Gold Price: ಚಿನ್ನದ ಬೆಲೆ 16,000 ರೂಪಾಯಿ ಭರ್ಜರಿ ಕುಸಿತ! ಈಗ ಎಷ್ಟಿದೆ ಬೆಲೆ?

ಚಿನ್ನ ಬೆಲೆ ಇಳಿಕೆ ಆಗಲಿ, ಚಿನ್ನ ಬೆಲೆ ಇಳಿಕೆ ಆಗಲಿ ಅಂತಾ ಕಾಯುತ್ತಿದ್ದ ಆಭರಣ ಪ್ರಿಯ ಜನರು ಇದೀಗ ಕುಣಿದಾಡುತ್ತಿದ್ದಾರೆ. ಚಿನ್ನದ ಬೆಲೆ ಇನ್ನೇನು ಪ್ರತಿ 10 ಗ್ರಾಂಗೆ 1 ಲಕ್ಷ ರೂಪಾಯಿ ಆಗಲಿದೆ ಅನ್ನೋ ಭಯ ಚಿನ್ನ ಇಷ್ಟಪಡುವ ಜನರಲ್ಲಿ ಕಾಡುತ್ತಿತ್ತು. ಇಂತಹ ಸಮಯದಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಕುಸಿತ ಕಂಡು ಬಂದಿದೆ. ಈ ಸುದ್ದಿ ಚಿನ್ನ ಇಷ್ಟಪಡುವ ಆಭರಣ ಪ್ರಿಯ ಜನರಿಗೆ ಸಖತ್ ಖುಷಿ ನೀಡಿದೆ. ಅಂದಹಾಗೆ, ಚಿನ್ನದ ಬೆಲೆ ಇದೀಗ 16,000 ರೂಪಾಯಿ ಭರ್ಜರಿ ಕುಸಿತ ಕಂಡಿದ್ದು, ಈಗ ಎಷ್ಟಿದೆ ಬೆಲೆ?

ಚಿನ್ನ ಅನ್ನೋದು ಹೂಡಿಕೆ ಮಾಡುವವರಿಗೆ ಖಜಾನೆ ಎನ್ನುವಂತಾಗಿದೆ. ಯಾಕಂದ್ರೆ ಈ ಹಳದಿ ಲೋಹ ಅಂದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಯಾರಿಗೆ ಆದರೂ ಲಾಭ ಗ್ಯಾರಂಟಿ. ಹೀಗೆ ಚಿನ್ನ ಅನ್ನೋದು ಹೂಡಿಕೆದಾರರ ಜೇಬನ್ನು ತುಂಬಿಸುವ ಅಕ್ಷಯ ಪಾತ್ರೆ ಕೂಡ ಆಗಿದೆ. ಆದರೆ ಚಿನ್ನ ಇಷ್ಟಪಡುವ ಮಹಿಳೆಯರಿಗೆ ಈ ವರ್ಷ ಆಘಾತ ಎದುರಾಗುವುದು ಗ್ಯಾರಂಟಿ, ಅಂತಿದ್ದರು ತಜ್ಞರು. ಯಾಕಂದ್ರೆ ಚಿನ್ನದ ಬೆಲೆ ಇದೇ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಇತ್ತು. ಹೀಗಿದ್ದಾಗಲೇ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬರುತ್ತಿದೆ!

Gold Price Decreased On November 28th Of 2024 And This Is The Price Now

ಚಿನ್ನ 16,000 ರೂಪಾಯಿ ಭರ್ಜರಿ ಕುಸಿತ!

ಬಂಗಾರದ ಬೆಲೆ ಅಂತೂ ಇಂತೂ ಇಳಿಕೆಯನ್ನ ಕಾಣುತ್ತಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿರುವುದು ಜನರಿಗೆ ಕೂಡ ಖುಷಿ ನೀಡಿದೆ. 24 ಕ್ಯಾರಟ್‌ ಅಪರಂಜಿ ಚಿನ್ನ ಅಥವಾ 24 ಕ್ಯಾರಟ್‌ ಶುದ್ಧ ಚಿನ್ನ ಇದೀಗ ಪ್ರತಿ 1 ಕೆಜಿ.ಗೆ ಬರೋಬ್ಬರಿ 16,000 ರೂಪಾಯಿ ಕುಸಿತ ಕಂಡಿದೆ. 22 ಕ್ಯಾರಟ್‌ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಇದೀಗ, 7,09,000 ರೂಪಾಯಿ ಆಗಿದೆ. ಹಾಗೇ ಇದರ ಜೊತೆಗೆ 24 ಕ್ಯಾರಟ್‌ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,73,500 ರೂಪಾಯಿ ಆಗಿದೆ.

ಚಿನ್ನದ ಬೆಲೆ ಭರ್ಜರಿ ಇಳಿಕೆ!

ಚಿನ್ನ ಬೆಲೆ ಈಗ ಇಳಿಕೆ ಕಂಡಿದ್ದು, ಭಾರತದಲ್ಲಿ 22 ಕ್ಯಾರಟ್‌ನ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 70,900 ರೂಪಾಯಿ ಆಗಿದೆ. 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆ 77,350 ರೂಪಾಯಿ ತಲುಪಿದೆ. ಮತ್ತೊಂದ್ಕಡೆ ಬೆಳ್ಳಿ ಬೆಲೆ ಕೂಡ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುವ ನಿರೀಕ್ಷೆ ಇದೀಗ ಇದ್ದು, ಮದುವೆ ಸೇರಿದಂತೆ ಶುಭ ಕಾರ್ಯಕ್ಕೆ ಅಂತಾ ಚಿನ್ನ & ಬೆಳ್ಳಿ ಖರೀದಿ ಮಾಡಲು ಕಾಯುತ್ತಿದ್ದ ಜನರಿಗೆ ಇದೀಗ ಖುಷಿಯಾದ ಸುದ್ದಿ ಸಿಕ್ಕಂತಾಗಿದೆ.

ಒಟ್ನಲ್ಲಿ ಚಿನ್ನದ ಬೆಲೆ ಈ ರೀತಿ ಕುಸಿತ ಕಾಣುತ್ತಿರುವುದು ಜನರಿಗೆ ಕೂಡ ಭಾರಿ ಖುಷಿಯನ್ನ ನೀಡುತ್ತಿದೆ. ಇನ್ನೇನು ಮದುವೆ ಸೀಸನ್ ಮುಗಿಯುವ ದಿನಗಳು ಹತ್ತಿರ ಬರುತ್ತಿದ್ದು, ಚಿನ್ನ ಬೆಲೆ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆ ಇದೆ. ಅಲ್ಲದೆ ಈಗಾಗಲೇ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆ ಕಂಡಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೀಗ ಮೂಡಿದೆ.

ಚಿನ್ನಕ್ಕೆ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗುತ್ತಿದೆ!

ಶುಭಕಾರ್ಯದಲ್ಲಿ ಚಿನ್ನ ಬಹುತೇಕ ಎಲ್ಲಾ ವಿಚಾರದಲ್ಲೂ ಅತ್ಯಗತ್ಯ ವಸ್ತು ಎನ್ನಬಹುದು. ಚಿನ್ನದ ಬಗ್ಗೆ ಹೇಳುತ್ತಾ ಹೋದರೆ ಪುಸ್ತಕವನ್ನೇ ಬರೆಯಬಹುದು. ಯಾಕಂದ್ರೆ ಅಮೂಲ್ಯವಾದ ವಸ್ತು ಚಿನ್ನ ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಸಾಕಷ್ಟು ವಿಧದಲ್ಲಿ ಆಧಾರವಾಗಿದೆ. ಈ ರೀತಿ ಸಾವಿರಾರು ವರ್ಷಗಳಿಂದಲೂ ಮನುಷ್ಯರ ಜೀವನದಲ್ಲಿ ಚಿನ್ನ ಬೆರೆತು ಹೋಗಿದೆ ಈ ಪೈಕಿ ಭಾರತೀಯ ಸಂಪ್ರದಾಯದ ಪ್ರಕಾರ ಯಾವುದೇ ಶುಭಕಾರ್ಯ ನಡೆಯಲು ಚಿನ್ನ ಅತ್ಯಗತ್ಯ. ಚಿನ್ನ ಇಲ್ಲದೆ ಶುಭಕಾರ್ಯ ನಡೆಯುವುದಿಲ್ಲ ಎನ್ನಬಹುದು. ಈ ಹಿನ್ನೆಲೆ ಭಾರತದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+