Gold Rate Today: ಆಭರಣ ಮಾರುಕಟ್ಟೆಯಲ್ಲಿ ಭಾನುವಾರದಂದು ಚಿನ್ನ, ಬೆಳ್ಳಿ ಬೆಲೆ ಎಷ್ಟು?

ಚಿನ್ನ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಚಿನ್ನ, ಬೆಳ್ಳಿಯ ದರಗಳು ಮಾತ್ರ ಜನರ ಕೈ ಸುಡುತ್ತಿದೆ. ಎಷ್ಟೇ ದರ ಹೆಚ್ಚಳ ಆದ್ರೂ ಕೂಡ ಚಿನ್ನದ ಮೇಲಿನ ಕ್ರೇಜ್‌ ಮಾತ್ರ ಜನರಲ್ಲಿ ಒಂದು ಚೂರು ಕಡಿಮೆಯಾಗಲ್ಲ. ಹಾಗಾಗಿ ಶುಭಕಾರ್ಯಗಳಿಗೆ ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇಂದಿನ ಮಾರುಕಟ್ಟೆಯ ಟ್ರೆಂಡ್ ತಿಳಿದುಕೊಳ್ಳುವುದು ಬಹುಮುಖ್ಯ.

ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆ, ಭಾನುವಾರದ ರಜಾ ದಿನದಂದು ಬಂಗಾರ ಹಾಗೂ ಬೆಳ್ಳಿಯ ದರದಲ್ಲಿ ಯಾವ ಬದಲಾವಣೆ ಆಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಹಾಗಾದರೆ, ಮಾರುಕಟ್ಟೆಯ ಇಂದಿನ ನಿಖರ ಬೆಲೆ ಎಷ್ಟಿದೆ? ನಿಮ್ಮೂರಿನಲ್ಲಿ ಆಭರಣಗಳ ದರ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Gold and Silver Rate Today in Bengaluru Sept 20 2026 22K Gold Price MCX Updates amp amp Top Cities List

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಗ್ರಾಹಕರಿಗೆ ಅಚ್ಚರಿ ಮೂಡಿಸಿಲ್ಲ, ಬದಲಾಗಿ ಸ್ಥಿರತೆ ಕಾಯ್ದುಕೊಂಡಿದೆ. ಮಾರುಕಟ್ಟೆಯ ಮಾಹಿತಿಯ ಪ್ರಕಾರ, ಇಂದು (ಸೆಪ್ಟೆಂಬರ್ 20, 2026) ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 14,285 ರೂಪಾಯಿ ಇದೆ. ಅದೇ ರೀತಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 1,42,850 ರೂಪಾಯಿ ಆಗಿದೆ. ಇನ್ನು 24 ಕ್ಯಾರಟ್ ಶುದ್ಧ ಚಿನ್ನದ ಬಗ್ಗೆ ಹೇಳುವುದಾದರೆ, 1 ಗ್ರಾಂಗೆ 15,584 ರೂಪಾಯಿ ಹಾಗೂ 10 ಗ್ರಾಂಗೆ 1,55,840 ರೂಪಾಯಿಗೆ ತಲುಪಿದೆ.

ಬರೀ ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯೂ ಗಮನಾರ್ಹವಾಗಿದ್ದು, ಬೆಂಗಳೂರು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 2,55,000 ರೂಪಾಯಿಗೆ ಮಾರಾಟವಾಗುತ್ತಿದೆ. ಜಾಗತಿಕ ಮಾರುಕಟ್ಟೆಯ ಟ್ರೆಂಡ್‌ಗಳಂತೆ MCX ನಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ನಿರಂತರವಾಗಿ ವಹಿವಾಟು ನಡೆಸುತ್ತಿದ್ದು, ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿವೆ.

ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಶನಿವಾರದಂದು (ನಿನ್ನೆ) ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,42,850 ರೂ. ಇತ್ತು, ಇಂದು ಕೂಡ ಅದೇ ದರ ಮುಂದುವರಿದಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 1,55,840 ರೂ. ಇದ್ದು, ಇಂದೂ ಅದೇ ಬೆಲೆ ಇದೆ. ಇನ್ನು ಬೆಳ್ಳಿಯ ದರವನ್ನು ಗಮನಿಸುವುದಾದರೆ, ನಿನ್ನೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಗೆ 2,55,000 ರೂಪಾಯಿ ಇತ್ತು, ಇಂದೂ ಕೂಡ ಯಾವುದೇ ಏರಿಳಿತವಿಲ್ಲದೆ ಅದೇ ಬೆಲೆ ಕಾಯ್ದುಕೊಂಡಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ

ದೇಶದ ಇತರೆ ಪ್ರಮುಖ ನಗರಗಳಲ್ಲೂ ಬಂಗಾರದ ಬೆಲೆಯಲ್ಲಿ ಕೊಂಚ ವ್ಯತ್ಯಾಸಗಳಿದ್ದು, ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ ಈ ಕೆಳಗಿನಂತಿದೆ:

* ಬೆಂಗಳೂರು - 14,285 ರೂಪಾಯಿ

* ದೆಹಲಿ - 14,300 ರೂಪಾಯಿ

* ಚೆನ್ನೈ - 14,285 ರೂಪಾಯಿ

* ಮುಂಬೈ - 14,285 ರೂಪಾಯಿ

* ಹೈದರಾಬಾದ್ - 14,285 ರೂಪಾಯಿ

* ಅಹಮದಾಬಾದ್ - 14,290 ರೂಪಾಯಿ

* ಪುಣೆ - 14,285 ರೂಪಾಯಿ

* ಕೋಲ್ಕತ್ತಾ - 14,285 ರೂಪಾಯಿ

ಗಮನಿಸಿ: ಮೇಲೆ ನೀಡಿರುವ ಚಿನ್ನದ ಮೂಲ ಬೆಲೆಯಲ್ಲಿ ಜಿಎಸ್‌ಟಿ ಮತ್ತು ಮೇಕಿಂಗ್‌ ಚಾರ್ಚ್ಸ್‌ ಸೇರಿಸಿಲ್ಲ. ಆಭರಣ ಖರೀದಿಸಲು ಅಂಗಡಿಗೆ ಭೇಟಿ ನೀಡಿದಾಗ ಈ ಬೆಲೆಯಲ್ಲಿ ಸ್ವಲ್ಪ ಬದಲಾವಣೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+