Gold: 2026ರ ಅಂತ್ಯಕ್ಕೆ ಚಿನ್ನದ ಬೆಲೆ ಎಷ್ಟಾಗಲಿದೆ ? ಜೆಪಿ ಮಾರ್ಗನ್ ಭವಿಷ್ಯದಲ್ಲಿ ಏನಿದೆ
Gold: ಕಳೆದ ವಾರವಷ್ಟೇ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದ ಚಿನ್ನದ ದರ, ಇದೀಗ ಅಷ್ಟೇ ವೇಗವಾಗಿ ಕೆಳಮುಖವಾಗಿ ಚಲಿಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಏರಿಳಿತಗಳಿಂದಾಗಿ, ಹಳದಿ ಲೋಹದ ಮೌಲ್ಯದಲ್ಲಿ ಕಳೆದ ಎರಡು ವಾರಗಳಲ್ಲೇ ಅತ್ಯಂತ ಕನಿಷ್ಠ ಮಟ್ಟ ದಾಖಲಾಗಿದೆ. ವಿಶೇಷವಾಗಿ ಜನವರಿ 30 ರಂದು ಒಂದೇ ದಿನ ಚಿನ್ನದ ದರದಲ್ಲಿ ಶೇ9.8% ರಷ್ಟು ಭಾರಿ ಕುಸಿತ ಕಂಡುಬಂದಿದ್ದು, ಇದು 1983ರ ನಂತರದ ಅತಿದೊಡ್ಡ ಏಕದಿನದ ಕುಸಿತ ಎಂದು ಮಾರುಕಟ್ಟೆ ವಿಶ್ಲೇಷಕರು ಬಣ್ಣಿಸಿದ್ದಾರೆ.
ಕುಸಿತದ ವಿವರ
ಜನವರಿ 29 ರಂದು ಪ್ರತಿ ಔನ್ಸ್ಗೆ 5,594.82 ಡಾಲರ್ ತಲುಪುವ ಮೂಲಕ ಚಿನ್ನ ಸಾರ್ವಕಾಲಿಕ ದಾಖಲೆ ಬರೆದಿತ್ತು. ಆದರೆ, ಇದು ಹೆಚ್ಚು ದಿನ ಉಳಿಯಲಿಲ್ಲ. ದಾಖಲೆ ಬರೆದ ನಂತರದ ದಿನಗಳಲ್ಲಿ ಚಿನ್ನದ ಮೌಲ್ಯದಲ್ಲಿ ಸುಮಾರು $900 ಡಾಲರ್ನಷ್ಟು ಇಳಿಕೆಯಾಗಿದೆ.

ಪ್ರಸ್ತುತ ಸ್ಪಾಟ್ ಗೋಲ್ಡ್ (Spot Gold) ದರವು ಶೇಕಡಾ 3.2 ರಷ್ಟು ಇಳಿಕೆಯಾಗಿದ್ದು $4,708.19 ಕ್ಕೆ ತಲುಪಿದೆ. ಈ ವರ್ಷದ ಆರಂಭದಲ್ಲಿ ಹೂಡಿಕೆದಾರರು ಗಳಿಸಿದ್ದ ಬಹುತೇಕ ಲಾಭ ಈ ಕುಸಿತದಿಂದಾಗಿ ಕೊಚ್ಚಿಕೊಂಡು ಹೋಗಿದೆ. ಸಿಎಂಇ (CME) ಮಾರ್ಜಿನ್ ಅವಶ್ಯಕತೆಗಳಲ್ಲಿನ ಹೆಚ್ಚಳವು ಮಾರಾಟದ ಒತ್ತಡಕ್ಕೆ ಕಾರಣವಾಗಿದ್ದು, ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಗಿಬಿದ್ದಿದ್ದೇ ಈ ಹಠಾತ್ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಅಸ್ಥಿರತೆ ಇದ್ದರೂ, ಜಾಗತಿಕ ಹಣಕಾಸು ಸಂಸ್ಥೆ ಜೆಪಿ ಮೋರ್ಗನ್ (J.P. Morgan) ಚಿನ್ನದ ಭವಿಷ್ಯದ ಬಗ್ಗೆ ಸಕಾರಾತ್ಮಕವಾಗಿಯೇ ಇದೆ. ಸೋಮವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ, "ಅಲ್ಪಾವಧಿಯ ಏರಿಳಿತಗಳನ್ನು ಹೊರತುಪಡಿಸಿದರೆ, ಮಧ್ಯಮ ಅವಧಿಯಲ್ಲಿ ಚಿನ್ನದ ಮೇಲೆ ನಮಗೆ ದೃಢವಾದ ನಂಬಿಕೆಯಿದೆ," ಎಂದು ಸಂಸ್ಥೆ ತಿಳಿಸಿದೆ. ಜೆಪಿ ಮೋರ್ಗನ್ ಅಂದಾಜಿನ ಪ್ರಕಾರ, 2026ರ ಅಂತ್ಯದ ವೇಳೆಗೆ ಚಿನ್ನದ ದರವು ಪ್ರತಿ ಔನ್ಸ್ಗೆ $6,300 ತಲುಪುವ ಸಾಧ್ಯತೆಯಿದೆ.
ಇದಕ್ಕೆ ಪ್ರಮುಖ ಕಾರಣವೆಂದರೆ ಕೇಂದ್ರೀಯ ಬ್ಯಾಂಕ್ಗಳ (Central Banks) ಹೂಡಿಕೆ. ವಿವಿಧ ದೇಶಗಳ ರಿಸರ್ವ್ ಬ್ಯಾಂಕ್ಗಳು ತಮ್ಮ ಮೀಸಲು ನಿಧಿಯನ್ನು ವೈವಿಧ್ಯಮಯವಾಗಿಸಲು ಚಿನ್ನದ ಮೊರೆ ಹೋಗುತ್ತಿವೆ. 2026ರಲ್ಲಿ ಕೇಂದ್ರೀಯ ಬ್ಯಾಂಕ್ಗಳು ಸುಮಾರು 800 ಟನ್ಗಳಷ್ಟು ಚಿನ್ನವನ್ನು ಖರೀದಿಸುವ ನಿರೀಕ್ಷೆಯಿದೆ ಎಂದು ಜೆಪಿ ಮೋರ್ಗನ್ ಮುನ್ಸೂಚನೆ ನೀಡಿದೆ. ಕಾಗದದ ಆಸ್ತಿಗಿಂತ (Paper Assets) ನೈಜ ಆಸ್ತಿಯಾದ (Real Asset) ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂಬ ಭಾವನೆ ಬಲವಾಗುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಡಾಯ್ಚ ಬ್ಯಾಂಕ್ ಅಭಿಪ್ರಾಯವೇನು ?
ಇನ್ನೊಂದೆಡೆ, ಜರ್ಮನಿಯ ಪ್ರಮುಖ ಬ್ಯಾಂಕ್ ಆಗಿರುವ ಡಾಯ್ಚ ಬ್ಯಾಂಕ್ (Deutsche Bank) ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಸ್ತುತ ಬೆಲೆ ಹೊಂದಾಣಿಕೆಯ ಹೊರತಾಗಿಯೂ, ಹೂಡಿಕೆದಾರರ ಬೇಡಿಕೆ ಬಲವಾಗಿರುವುದರಿಂದ 2026ರಲ್ಲಿ ಚಿನ್ನದ ದರ $6,000 ಮಟ್ಟದಲ್ಲಿ ಸ್ಥಿರವಾಗಲಿದೆ ಎಂದು ಬ್ಯಾಂಕ್ ಪುನರುಚ್ಚರಿಸಿದೆ.
ಒಟ್ಟಾರೆಯಾಗಿ, ಈಗಿನ ಕುಸಿತವು ಹೂಡಿಕೆದಾರರಿಗೆ ಆತಂಕ ತಂದಿರುವುದು ನಿಜ. ಆದರೆ, ದೀರ್ಘಾವಧಿಯ ಹೂಡಿಕೆದಾರರಿಗೆ ಇದು ಕಳವಳಕಾರಿ ವಿಷಯವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆ ಚಿನ್ನವು ಸುರಕ್ಷಿತ ಹೂಡಿಕೆಯ ತಾಣವಾಗಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳಲಿದೆ ಎಂಬುದು ವಿಶ್ಲೇಷಕರ ಮಾತು.
-
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral












Click it and Unblock the Notifications