ಚಿನ್ನದ ಬೆಲೆ ಕುಸಿತ: ಜನವರಿ 27ರಂದು ಯಾವ ನಗರಗಳಲ್ಲಿ ಎಷ್ಟು ಬೆಲೆ ವ್ಯತ್ಯಾಸ?
ನವದೆಹಲಿ, ಜನವರಿ 27: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತ ಮುಂದುವರಿದಿದ್ದು, ಬುಧವಾರ ಕೂಡ ಇಳಿಕೆಯಾಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,900 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನ 10 ಗ್ರಾಂ 52,250 ರೂಪಾಯಿಗೆ ತಲುಪಿದೆ. ಇನ್ನು ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಇಳಿಕೆಗೊಂಡು 66,200 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜನವರಿ 27: 45,750-49,900 (330 ರೂಪಾಯಿ ಇಳಿಕೆ)
ಜನವರಿ 26: 46,050-50,230
ಜನವರಿ 25: 45,940-50,120
ಜನವರಿ 24: 45,940-50,120

ದೆಹಲಿಯಲ್ಲಿ ಚಿನ್ನದ ಬೆಲೆ
ಜನವರಿ 27: 47,900-52,250 (210 ರೂಪಾಯಿ ಇಳಿಕೆ)
ಜನವರಿ 26: 48,090-52,460
ಜನವರಿ 25: 48,090-52,460
ಜನವರಿ 24: 48,090-52,460

ಚೆನ್ನೈನಲ್ಲಿ ಚಿನ್ನದ ಬೆಲೆ
ಜನವರಿ 27: 46,170-50,570 (40 ರೂಪಾಯಿ ಇಳಿಕೆ)
ಜನವರಿ 26: 46,360-50,610
ಜನವರಿ 25: 46,360-50,610
ಜನವರಿ 24: 46,540-50,790

ಮುಂಬೈ ಚಿನ್ನದ ಬೆಲೆ
ಜನವರಿ 27: 48,000-49,000 (330 ರೂಪಾಯಿ ಇಳಿಕೆ)
ಜನವರಿ 26: 48,330-49,330
ಜನವರಿ 25: 48,330-49,330
ಜನವರಿ 24: 48,330-49,330

ಜೈಪುರ ಚಿನ್ನದ ಬೆಲೆ
ಜನವರಿ 27: 47,900-52,250 (210 ರೂಪಾಯಿ ಇಳಿಕೆ)
ಜನವರಿ 26: 48,090-52,460
ಜನವರಿ 25: 48,090-52,460
ಜನವರಿ 24: 48,090-52,460

ಚಂಡೀಗಡ ಚಿನ್ನದ ಬೆಲೆ
ಜನವರಿ 27: 48,740-52,190 (ಬದಲಾವಣೆ ಇಲ್ಲ)
ಜನವರಿ 26: 48,740-52,190
ಜನವರಿ 25: 48,740-52,190
ಜನವರಿ 24: 48,740-52,190

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications