ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆ: ವಿವಿಧ ನಗರಗಳಲ್ಲಿ ಮಾರ್ಚ್ 12ರ ದರ

ಬೆಂಗಳೂರು, ಮಾರ್ಚ್ 12: ಒಂದು ದಿನದ ವಿರಾಮದ ಬಳಿಕ ದೇಶದಲ್ಲಿ ಹಳದಿ ಲೋಹ ಮತ್ತೆ ದುಬಾರಿಯಾಗಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 28 ರೂಪಾಯಿ ಹೆಚ್ಚಳ ಕಂಡಿದೆ. ಈ ದರ ಏರಿಕೆಯಿಂದ 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನ 43,710 ರೂಪಾಯಿಗೆ ಏರಿದ್ದರೆ, 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,710 ರೂ.ಗೆ ತಲುಪಿದೆ.

ಗುರುವಾರ ಒಂದು ದಿನ ಚಿನ್ನದ ಮಾರುಕಟ್ಟೆ ಗ್ರಾಹಕರ ಮೇಲೆ ಕೊಂಚ ಕರುಣೆ ತೋರಿಸಿತ್ತು. ಬೆಲೆಯಲ್ಲಿ ಇಳಿಕೆಯಾಗದಿದ್ದರೂ ಏರಿಕೆಯಾಗದೆ ಬುಧವಾರದ ದರವನ್ನೇ ಕಾಯ್ದುಕೊಂಡಿತ್ತು. ಆದರೆ ಶುಕ್ರವಾರ ಬೆಳಿಗ್ಗೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಗುರುವಾರ 22 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ 43,430 ರೂ ಇತ್ತು. ಹಾಗೆಯೇ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್‌ಗೆ 44,430 ರೂ ಇತ್ತು.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನಗಳಂತೆಯೇ ಚಿನ್ನ ಮತ್ತು ಬೆಳ್ಳಿ ಬೆಲೆ ಕೂಡ ಅಬಕಾರಿ ಸುಂಕ ಹಾಗೂ ರಾಜ್ಯಗಳ ತೆರಿಗೆಗಳಿಗೆ ಅನುಗುಣವಾಗಿ ಬದಲಾವಣೆಯಾಗುತ್ತದೆ. ಹಾಗಾಗಿ ಶುಕ್ರವಾರದ ಪ್ರತಿ ಗ್ರಾಂ ಚಿನ್ನದ ದರ ಒಟ್ಟಾರೆಯಾಗಿ 28 ರೂ ಏರಿಕೆಯಾಗಿದ್ದರೂ, ಪ್ರಮುಖ ನಗರಗಳಲ್ಲಿನ ದರದಲ್ಲಿ ಸಾಕಷ್ಟು ವ್ಯತ್ಯಾಸಕ್ಕೆ ಕಾರಣವಾಗಲಿದೆ. ಇಂದು ಯಾವ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ? ಮುಂದೆ ಓದಿ.

ರಾಜಧಾನಿ ದೆಹಲಿಯಲ್ಲಿ...

ರಾಜಧಾನಿ ದೆಹಲಿಯಲ್ಲಿ...

ನವದೆಹಲಿಯಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ನಿನ್ನೆ 10 ಗ್ರಾಂಗೆ 43,800 ರೂ ಇದ್ದು, ಶುಕ್ರವಾರ 44,300 ರೂ ತಲುಪಿದೆ. ಹಾಗೆಯೇ 24 ಕ್ಯಾರಟ್ ಚಿನ್ನದ ಬೆಲೆ 48,330ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ 22 ಕಾರೆಟ್‌ನ 10 ಗ್ರಾಂ ಚಿನ್ನ 42,500 ರೂ ಬೆಲೆ ಬಾಳುತ್ತಿದೆ. 24 ಕ್ಯಾರಟ್ ಚಿನ್ನಕ್ಕೆ ಚೆನ್ನೈನಲ್ಲಿ 46,340 ರೂ ದರವಿದೆ.

ವಾಣಿಜ್ಯ ನಗರಿಯಲ್ಲಿ ಬೆಲೆ

ವಾಣಿಜ್ಯ ನಗರಿಯಲ್ಲಿ ಬೆಲೆ

ಮುಂಬೈನಲ್ಲಿ 22 ಕ್ಯಾರಟ್‌ನ ಪ್ರತಿ 10 ಗ್ರಾಂ ಚಿನ್ನವು 43,710 ರೂಪಾಯಿ ರೂಪಾಯಿ ಇದ್ದು, 24 ಕ್ಯಾರಟ್ ಚಿನ್ನದ ದರ 44,710ಕ್ಕೆ ಹೆಚ್ಚಳ ಕಂಡಿದೆ. ಕೋಲ್ಕತಾದಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 44,330 ರೂ ದರವಿದೆ. 24 ಕ್ಯಾಟರ್‌ನ 10 ಗ್ರಾಂ ಚಿನ್ನದ ದರ 46,970ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ದರ

ಬೆಂಗಳೂರಿನಲ್ಲಿ ಚಿನ್ನದ ದರ

ಬೆಂಗಳೂರಿನಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಅಲ್ಪ ಹೆಚ್ಚಳವಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ ಉದ್ಯಾನನಗರಿಯಲ್ಲಿ 42,150 ರೂಪಾಯ ದರವಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನ 45,980 ರೂ ಬೆಲೆ ಬಾಳುತ್ತಿದೆ.

ಉಳಿದ ನಗರಗಳಲ್ಲಿ ದರ

ಉಳಿದ ನಗರಗಳಲ್ಲಿ ದರ

ಪುಣೆಯಲ್ಲಿ 22 ಕ್ಯಾರಟ್ ಚಿನ್ನಕ್ಕೆ 43,710 ರೂ ಇದ್ದರೆ, 24 ಕ್ಯಾರಟ್ ಚಿನ್ನಕ್ಕೆ 44,710 ರೂಪಾಯಿ ಇದೆ. ಹೈದರಾಬಾದ್‌ನಲ್ಲಿ 22 ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ ಕ್ರಮವಾಗಿ 42,150 ಮತ್ತು 45,980 ರೂಪಾಯಿ ಇದೆ. ಕೇರಳದಲ್ಲಿ 22 ಕ್ಯಾರಟ್ ಚಿನ್ನಕ್ಕೆ 42,150 ಮತ್ತು 24 ಕ್ಯಾರಟ್ ಚಿನ್ನಕ್ಕೆ 45,980 ರೂ ಇದೆ.

ನಗರಗಳಲ್ಲಿ ಬೆಳ್ಳಿ ಬೆಲೆ ಎಷ್ಟು?

ನಗರಗಳಲ್ಲಿ ಬೆಳ್ಳಿ ಬೆಲೆ ಎಷ್ಟು?

ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಕೂಡ ಶುಕ್ರವಾರ ಹೆಚ್ಚಳವಾಗಿದೆ. ಪ್ರತಿ ಗ್ರಾಂ ಬೆಳ್ಳಿ 40 ಪೈಸೆಯಷ್ಟು ಏರಿಕೆಯಾಗಿದೆ. 100 ಗ್ರಾಂಗೆ 40 ರೂ ಹಾಗೂ 1 ಕೆಜಿ ಬೆಳ್ಳಿ ಬೆಲೆ 400 ರೂಪಾಯಿಯಷ್ಟು ತುಟ್ಟಿಯಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಒಂದು ಕೆಜಿ ಬೆಳ್ಳಿ ದರ 73,200 ರೂಪಾಯಿಗೆ ತಲುಪಿದೆ. ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ, ಕೇರಳ, ಕೊಯಮತ್ತೂರು ಸೇರಿದಂತೆ ವಿವಿಧ ನಗರಗಳಲ್ಲಿ 67,400 ರೂ.ಗೆ ಬೆಳ್ಳಿ ಮಾರಾಟವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+