ನವರಾತ್ರಿ ಹಬ್ಬಕ್ಕೆ ಚಿನ್ನ, ಬೆಳ್ಳಿ ಖರೀದಿಸುವ ಪ್ಲಾನ್ ಇದೆಯಾ? ಹಾಗಾದ್ರೆ 22 ಕ್ಯಾರೆಟ್ ಚಿನ್ನದ ನಿಖರ ಬೆಲೆ ಇಲ್ಲಿದೆ ನೋಡಿ
ಇಂದಿನಿಂದ ನವರಾತ್ರಿ ಆರಂಭ.. ಮನೆ ಮನೆಗಳಲ್ಲಿ ಹಬ್ಬ ಕಳೆ ಕಟ್ಟಿದೆ. ಭಾರತೀಯರು ಹಬ್ಬದ ದಿನದಂದು ಹೊಸ ಬಟ್ಟೆ ಜೊತೆಗೆ ಚಿನ್ನ, ಬೆಳ್ಳಿ ಆಭರಣಗಳನ್ನ ಖರೀದಿಸುವುದು ಸಾಮಾನ್ಯ. ಅದರಲ್ಲೂ ದಸರಾ-ನವರಾತ್ರಿ ಸಮಯದಲ್ಲಿ ಚಿನ್ನದ ಮಳಿಗೆಗಳಲ್ಲಿ ಗ್ರಾಹಕರ ದಂಡೇ ತುಂಬಿರುತ್ತದೆ.
ನೀವು ಕೂಡ ಇಂದು ನಿಮ್ಮ ನೆಚ್ಚಿನವರಿಗಾಗಿ ಅಥವಾ ಹೂಡಿಕೆಗಾಗಿ ಚಿನ್ನ ಅಥವಾ ಬೆಳ್ಳಿ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಮಾರುಕಟ್ಟೆಗೆ ಹೋಗುವ ಮುನ್ನ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ದರವನ್ನಾ ತಿಳಿದುಕೊಳ್ಳುವುದು ಬಹಳ ಮುಖ್ಯ.

ಬೆಂಗಳೂರಿನಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ
ಬೆಂಗಳೂರಿನ ಆಭರಣ ಪ್ರಿಯರಿಗೆ ಇಲ್ಲಿದೆ ಇಂದಿನ ತಾಜಾ ಮಾಹಿತಿ. 2026ರ ಅಕ್ಟೋಬರ್ 11, ಇಂದಿನ ಮಾರುಕಟ್ಟೆ ವರದಿ ಪ್ರಕಾರ, ಬೆಂಗಳೂರಿನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 13,880 ರೂಪಾಯಿ ಆಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ 1,38,800 ರೂಪಾಯಿ ಇದೆ. ಇನ್ನು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 1 ಗ್ರಾಂಗೆ 15,142 ರೂಪಾಯಿ ಹಾಗೂ 10 ಗ್ರಾಂಗೆ 1,51,420 ರೂಪಾಯಿ ಆಗಿದೆ.
ಬೆಳ್ಳಿಯ ಬೆಲೆಯ ಬಗ್ಗೆ ನೋಡುವುದಾದರೆ, ಬೆಂಗಳೂರಿನಲ್ಲಿ ಬೆಳ್ಳಿಯ ದರವು ಗ್ರಾಹಕರಿಗೆ ತುಸು ದುಬಾರಿಯಾಗಿಯೇ ಉಳಿದಿದೆ. ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆ 240 ರೂಪಾಯಿ ಆಗಿದ್ದು, ಒಂದು ಕೆಜಿ ಬೆಳ್ಳಿಗೆ ಬರೋಬ್ಬರಿ 2,40,000 ರೂಪಾಯಿ ಇದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಹಾಗೂ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಟ್ರೆಂಡ್‌ಗಳು ಈ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ.
ನಿನ್ನೆಯ ಬೆಲೆಗೆ ಹೋಲಿಸಿದರೆ ಇಂದಿನ ದರ ಹೇಗಿದೆ?
ನಿನ್ನೆಯ (ಅಕ್ಟೋಬರ್ 10) ಚಿನ್ನ ಮತ್ತು ಬೆಳ್ಳಿ ಬೆಲೆಗೆ ಹೋಲಿಸಿದರೆ, ಇಂದು ಮಾರುಕಟ್ಟೆಯಲ್ಲಿ ಬೆಲೆಗಳು ಸಂಪೂರ್ಣವಾಗಿ ಸ್ಥಿರವಾಗಿವೆ. ನಿನ್ನೆ ಕೂಡ 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 13,880 ರೂಪಾಯಿ ಇತ್ತು. ಹಾಗೆಯೇ ಬೆಳ್ಳಿಯ ಬೆಲೆ ಕೂಡ 1 ಗ್ರಾಂಗೆ 240 ರೂಪಾಯಿಯೇ ಇತ್ತು. ಆದ್ದರಿಂದ ದರದಲ್ಲಿ ಇಂದು ಯಾವುದೇ ಹೊಸ ಬದಲಾವಣೆ ಕಂಡುಬಂದಿಲ್ಲ. ಹಬ್ಬದ ಸೀಸನ್ ಆಗಿರುವುದರಿಂದ ಬೆಲೆಯಲ್ಲಿ ಏರಿಕೆಯಾಗದ ಕಾರಣ ಗ್ರಾಹಕರಿಗೆ ಇದು ತುಸು ನೆಮ್ಮದಿ ತಂದಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ
ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರೆಟ್‌ನ 1 ಗ್ರಾಂ ಆಭರಣ ಚಿನ್ನದ ನಿಖರ ಬೆಲೆಯ ಪಟ್ಟಿ ಇಲ್ಲಿದೆ:
* ಬೆಂಗಳೂರು - 13,880 ರೂಪಾಯಿ
* ದೆಹಲಿ - 13,895 ರೂಪಾಯಿ
* ಚೆನ್ನೈ - 13,880 ರೂಪಾಯಿ
* ಮುಂಬೈ - 13,880 ರೂಪಾಯಿ
* ಹೈದರಾಬಾದ್ - 13,880 ರೂಪಾಯಿ
* ಅಹಮದಾಬಾದ್ - 13,885 ರೂಪಾಯಿ
* ಪುಣೆ - 13,880 ರೂಪಾಯಿ
* ಕೋಲ್ಕತ್ತಾ - 13,880 ರೂಪಾಯಿ
ಒಟ್ಟಿನಲ್ಲಿ, ನವರಾತ್ರಿ ಹಬ್ಬದ ಈ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಯಾವುದೇ ಏರಿಳಿತವಾಗಿಲ್ಲ. ನಿನ್ನೆಯ ದರವೇ ಇಂದೂ ಮುಂದುವರೆದಿದ್ದು, ಬೆಂಗಳೂರು ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನವು 13,880 ರೂ. ಆಸುಪಾಸಿನಲ್ಲಿದೆ. ಬೆಳ್ಳಿಯ ಬೆಲೆಯೂ 1 ಕೆಜಿಗೆ 2.40 ಲಕ್ಷ ರೂಪಾಯಿ ಇದೆ.
ಗಮನಿಸಿ: ನೀವು ಜ್ಯುವೆಲ್ಲರಿ ಅಂಗಡಿಗಳಲ್ಲಿ ಆಭರಣ ಖರೀದಿಸುವಾಗ ಈ ಮೂಲ ಬೆಲೆಗೆ ಮೇಕಿಂಗ್ ಚಾರ್ಜಸ್ ಮತ್ತು 3% ಜಿಎಸ್‌ಟಿ ಹೆಚ್ಚುವರಿಯಾಗಿ ಸೇರ್ಪಡೆಯಾಗುವುದರಿಂದ, ನಿಮ್ಮ ಅಂತಿಮ ಬಿಲ್‌ನಲ್ಲಿ ಸ್ವಲ್ಪ ಮೊತ್ತ ಬದಲಾಗಬಹುದು.


Click it and Unblock the Notifications
