Gold Price: ಚಿನ್ನ ಬೆಲೆ 9,000 ರೂಪಾಯಿ ಭರ್ಜರಿ ಕುಸಿತ, ಆಭರಣ ಪ್ರಿಯರಿಗೆ ಭರ್ಜರಿ ಸುದ್ದಿ!

ಚಿನ್ನದ ಬೆಲೆ ಭಾರಿ ಭರ್ಜರಿ ಕುಸಿತ ಕಾಣುತ್ತಿದೆ, ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡು ಬಂದಿತ್ತು. ಹೀಗಿದ್ದಾಗಲೇ ಆಭರಣ ಪ್ರಿಯರು ಈ ಸುದ್ದಿ ಕೇಳಿ ಸಿಕ್ಕಾಪಟ್ಟೆ, ಖುಷಿಪಟ್ಟು ಸಂಭ್ರಮಿಸಿದ್ದರು. ಇಂತಹ ಸಮಯದಲ್ಲೇ ಮತ್ತೆ ಚಿನ್ನದ ಬೆಲೆಯಲ್ಲಿ ಇಂದು ಭಾರಿ ಕುಸಿತ ಕಂಡು ಬಂದಿದೆ. ಈ ಮೂಲಕ ಚಿನ್ನದ ಬೆಲೆ ಮತ್ತಷ್ಟು ಕಡಿಮೆ ಆಗಿಬಿಟ್ಟಿದೆ. ಹಾಗಾದ್ರೆ ಬಂಗಾರದ ಬೆಲೆ ಕುಸಿತದ ನಂತರ ಈಗ ಎಷ್ಟಿದೆ?

ಚಿನ್ನ ಬೆಲೆ 9,000 ರೂಪಾಯಿ ಭರ್ಜರಿ ಕುಸಿತ ಕಂಡಿದೆ, ಅಷ್ಟಕ್ಕೂ ಈ ರೀತಿಯಾಗಿ ಚಿನ್ನ ಕುಸಿತ ಕಾಣಲು ಅಂತಾರಾಷ್ಟ್ರೀಯ ಘಟನೆಗಳ ಜೊತೆಗೆ ಭಾರತದಲ್ಲಿ ಮದುವೆ ಸೀಸನ್ ಈಗ ಮುಕ್ತಾಯ ಆಗಿರುವ ವಿಚಾರ ಕೂಡ ಒಂದು ಕಾರಣ. ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯು ಆಗಿದ್ದ ಕಾರಣಕ್ಕೆ ಆಭರಣ ಪ್ರಿಯರು ಚಿನ್ನ ಖರೀದಿ ಮಾಡಲು ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಇತ್ತು. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

Gold Price And Silver Price Is Decreased On December 14th Of 2024

ಚಿನ್ನ ಬೆಲೆ 9,000 ರೂಪಾಯಿ ಕುಸಿತ!

ಸಿರಿಯಾ ದೇಶದ ಆಂತರಿಕ ಯುದ್ಧ ಭಯ ಹುಟ್ಟಿಸಿತ್ತು, ಹೀಗಾಗಿ ಈ ವಾರದ ಆರಂಭದಲ್ಲೇ ಚಿನ್ನ ಭಾರಿ ಏರಿಕೆ ಕಂಡು ಆಭರಣ ಪ್ರಿಯರಿಗೆ ಶಾಕ್ ನೀಡಿತ್ತು. ಮದುವೆ ಸೀಸನ್ ಕಾರಣ ಕೂಡ ಚಿನ್ನಕ್ಕೆ ಡಿಮ್ಯಾಂಡ್ ಬಂದಿತ್ತು. ಈ ಎಲ್ಲಾ ಕಾರಣಗಳಿಗೆ ಚಿನ್ನ ಬೆಲೆ & ಬೆಳ್ಳಿ ಬೆಲೆ ಏರಿಕೆ ಕಂಡಿತ್ತು. ಆದರೆ ಇಂದು ಒಂದೇ ದಿನ ಚಿನ್ನ ಬೆಲೆ 9,000 ರೂಪಾಯಿ ಭರ್ಜರಿ ಕುಸಿತ ಕಂಡಿದ್ದು, ಆಭರಣ ಖರೀದಿ ಮಾಡಲು ಕಾಯುತ್ತಿದ್ದ ಜನರಿಗೆ ಖುಷಿ ನೀಡಿದೆ.

ಚಿನ್ನದ ಬೆಲೆ ಈಗ ಇಷ್ಟಿದೆ!

22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಈಗ ಪ್ರತಿ 100 ಗ್ರಾಂಗೆ 9,000 ರೂಪಾಯಿ ಕುಸಿತವಾಗಿದ್ದು, ಈ ಮೂಲಕ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,14,000 ರೂಪಾಯಿಗೆ ಕುಸಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 900 ರೂಪಾಯಿ ಕುಸಿದಿದ್ದು, ಸದ್ಯಕ್ಕೆ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 71,400 ರೂಪಾಯಿ ಆಗಿದೆ. ಹಾಗೇ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 980 ರೂಪಾಯಿ ಕುಸಿದು 77,890 ರೂಪಾಯಿಗೆ ಇಳಿಕೆ ಕಂಡಿದೆ. ಇನ್ನುಳಿದಂತೆ ಬೆಳ್ಳಿ ಬೆಲೆ 92,500 ರೂಪಾಯಿ ಪ್ರತಿ ಕೆಜಿಗೆ ಮಾರಾಟ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+