Gold Price Today: ಅಕ್ಷಯ ತೃತೀಯಗೆ ಗ್ರಾಹಕರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ..

ಬೆಂಗಳೂರು, ಏಪ್ರಿಲ್ 30: ಚಿನ್ನದ ಬೆಲೆಯು ಒಂದು ಲಕ್ಷ ರೂಪಾಯಿ ಮುಟ್ಟಿದ್ದೆ ಬಂತು. ನಂತರ ಒಂದು ಭಾರಿ ದರ ಹೆಚ್ಚಾದ ನಂತರ ನಿರಂತರವಾಗಿ ಸ್ವಲ್ಪ ಸ್ವಲ್ಪವೇ ಚಿನ್ನದ ದರ ಇಳಿಕೆ ಆಗುತ್ತಿದೆ. ಇಂದು ಅಕ್ಷಯ ತೃತೀಯ (ಏಪ್ರಿಲ್ 30) ಹಬ್ಬದಂದು ಬಂಗಾರದಲ್ಲಿ ಬೆಲೆಯಲ್ಲಿ 500 ರೂಪಾಯಿ ಇಳಿಕೆ ಆಗಿದೆ. ಈ ಮೂಲಕ ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಇಳಿಕೆ ಆಗುವ ನಿರೀಕ್ಷೆ ಇವೆ.

ಕರ್ನಾಟಕ ಸೇರಿದಂತೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಕೊಂಚ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಇಳಿಕೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 89,750ಗೆ ಇಳಿಕೆ ಆಗಿದೆ. ಅಂದರೆ ಪ್ರತಿ ಹತ್ತು ಗ್ರಾಂಗೆ ₹50 ರೂಪಾಯಿ, 100 ಗ್ರಾಂ ಇದೇ ಚಿನ್ನಕ್ಕೆ 500 ರೂಪಾಯಿ ಕುಸಿತವಾಗಿದೆ.

Gold and Silver Prices Dip Slightly on today April 30

ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯ 600 ರೂಪಾಯಿ ಹೆಚ್ಚಾಗಿದೆ. 100 ಗ್ರಾಂ 600 ರೂಪಾಯಿ ಏರಿಕೆ ಆದರೆ, 10 ಗ್ರಾಂನ ಇದೇ ಚಿನ್ನಕ್ಕೆ 60 ರೂಪಾಯಿ ಕುಸಿತವಾಗಿದೆ. ಕಳೆದ ಮೂರು ದಿನಗಳಿಂದ ಚಿನ್ನದ ದರದಲ್ಲಿ ಏರಿಳಿತವಾಗುತ್ತಿದೆ. ಸದ್ಯ ಏರಿಕೆ ಆಗುವುದು ಅನುಮಾನ ಎನ್ನಲಾಗುತ್ತಿದೆ.

Take a Poll

ಬೆಳ್ಳಿಯ ಬೆಲೆ 100 ಗ್ರಾಂ ಗೆ 10 ರೂಪಾಯಿ, 1kg ಬೆಳ್ಳಿಗೆ 100 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿ 100 ಗ್ರಾಂಗೆ 10,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಬೆಳ್ಳಿ ದರ 10,040 ರೂಪಾಯಿ ಇದೆ ಎಂದು ವರದಿ ಆಗಿದೆ. ಅಕ್ಷಯ ತೃತಿಯಾ ದಿವಸ ಚಿನ್ನ ಬೆಳ್ಳಿ ಖರೀದಿ ಮಾಡುವ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಂತಾಗಿದೆ.

ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿ ಆಸುಪಾಸಿನಲ್ಲಿದ್ದರೂ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಅಕ್ಷಯ ತೃತಿಯ ಹಬ್ಬಕ್ಕೆ ಮುಂಗಡ ಚಿನ್ನ ಖರೀದಿ ಬುಕ್ಕಿಂಗ್ ಶೇಕಡಾ 10ರಷ್ಟು ಹೆಚ್ಚಿದೆ. ದರ ಇಳಿಕೆ ನೋಡಿ ಖರೀದಿ ಪ್ರಮಾಣ ಕೊಂಚ ಹೆಚ್ಚಾದರೂ ಆಗಬಹುದು. ಸದ್ಯ ನಿಮ್ಮ ಊರು, ನಗರಗಳಲ್ಲಿ ಚಿನ್ನ, ಬೆಳ್ಳಿ ದರವೆಷ್ಟಿದೆ? ಇಲ್ಲಿದೆ ದರ ಪಟ್ಟಿ.

ದೇಶದ ವಿವಿಧೆಡೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಪಟ್ಟಿ

ಬೆಂಗಳೂರು: 89,750 ರೂಪಾಯಿ

ದೆಹಲಿ: 89,900 ರೂಪಾಯಿ

ಹೈದರಾಬಾದ್: 89,750 ರೂಪಾಯಿ

ಚೆನ್ನೈ: 89,750 ರೂಪಾಯಿ

ಪುಣೆ: 90,150 ರೂಪಾಯಿ

ಮುಂಬೈ: 89,750 ರೂಪಾಯಿ

ಜೈಪುರ್: 89,900 ರೂಪಾಯಿ

ಲಕ್ನೋ: 89,900 ರೂಪಾಯಿ

ಕೋಲ್ಕತಾ: 89,750 ರೂಪಾಯಿ

ಕೇರಳ: 89,750 ರೂಪಾಯಿ

ಅಹ್ಮದಾಬಾದ್: 89,800 ರೂಪಾಯಿ

ಉತ್ತರ ಪ್ರದೇಶ: 90,400 ರೂಪಾಯಿ

ನಗರವಾರು ಇಂದಿನ ಬೆಳ್ಳಿ (100 ಗ್ರಾಂ) ದರ ಪಟ್ಟಿ

ಬೆಂಗಳೂರು: 10,040 ರೂಪಾಯಿ

ದೆಹಲಿ: 10,000 ರೂಪಾಯಿ

ಪುಣೆ: 11,100 ರೂಪಾಯಿ

ಚೆನ್ನೈ: 10,900 ರೂಪಾಯಿ

ಕೋಲ್ಕತಾ: 10,000 ರೂಪಾಯಿ

ಮುಂಬೈ: 10,000 ರೂಪಾಯಿ

ಅಹ್ಮದಾಬಾದ್: 10,000 ರೂಪಾಯಿ

ಜೈಪುರ್: 10,000 ರೂಪಾಯಿ

ಕೇರಳ: 10,900 ರೂಪಾಯಿ

ಗ್ರಾಹಕರಿಗೆ ಸೂಚನೆ: ಚಿನ್ನ ಬೆಳ್ಳಿ ಖರೀದಿ ಮಾಡುವವರು ಗಮನಿಸಬೇಕಾದ ಅಂಶವೆಂದರೆ, ವೇಸ್ಟೇಜ್, ಇತರ ಶುಲ್ಕ, ಜಿಎಸ್‌ಟಿ ಸೇರಿದಂತೆ ಬೆಲೆಯಲ್ಲಿ ವ್ಯತ್ಯಾಸವಾಗಬಹುದು. ಎಲ್ಲ ನಗರಗಳಲ್ಲಿ ದರದಲ್ಲಿ ಕೊಂಚ ಭಿನ್ನತೆ ಉಂಟಾಗಬಹುದೆಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+