ಮಾರ್ಚ್ 30ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?

ಬೆಂಗಳೂರು, ಮಾರ್ಚ್ 30: ಒಂದು ದಿನದ ಏರಿಕೆಯ ಬಳಿಕ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಮಂಗಳವಾರ ಮತ್ತೆ ಅಲ್ಪ ಕುಸಿತವಾಗಿದೆ. ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಗಮನಾರ್ಹ ದರ ಇಳಿಕೆಯಾಗಿದೆ. ಇನ್ನು ಕೆಲವು ನಗರಗಳು ಬೆಲೆ ಏರಿಕೆಯ ಬಿಸಿ ಕಂಡಿದೆ. ಸೋಮವಾರ 100 ಗ್ರಾಂಗೆ 100 ರೂಪಾಯಿಯಷ್ಟು ಹೆಚ್ಚಳವಾಗಿದ್ದ ಬಂಗಾರದ ದರ, ಮಂಗಳವಾರ ಅಷ್ಟೇ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರತಿ ಗ್ರಾಂ ಚಿನ್ನದ ಬೆಲೆ ಮಂಗಳವಾರ ಬೆಳಗಿನ ವೇಳೆಗೆ 4,297 ರೂಪಾಯಿಯಷ್ಟಿದೆ.

ದೇಶದಲ್ಲಿ 22 ಕ್ಯಾರಟ್‌ನ ಸರಾಸರಿ ಚಿನ್ನದ ದರ ಪ್ರತಿ 10 ಗ್ರಾಂಗೆ 42,970 ರೂಪಾಯಿಗೆ ಇಳಿದಿದೆ. 24 ಕ್ಯಾರಟ್ ತೂಕದ ಬಂಗಾರದ ದರ 43,970 ರೂಪಾಯಿಗೆ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಪ್ರತಿ ಹತ್ತು ಗ್ರಾಂಗೆ ಕೇವಲ 10 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯೂ ಪ್ರತಿ 100 ಗ್ರಾಂಗೆ 180 ರೂಪಾಯಿ ಅಗ್ಗವಾಗಿದೆ. ಪ್ರತಿ ಒಂದು ಕೆಜಿ ಬೆಳ್ಳಿ 1,800 ರೂ. ಇಳಿಕೆಯೊಂದಿಗೆ 63,900 ರೂಪಾಯಿಗೆ ಮಾರಾಟವಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಹಿವಾಟು ಬದಲಾದಂತೆ ಭಾರತದಲ್ಲಿನ ಚಿನ್ನದ ದರದಲ್ಲಿಯೂ ಬದಲಾವಣೆಗಳಾಗಲಿವೆ. ಹೀಗಾಗಿ ದಿನದ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ದರ ಇಳಿಕೆ

ದೆಹಲಿಯಲ್ಲಿ ದರ ಇಳಿಕೆ

ಬಂಗಾರದ ಬೆಲೆ ದೆಹಲಿಯಲ್ಲಿ ಪ್ರತಿ ಹತ್ತು ಗ್ರಾಂಗೆ 10 ರೂ ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,060 ರೂಪಾಯಿಗೆ ತಲುಪಿದೆ. 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂ ಚಿನ್ನದ ದರ 48,060 ರೂಪಾಯಿಗೆ ಇಳಿಕೆಯಾಗಿದೆ.

ಬೆಂಗಳೂರಲ್ಲಿ ಮತ್ತೆ ಇಳಿದ ಬಂಗಾರ

ಬೆಂಗಳೂರಲ್ಲಿ ಮತ್ತೆ ಇಳಿದ ಬಂಗಾರ

ಬೆಂಗಳೂರಿನಲ್ಲಿ ಬಂಗಾರದ ಬೆಲೆ ಮಂಗಳವಾರ 22 ಕ್ಯಾರಟ್ ಚಿನ್ನದ ಪ್ರತಿ ಹತ್ತು ಗ್ರಾಂ 350 ರೂಪಾಯಿಯಷ್ಟು ಇಳಿಕೆಯಾಗಿದೆ. ನಗರದ ಆಭರಣ ಗ್ರಾಹಕರಿಗೆ ಸತತ ಬೆಲೆ ಇಳಿಕೆ ಖುಷಿ ನೀಡಿದೆ. ಪ್ರತಿ ಹತ್ತು ಗ್ರಾಂ ಚಿನ್ನಕ್ಕೆ 41,350 ರೂಪಾಯಿ ಇದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 380 ರೂಪಾಯಿ ಇಳಿಕೆಯೊಂದಿಗೆ 45,110 ರೂಪಾಯಿಗೆ ಕುಸಿದಿದೆ. ಮೈಸೂರು ಮತ್ತು ಮಂಗಳೂರಿನಲ್ಲಿ ಕೂಡ ಬಂಗಾರದ ಬೆಲೆ ಇದೇ ರೀತಿ ಇದೆ.

ಚೆನ್ನೈನಲ್ಲಿ ದರ ಏರಿಕೆ

ಚೆನ್ನೈನಲ್ಲಿ ದರ ಏರಿಕೆ

ಚೆನ್ನೈನಲ್ಲಿ ಚಿನ್ನದ ದರದಲ್ಲಿ ಮತ್ತೆ ಹೆಚ್ಚಳ ಕಂಡಿದೆ. ಪ್ರತಿ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 90 ರೂಪಾಯಿ ಏರಿಕೆಯೊಂದಿಗೆ 42,330 ರೂ.ಗೆ ಮಾರಾಟವಾಗುತ್ತಿದೆ ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 100 ರೂಪಾಯಿ ಏರಿಕೆಯಾಗಿದ್ದು, 46,180 ರೂಪಾಯಿಗೆ ತಲುಪಿದೆ.

ಮುಂಬೈನಲ್ಲಿ ಚಿನ್ನದ ಬೆಲೆ ಅಲ್ಪ ಇಳಿಕೆ

ಮುಂಬೈನಲ್ಲಿ ಚಿನ್ನದ ಬೆಲೆ ಅಲ್ಪ ಇಳಿಕೆ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಇಳಿಕೆಯಾಗಿದ್ದು, 42,970 ರೂಪಾಯಿಗೆ ತಗ್ಗಿದೆ. 24 ಕ್ಯಾರಟ್ ಚಿನ್ನದ ಬೆಲೆ ಕೂಡ 10 ರೂಪಾಯಿ ಇಳಿಕೆಯೊಂದಿಗೆ 43,970 ರೂ ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 350 ರೂ. ಅಗ್ಗವಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 41,350 ರೂ ಮತ್ತು 24 ಕ್ಯಾರಟ್ ಹಳದಿ ಲೋಹ 45,110 ರೂಪಾಯಿಗೆ ಮಾರಾಟವಾಗುತ್ತಿದೆ.

Recommended Video

    ಎಲ್ಲೆಲ್ಲೂ GO BACK MODI ಘೋಷಣೆ! | Oneindia Kannada
    ದೇಶದಲ್ಲಿ ಬೆಳ್ಳಿ ಬೆಲೆ

    ದೇಶದಲ್ಲಿ ಬೆಳ್ಳಿ ಬೆಲೆ

    ಬೆಳ್ಳಿ ದರ ಒಂದು ದಿನದ ಏರಿಕೆ ಬಳಿಕ ಮತ್ತೆ ಅಗ್ಗವಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 200 ರೂ. ಇಳಿಯಾಗಿದ್ದು, 65,500 ರೂಪಾಯಿಯಲ್ಲಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದ್ದು, ಒಂದು ಕೆಜಿಗೆ 69,500 ರೂಪಾಯಿ ಇದೆ. ಮುಂಬೈನಲ್ಲಿ ಬೆಳ್ಳಿ ದರ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 63,900 ರೂಪಾಯಿ ಇದೆ.

    * ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 1೦ ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+