ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಮಾರ್ಚ್ 05ರಂದು ಬೆಲೆ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ(ಮಾರ್ಚ್ 05)ದಂದು ಹಳದಿ ಲೋಹದ ಬೆಲೆ ಕುಸಿತಗೊಂಡಿದೆ. ಬೆಳ್ಳಿ ಕೂಡಾ ಇಳಿಮುಖವಾಗಿದೆ.

Recommended Video

      ಅಬ್ಬಾ ! ಬೆಲೆ ಎಷ್ಟು ಕಡಿಮೆ ಆಗಿದೆ ಗೊತ್ತಾ !! | Oneindia Kannada

      ನವದೆಹಲಿಯಲ್ಲಿ ಚಿನ್ನದ ಬೆಲೆ 522 ರು ಇಳಿಕೆಯಾಗಿ ಪ್ರತಿ 10 ಗ್ರಾಂ 43,887 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,822 ರೂಪಾಯಿ ಕಡಿಮೆಯಾಗಿ 64,805ರೂಪಾಯಿಗೆ ತಲುಪಿದೆ. ಜಾಗತಿಕವಾಗಿ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,696 ಡಾಲರ್ ತಲುಪಿದೆ. ಬೆಳ್ಳಿ ಬೆಲೆ ಶೇ 0.96% ಕುಸಿತ ಕಂಡು 25.12 ಡಾಲರ್ ಪ್ರತಿ ಔನ್ಸ್ ಆಗಿದೆ.

      ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಕಳೆದ ನಾಲ್ಕು ದಿನಗಳ ಏರಿಳಿತ ಹೇಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

      ಲೋಹಗಳ ಮೇಲಿನ ಮೂಲ ಅಬಕಾರಿ ಸುಂಕ

      ಲೋಹಗಳ ಮೇಲಿನ ಮೂಲ ಅಬಕಾರಿ ಸುಂಕ

      ಪ್ರಮುಖ ಲೋಹಗಳ ಮೇಲಿನ ಮೂಲ ಅಬಕಾರಿ ಸುಂಕವನ್ನು 2019ರ ಜುಲೈಯಲ್ಲಿ ಶೇ 10 ರಿಂದ ಶೇ 12.5ಕ್ಕೇರಿಸಲಾಗಿತ್ತು. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲಾಗಿದೆ. ಶೇ 11.85% ರಿಂದ ಶೇ 6.9ಕ್ಕಿಳಿಸಲಿದೆ. ಬೆಳ್ಳಿ ಮೇಲೆ ಇದ್ದ ಅಬಕಾರಿ ಸುಂಕ ಶೇ 11%ರಿಂದ ಶೇ 6.1ಕ್ಕೆ ಇಳಿಸಲಾಗಿದೆ. ಇದೇ ರೀತಿ ಪ್ಲಾಟಿನಂ ಹಾಗೂ ಪಲ್ಲಿಡಂ ಮೇಲಿನ ಸುಂಕ ಶೇ 12.5ರಿಂದ 10ಕ್ಕಿಳಿಸಲಾಗಿದೆ. ಇದಲ್ಲದೆ ಈ ಬಾರಿ ಬಜೆಟ್ ನಲ್ಲಿ ಕೃಷಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸೆಸ್ 2.5% ಚಿನ್ನ ಹಾಗೂ ಬೆಳ್ಳಿ ಮೇಲೂ ಹಾಕಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
      ಮಾರ್ಚ್ 5: 41, 450 ( -350)<>45, 220 (-380)
      ಮಾರ್ಚ್ 4: 41,800 (-650)<>45,600 (-700)
      ಮಾರ್ಚ್ 3: 42,450 (350 ಏರಿಕೆ)<> 46,300 (370 ಏರಿಕೆ )
      ಮಾರ್ಚ್ 2: 42,100 (-950)<>45,930 (-1040)

      ದೆಹಲಿಯಲ್ಲಿ ಚಿನ್ನದ ಬೆಲೆ

      ದೆಹಲಿಯಲ್ಲಿ ಚಿನ್ನದ ಬೆಲೆ

      22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
      ಮಾರ್ಚ್ 5: 43,600 (-350)<>47,560 (-390)
      ಮಾರ್ಚ್ 4: 43, 950 (-650)<> 47,950 (-700)
      ಮಾರ್ಚ್ 3: 44,600 (350 ಏರಿಕೆ)<>48,650 (370 ಏರಿಕೆ)
      ಮಾರ್ಚ್ 2: 44,250 (-950)<>48,280 (-1020)

      ಚೆನ್ನೈನಲ್ಲಿ ಚಿನ್ನದ ಬೆಲೆ

      ಚೆನ್ನೈನಲ್ಲಿ ಚಿನ್ನದ ಬೆಲೆ

      22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
      ಮಾರ್ಚ್ 5: 41,840 (-3330)<> 45,630 (-390)
      ಮಾರ್ಚ್ 4: 42,170 (-470)<> 46,020 (-500)
      ಮಾರ್ಚ್ 3: 42,640 (-20)<> 46,520 (-20)
      ಮಾರ್ಚ್ 2: 42,660 (-890)<> 46,540 (-970)

      ಮುಂಬೈ ಚಿನ್ನದ ಬೆಲೆ

      ಮುಂಬೈ ಚಿನ್ನದ ಬೆಲೆ

      22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
      ಮಾರ್ಚ್ 5: 43,430 (-470)<> 44,430 (-470)
      ಮಾರ್ಚ್ 4: 43,900 (-470)<>44,900 (-470)
      ಮಾರ್ಚ್ 3: 44,370 (-50)<> 45,370 (-50)
      ಮಾರ್ಚ್ 2: 44,420 (520 ಇಳಿಕೆ)<>45,420 (520 ಇಳಿಕೆ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+