Gold Price: ಮಹಾಶಿವಾರಾತ್ರಿ ದಿನ ನಿಮ್ಮೂರಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ತಿಳಿಯಿರಿ
Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಫೆಬ್ರವರಿ 26) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಗರವಾರು ಬಂಗಾರ ದರದ ವಿವರ: ನಿನ್ನೆ (ಫೆಬ್ರವರಿ 25) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 80,750 ಇದ್ದರೆ, ಇಂದು (ಫೆಬ್ರವರಿ 26) 80,760 ಆಗಿದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 88,090 ಇತ್ತು. ಇನ್ನು ಇಂದು 80,100 ಆಗಿದೆ. ಇಂದು ಶಿವರಾತ್ರಿ ಆದ್ದರಿಂದ, ಬೆಳ್ಳಿ, ಬಂಗಾರದಲ್ಲಿ ಎಷ್ಟು ಏರಿಳಿತ ಆಗಿದೆ? ಹಾಗಾದರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 64,608 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 70,480 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 80,760 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 88,100 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 80,760 ರೂಪಾಯಿ
* ಚೆನ್ನೈ - 80,760 ರೂಪಾಯಿ
* ಮುಂಬೈ - 80,760 ರೂಪಾಯಿ
* ಕೋಲ್ಕತ್ತಾ - 80,760 ರೂಪಾಯಿ
* ನವದೆಹಲಿ - 80,910 ರೂಪಾಯಿ
* ಹೈದರಾಬಾದ್ - 80,760 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 88,100 ರೂಪಾಯಿ
* ಚೆನ್ನೈ - 88,100 ರೂಪಾಯಿ
* ಮುಂಬೈ - 88,100 ರೂಪಾಯಿ
* ಕೋಲ್ಕತ್ತಾ - 88,100 ರೂಪಾಯಿ
* ನವದೆಹಲಿ - 88,250 ರೂಪಾಯಿ
* ಹೈದರಾಬಾದ್ - 88,100 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,00,900 ರೂಪಾಯಿ
* ಚೆನ್ನೈ - 1,07,900 ರೂಪಾಯಿ
* ಮುಂಬೈ - 1,00,900 ರೂಪಾಯಿ
* ಕೋಲ್ಕತ್ತಾ - 1,00,900 ರೂಪಾಯಿ
* ನವದೆಹಲಿ - 1,00,900 ರೂಪಾಯಿ
* ಹೈದರಾಬಾದ್ - 1,07,900 ರೂಪಾಯಿ
ಕಡಿಮೆಯಾಗದ ಬಂಗರ ಕೊಳ್ಳುವವರ ಸಂಖ್ಯೆ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಹಾಗೆಯೇ ಇದೀಗ ಇಂದು ಶಿವರಾತ್ರಿ ಹಿನ್ನೆಲೆ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬ ಬರಲಿದ್ದು, ಈ ವೇಳೆ ಬಂಗಾರ, ಬೆಳ್ಳಿ ದರದರಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಒಟ್ಟಿಯಲ್ಲಿ ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆಯಿರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆ ಎಂದು ಕೊಂಡುಕೊಳ್ಳುತ್ತಲೇ ಇರುತ್ತದೆ. ಇನ್ನೂ ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ.












Click it and Unblock the Notifications