Gold Rate Today: ಆಭರಣ ಖರೀದಿದಾರರಿಗೆ ನೆಮ್ಮದಿಯ ಸುದ್ದಿ; ಚಿನ್ನದ ದರ ದಿಢೀರ್ ಇಳಿಕೆ!
ಬೆಂಗಳೂರು, ಮೇ 12: ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿರುವುದರ ನಡುವೆ ಚಿನ್ನ ಖರೀದಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿತ್ತು. ಇದೀಗ ಚಿನ್ನದ ಬೆಲೆ ದಿಢೀರನೆ ಭಾರೀ ಇಳಿಕೆ ಕಂಡಿದ್ದು, ಚಿನ್ನ ಖರೀದಿದಾರರು ನಿಟ್ಟುಸಿರುಬಿಟ್ಟಿದ್ದಾರೆ. ಇನ್ನು ರಾಜ್ಯದಲ್ಲಿನ ಇಂದಿನ ಚಿನ್ನ ಹಾಗೂ ಬೆಳ್ಳಿ ದರಗಳ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇವತ್ತು ಸೋಮವಾರ ಸಖತ್ ಇಳಿಕೆ ಕಂಡಿದೆ. ಗ್ರಾಮ್ಗೆ ಬರೋಬ್ಬರಿ 165 ರೂಗಳಷ್ಟು ಬೆಲೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ ಬಹುತೇಕ 185 ರೂಗಳಷ್ಟು ಕಡಿಮೆ ಆಗಿದೆ. 10 ಗ್ರಾಮ್ ಆಭರಣ ಚಿನ್ನದ ಬೆಲೆ 1,650 ರೂಗಳ ಇಳಿಕೆ ಆಗಿದೆ. 9,045 ರೂ ಇದ್ದ ಬೆಲೆ 8,880 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 88,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 96,880 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಮೇ 12 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೇ 12 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,800 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 96,880 ರೂಪಾಯಿ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,660 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,800 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 96,880 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂಪಾಯಿ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 88,800 ರೂಪಾಯಿ
ಚೆನ್ನೈ: 88,800 ರೂಪಾಯಿ
ಮುಂಬೈ: 88,800 ರೂಪಾಯಿ
ದೆಹಲಿ: 88,950 ರೂಪಾಯಿ
ಕೋಲ್ಕತಾ: 88,800 ರೂಪಾಯಿ
ಕೇರಳ: 88,800 ರೂಪಾಯಿ
ಅಹ್ಮದಾಬಾದ್: 88,850 ರೂಪಾಯಿ
ಜೈಪುರ್: 88,950 ರೂಪಾಯಿ
ಲಕ್ನೋ: 88,950 ರೂಪಾಯಿ
ಭುವನೇಶ್ವರ್: 88,800 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 88,620 ರೂಪಾಯಿ
ದುಬೈ: 86,280 ರೂಪಾಯಿ
ಅಮೆರಿಕ: 85,850 ರೂಪಾಯಿ
ಸಿಂಗಾಪುರ: 89,030 ರೂಪಾಯಿ
ಕತಾರ್: 87,530 ರೂಪಾಯಿ
ಸೌದಿ ಅರೇಬಿಯಾ: 86,300 ರೂಪಾಯಿ
ಓಮನ್: 87,310 ರೂಪಾಯಿ
ಕುವೇತ್: 84,710 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,800 ರೂಪಾಯಿ
ಚೆನ್ನೈ: 11,000 ರೂಪಾಯಿ
ಮುಂಬೈ: 9,800 ರೂಪಾಯಿ
ದೆಹಲಿ: 9,800 ರೂಪಾಯಿ
ಕೋಲ್ಕತಾ: 9,800 ರೂಪಾಯಿ
ಕೇರಳ: 11,000 ರೂಪಾಯಿ
ಅಹ್ಮದಾಬಾದ್: 9,800 ರೂಪಾಯಿ
ಜೈಪುರ್: 9,800 ರೂಪಾಯಿ
ಲಕ್ನೋ: 9,800 ರೂಪಾಯಿ
ಭುವನೇಶ್ವರ್: 11,000 ರೂಪಾಯಿ












Click it and Unblock the Notifications