Gold Price: ಭಾರತದಲ್ಲಿ 'ಚಿನ್ನ' ಆಮದು ಪ್ರಮಾಣ ಭಾರೀ ಏರಿಕೆ: ಬೆಲೆ, ಅಂಕಿ-ಸಂಖ್ಯೆ ವಿವರ
ಬೆಂಗಳೂರು, ಮೇ 11: ಭಾರತದಲ್ಲಿ ಚಿನ್ನದ ಬೆಲೆ ಎಷ್ಟೇ ಹಚ್ಚಾದರೂ ಸಹ ಬೇಡಿಕೆ ಮಾತ್ರ ಇಳಿಕೆ ಆಗುವುದಿಲ್ಲ. ಇತರ ದೇಶಗಳ ಪೈಕಿ ಭಾರತ ಚಿನ್ನದ ಬೇಡಿಯಲ್ಲಿ ಮಹತ್ವದ ಸ್ಥಾನದಲ್ಲಿದೆ. ಈ ಚಿನ್ನ ಪೂರೈಕೆಗಾಗಿ ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಚಿನ್ನದ ಆಮದು ಪ್ರಮಾಣ ಭಾರೀ ಏರಿಕೆ ಆಗಿದೆ.
ಭಾರತ ದೇಶದ ಚಿನ್ನದಲ್ಲಿ ಶ್ರೀಮಂತ ದೇಶ ಎಂದರೆ ತಪ್ಪಾಗಲಾರದು. ಹೊರ ದೇಶಗಳಿಂದ ಚಿನ್ನವನ್ನು ಖರೀದಿಸಿ ತರಲು (ಆಮದು) ಹೆಚ್ಚು ಖರ್ಚಾಗುತ್ತದೆ. ಚಿನ್ನ ಎಂಬುದು ದೇಶದ ಆರ್ಥಿಕತೆಯ ಬಹುಮುಖ್ಯ ಅಂಶವಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಭಾರತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಆಮದು ಮಾಡಿಕೊಂಡಿದೆ.

ಮೂಲಗಳ ಪ್ರಕಾರ, ಚೀನಾ ಬಿಟ್ಟರೆ ಚಿನಕ್ಕೆ ಹೆಚ್ಚು ಬೇಡಿಕೆ ಇರುವ ಮತ್ತು ಹೆಚ್ಚಿನ ಪ್ರಮಾಣದ ಚಿನ್ನ ಆಮದು ಮಾಡಿಕೊಳ್ಳುವುದು ಅತೀ ದೊಡ್ಡ ಗ್ರಾಹಕ ದೇಶ ಎಂದರೆ ಅದು ಭಾರತ. ಹಾಗಾದರೆ ಆಮದು ಆದ ಚಿನ್ನವೆಷ್ಟು? ಹಿಂದಿ ವರ್ಷಕ್ಕಿಂತ ಎಷ್ಟು ಹೆಚ್ಚಾಗಿದೆ, ಖರ್ಚು, ಅಂಕಿ ಸಂಖ್ಯೆ ಇಲ್ಲಿ ತಿಳಿಯಿರಿ.
ಹೆಚ್ಚುವರಿ 45.54 ಬಿಲಿಯನ್ ಡಾಲರ್ ಚಿನ್ನ ಆಮದು
ಭಾರತವು 2023-24 ಆರ್ಥಿಕ ವರ್ಷದಲ್ಲಿ ಚಿನ್ನದ ಆಮದು ಪ್ರಮಾಣ ಹೆಚ್ಚಿಸಿಕೊಂಡಿದೆ. ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನ ಚಿನ್ನ ಭಾರತಕ್ಕೆ ಬಂದಿದೆ. ಚಿನ್ನ ಆಮದು ಶೇಕಡಾ 30ರಷ್ಟು ಹೆಚ್ಚಾಗಿದ್ದು, ಇದರ ವೆಚ್ಚ ಬರೋಬ್ಬರಿ 45.54 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
2022-23ರಲ್ಲಿ ಚಿನ್ನ ಆಮದು ವಿವರ
ಇದನ್ನು ಹಿಂದಿನ ಆರ್ಥಿಕ ವರ್ಷದ ಚಿನ್ನದ ಆಮದಿಗೆ ಹೋಲಿಕೆ ಮಾಡಿದರೆ, 2022-23 ಚಿನ್ನ ಆಮದು ಕಡಿಮೆ ಇದೆ. ಆ ವರ್ಷ 2022-23ರಲ್ಲಿ 35 ಬಿಲಿಯನ್ ಡಾಲರ್ ಮೌಲ್ಯದಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಇದು ಎರಡು ಪಾಸಿಟಿವ್ ಮತ್ತು ನೆಗಟಿವ್ ಎರಡು ರೀತಿಯ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ಭಾರತ ಯಾವ ದೇಶದದಿಂದ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆ ಕಾಡಬಹುದು. ಇದಕ್ಕೆ ಭಾರತದ ವಾಣಿಜ್ಯ ಸಚಿವಾಲಯದ ಮಾಹಿತಿ-ಅಂಕಿ ಅಂಶದ ಪ್ರಕಾರ ಹೇಳುವುದಾದರೆ, ನಮ್ಮ ದೇಶದ ಸ್ವಿಟ್ಜರ್ಲೆಂಡ್ ನಿಂದ ಗರಿಷ್ಠ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ.

ಭಾರತಕ್ಕೆ ಚಿನ್ನ ರಫ್ತಿನ ದೇಶ ಯಾವುದು?
ಭಾರತಕ್ಕೆ ಆಮದಾಗುವ ಸ್ವಿಟ್ಜರ್ಲೆಂಡ್‌ನ ಚಿನ್ನದ ಪಾಲು ಶೇಕಡಾ 40ರಷ್ಟಿದೆ. ಭಾರತಕ್ಕೆ ರಫ್ತು ಮಾಡುವ ದೊಡ್ಡ ದೇಶದ ಸಾಲಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇದೆ. ಇವುಗಳ ಜೊತೆಗೆ ಭಾರತ ಇನ್ನಿತರ ಚಿನ್ನ ಖರೀದಿಯ ಆಮದು ವೆಚ್ಚ 16 ರಷ್ಟಿದೆ. ದಕ್ಷಿಣ ಆಫ್ರಿಕಾದ ಪಾಲು ಶೇಕಡಾ 10 ರಷ್ಟಿದೆ ಎಂದು ಅಂಕಿ-ಸಂಖ್ಯೆಗಳು ದೃಢಪಡಿಸಿವೆ.
ಸದರಿ ಆಮದು ಮಾಡಿಕೊಳ್ಳುವ ಚಿನ್ನದ ಮೇಲೆ ಶೇಕಡಾ 15 ರಷ್ಟು ಆಮದು ಸುಂಕ ಇದೆ. ಸದ್ಯ ಚಿನ್ನದ ಬೆಲೆ ಏರಿಗುತಿಯಲ್ಲಿ ಸಾಗುತ್ತಿದೆ. ಪ್ರಸ್ತುತದಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂ ಬೆಲೆ 73,000 ರೂಪಾಯಿಗೂ ಹೆಚ್ಚಿದೆ.
ದಿನದಿಂದ ದಿನಕ್ಕೆ ಚಿನ್ನದ ಬೆಲೆ ಹೆಚ್ಚುತ್ತಿರುವುದು ಸಣ್ಣ ಗ್ರಾಹಕರು ಸೇರಿದಂತೆ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ. ಹೀಗೆ ಬೆಲೆ ಏರಿಕೆ ಆದರೆ, ಇದನ್ನು ಖರೀದುಸುವುದಾದರೂ ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಅದೇನೆ ಇದ್ದರೂ ಚಿನ್ನ ಬೆಲೆ ಏರಿಕೆ, ಬೇಡಿಕೆ ತಡೆ ಇಲ್ಲದಾಗಿದೆ.












Click it and Unblock the Notifications