Gold Rate Today: ಆಭರಣ ಪ್ರಿಯರಿಗೆ ಸಿಹಿಸುದ್ದಿ, ಬೆಂಗಳೂರು ಸೇರಿ ವಿವಿಧೆಡೆ ಚಿನ್ನದ ಬೆಲೆ ಇಳಿಕೆ, ನಿಮ್ಮೂರಲ್ಲಿ ಎಷ್ಟಿದೆ?

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ಮಾರುಕಟ್ಟೆಗಳ ಚಿನ್ನ-ಬೆಳ್ಳಿಯ ದರದಲ್ಲಿ ಮತ್ತೆ ಇಳಿಕೆ ಆಗಿದೆ. ವಾರಾಂತ್ಯದಲ್ಲಿ ಇಳಿಕೆ, ಸ್ಥಿರತೆ ಸಾಧಿಸಿದ್ದ ಬಂಗಾರವು ಮತ್ತೆ ಕುಸಿತ ಕಂಡಿದೆ. ಚಿನ್ನದ ಬೇಡಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅನುಮಾನ ವ್ಯಕ್ತವಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಡಾಲರ್ ಮೌಲ್ಯ, ರೂಪಾಯಿ ಮೌಲ್ಯ ಕುಸಿತ ಇನ್ನಿತರ ಕಾರಣಗಳಿಂದ ವಾರದ ಮೊದಲ ದಿನ ಸೋಮವಾರ (ಜುಲೈ 6) ಚಿನ್ನದ ಇಳಿಕೆಯತ್ತ ಸಾಗಿದೆ.

ಒಂದೇ ದಿನಕ್ಕೆ ಎಂಸಿಎಕ್ಸ್ ಮಾರುಕಟ್ಟೆಯಲ್ಲೂ ಇಂದು ಚಿನ್ನ ಮತ್ತು ಬೆಳ್ಳಿಯ ಮೌಲ್ಯ ಇಳಿಮುಖವಾಗಿದೆ. ಬೆಳ್ಳಿಯ ದರ 100 ಗ್ರಾಂಗೆ 500 ರೂ.ನಂತೆ ಒಟ್ಟು ಒಂದು ಕೆಜಿ ಬೆಳ್ಳಿಯ ದರ ಬರೋಬ್ಬರಿ 5000 ರೂಪಾಯಿ ಇಳಿಕೆಯಾಗಿದೆ. ಇದರಿಂದಾಗಿ 2,50,000 ರೂ.ನಿಂದ 2,45,000 ರೂ.ಗೆ ಕುಸಿತ ದಾಖಲಿಸಿದೆ.

Gold and Silver Prices

ಚಿನ್ನದ ಇಂದಿನ ಕುಸಿತದ ವಿವರ ಹೀಗಿದೆ

* 22 ಕ್ಯಾರಟ್ ಚಿನ್ನದ ಒಂದು ಗ್ರಾಂ ದರವು 10 ರೂಪಾಯಿ ಇಳಿಕೆ ಆಗಿದ್ದು, 10 ಗ್ರಾಂ ಚಿನ್ನಕ್ಕೆ 100 ರೂಪಾಯಿ ಕುಸಿಯುವ ಮೂಲಕ ಒಟ್ಟು ದರ 1,34,400 ರೂಪಾಯಿ ಆಗಿದೆ.

* 24 ಕ್ಯಾರಟ್ ಒಂದು ಗ್ರಾಂ ಬಂಗಾರಕ್ಕೆ 11 ರೂ. ಕುಸಿಯುವ ಮುಖೇನ, 10 ಗ್ರಾಂಗೆ 110 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಅದರ ಒಟ್ಟು 1,46,620 ರೂಪಾಯಿ ಇಳಿಕೆಯಾಗಿದೆ.

Gold Prices: ಚಿನ್ನ ಖರೀದಿದಾರರಿಗೆ ಗುಡ್‌ನ್ಯೂಸ್: ವಾರದ ಏರಿಕೆ ಬಳಿಕ ಬೆಲೆ ಸ್ಥಿರ, ಇಂದಿನ ಅಪ್ಡೇಟ್ಸ್
Gold Prices: ಚಿನ್ನ ಖರೀದಿದಾರರಿಗೆ ಗುಡ್‌ನ್ಯೂಸ್: ವಾರದ ಏರಿಕೆ ಬಳಿಕ ಬೆಲೆ ಸ್ಥಿರ, ಇಂದಿನ ಅಪ್ಡೇಟ್ಸ್

* ಇನ್ನೂ 18 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 8 ರೂಪಾಯಿಯಂತೆ ಹತ್ತು ಗ್ರಾಂಗೆ 80 ರೂಪಾಯಿ ಕುಸಿದಿದ್ದು, ಒಟ್ಟು ಬೆಲೆ 1,09, 970 ರೂಪಾಯಿ ಹೆಚ್ಚಾಗಿದೆ.

ಬಡ್ಡಿ ದರ ಹೆಚ್ಚಳ: ಅಕ್ಟೋಬರ್‍‌ನಲ್ಲಿ ಚಿನ್ನದ ಬೆಲೆ ಬದಲಾವಣೆ

ಇದೇ ವರ್ಷ ಅಕ್ಟೋಬರ್ 2026 ಮೊದಲು ಯುಎಸ್‌ನ ಫೆಡರಲ್ ರಿಸರ್ವ್ ಬ್ಯಾಂಕ್‌ನ ಬಡ್ಡಿದರಗಳನ್ನು ಮತ್ತೆ ಹೆಚ್ಚಿಸುವ ನಿರೀಕ್ಷೆ ಇದೆ. ಇದೇ ರೀತಿ ಬ್ಯಾಂಕ್ ಆಫ್ ಜಪಾನ್, ಬ್ಯಾಂಕ್ ಆಫ್ ಇಂಗ್ಲೆಂಡ್‌ಗಳು ಬಡ್ಡಿ ದರ ಏರಿಕೆ ಮಾಡುವ ನಿರೀಕ್ಷೆ ಇದೆ. ಇದರಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. 2026ರ ಆರಂಭದಲ್ಲಿ ಚಿನ್ನ, ಬೆಳ್ಳಿ ದರ ಗರಿಷ್ಠ ಮಟ್ಟ ತಲುಪಿದ್ದವು. ಬಳಿಕ ಯುಎಸ್ ಫೆಡರಲ್ ಬ್ಯಾಂಕ್ ಬಾಂಡ್‌ಗಳ ಮೇಲಿನ ಬಡ್ಡಿ ದರ ಏರಿಕೆ ಕಾರಣಕ್ಕೆ ಚಿನ್ನದ ಹೂಡಿಕೆ ಹಿಂಪಡೆದ ಹೂಡಿಕೆದಾರರು ಅಧಿಕ ಲಾಭಕ್ಕಾಗಿ ಬಾಂಡ್‌ಗಳ ಖರೀದಿಸಿದ್ದರು. ಇದು ಸಹ ಚಿನ್ನದ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಇಂದು ವಿವಿಧ ನಗರಗಳ 1 ಗ್ರಾಂ 22k ಚಿನ್ನ ಬೆಲೆಪಟ್ಟಿ

* ಬೆಂಗಳೂರು: 13,440 ರೂಪಾಯಿ

* ಕೊಲ್ಕತ್ತ: 13, 440 ರೂಪಾಯಿ

* ಚೆನ್ನೈ: 13, 560 ರೂಪಾಯಿ

* ಮುಂಬೈ: 13,440 ರೂಪಾಯಿ

* ದೆಹಲಿ: 13, 455 ರೂಪಾಯಿ

* ಹೈದರಾಬಾದ್: 13,440 ರೂಪಾಯಿ

* ಕೇರಳ: 13,440 ರೂಪಾಯಿ

* ಪುಣೆ: 13,440 ರೂಪಾಯಿ

* ಅಹ್ಮದಾಬಾದ್: 13,440 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+