10 ಗ್ರಾಂ ಚಿನ್ನಕ್ಕೆ 25 ಸಾವಿರ ಕೊಟ್ರೆ ಸಾಕು
ಬೆಂಗಳೂರು, ನ.8: ಬಂಗಾರ ಪ್ರಿಯರಿಗೆ ಸಿಹಿಸುದ್ದಿ. ದೇಶದ ಆರ್ಥಿಕ ಅಭಿವೃದ್ಧಿ ಚೇತರಿಕೆ ಹಾದಿ ಹಿಡಿದಿರುವದಲ್ಲದೇ ಚಿನ್ನದ ಬೆಲೆಯಲ್ಲೂ ಇಳಿಕೆ ಮುಂದುವರಿದಿದೆ. ಕಳೆದ ನಾಲ್ಕು ವರ್ಷದಲ್ಲೇ ಚಿನ್ನ ಅತಿ ಕಡಿಮೆ ದರ ದಾಖಲಿಸಿದೆ.
ಶನಿವಾರ ಭಾರತದ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 25,800 ಕ್ಕೆ ಬಂದು ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚೇತರಿಕೆ, ಮೌಲ್ಯ ಹೆಚ್ಚಿಸಿಕೊಳ್ಳುತ್ತಿರುವ ಭಾರತದ ರೂಪಾಯಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹೆಚ್ಚಿದ ವಹಿವಾಟು, ಹೆಚ್ಚಿದ ಆರ್ಥಿಕಾಭಿವೃದ್ಧಿ ದರ ಎಲ್ಲವೂ ಚಿನ್ನದ ಬೆಲೆ ಇಳಿಕೆ ಮೇಲೆ ನೇರ ಪರಿಣಾಮ ಬೀರಿದೆ.[ಚಿನ್ನದ ದರ ಮತ್ತೆ ಕುಸಿತ, ಗ್ರಾಹಕರಿಗೆ ಸಂತಸ]

2008 ನಂತರ ಈ ವರ್ಷದ ಅಂತಿಮ ತ್ರೈಮಾಸಿಕವೇ ವಾಣಿಜ್ಯ ದೃಷ್ಟಿಕೋನದಲ್ಲಿ ಉತ್ತಮವಾಗಿದೆ. ಜನರು ರಿಸ್ಕ್ ಇರುವ ಷೇರುಗಳ ಮೇಲೂ ಹಣ ಹೂಡಿಕೆಗೆ ಮುಂದಾಗುತ್ತಿರುವುದು ಹೊಸ ಬೆಳವಣಿಗೆ ಎಂದೇ ಹೇಳಬಹುದು.
ಕೆಜಿ ಬೆಳ್ಳಿಯ ಬೆಲೆ 34,900 ರೂ. ಸುತ್ತ ಮುತ್ತ ಗಿರಕಿ ಹೊಡೆಯುತ್ತಿದೆ. ಭಾರತದಲ್ಲಿ ಮದುವೆಯ ಸೀಸನ್ ಆರಂಭವಾಗುವವರೆಗೆ ಈ ರೀತಿಯ ಕುಸಿತ ಮುಂದುವರಿಯಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ದೇಶದ ಆಮದು-ರಫ್ತು ವ್ಯವಹಾರದ ಮೇಲೂ ಪರಿಣಾಮ ಉಂಟುಮಾಡುತ್ತಿವೆ.












Click it and Unblock the Notifications