಡಾ 1ರಷ್ಟು ಇಳಿಕೆಗೊಂಡು ಪ್ರತಿ ಕೆಜಿಗೆ 66,426 ರೂಪಾಯಿಗೆ ಮುಟ್ಟಿದೆ.

      ಕಳೆದ ನಾಲ್ಕು ದಿನಗಳಲ್ಲಿ ಹಳದಿ ಲೋಹದ ಬೆಲೆ 10 ಗ್ರಾಂಗೆ 1,700 ರೂ. ತಗ್ಗಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.3ರಷ್ಟು ಹಾಗೂ ಸೆಪ್ಟೆಂಬರ್ ಬೆಳ್ಳಿ ಭವಿಷ್ಯವು ಶೇಕಡಾ 1ರಷ್ಟು ಕುಸಿದಿದೆ. ಆಗಸ್ಟ್ 7 ರಂದು 10 ಗ್ರಾಂಗೆ ಸುಮಾರು 56,200 ರೂ.ಗಳನ್ನು ತಲುಪಿದ ನಂತರ ಚಿನ್ನವು ಇಲ್ಲಿಯವರೆಗೆ 10 ಗ್ರಾಂಗೆ 4,300 ರೂ. ಕಡಿಮೆಯಾಗಿದೆ.

      Gold Price Down For 4th Consecutive Days

      ಕೊಟಕ್ ಸೆಕ್ಯುರಿಟೀಸ್ ಪ್ರಕಾರ, ಹೊಸ ಪ್ರಚೋದಕಗಳು ಇಲ್ಲದಿದ್ದರೆ ಚಿನ್ನವು ಮತ್ತಷ್ಟು ಕುಸಿತಕ್ಕೆ ಸಾಕ್ಷಿಯಾಗಬಹುದು. ಖರೀದಿಸುವವರ ಆಸಕ್ತಿ ಕೆಳಮಟ್ಟದಲ್ಲಿ ಹೊರಹೊಮ್ಮಬಹುದು. ಭಾರತ ಮತ್ತು ಚೀನಾದಲ್ಲಿ ಗ್ರಾಹಕರ ದುರ್ಬಲ ಬೇಡಿಕೆಯು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+