ಚಿನ್ನದ ಬೆಲೆಯ ಹಾವು-ಏಣಿ ಆಟ: ಇಳಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಏರಿಕೆ

ನವದೆಹಲಿ, ಆಗಸ್ಟ್‌ 27: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹಾವು-ಏಣಿ ಆಟ ಮುಂದುವರಿದಿದೆ. ಕಳೆದ ಹಲವು ದಿನಗಳ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಗುರುವಾರ ಏರಿಕೆ ದಾಖಲಿಸಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 50,600 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 55,200 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,350 ರೂಪಾಯಿ ಏರಿಕೆಗೊಂಡು 66,900 ರೂಪಾಯಿ ಮುಟ್ಟಿದೆ.

ಇಂದು ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ವಹಿವಾಟು ಅಂತ್ಯದಲ್ಲಿ ಏರಿಕೆಯನ್ನು ದಾಖಲಿಸಿದೆ. ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 27: 49,050-53,500 (550 ರೂಪಾಯಿ ಏರಿಕೆ)

ಆಗಸ್ಟ್‌ 26: 48,500-52,910

ಆಗಸ್ಟ್ 25: 48,850-53,290

ಆಗಸ್ಟ್‌ 24: 49,200-53,670

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಆಗಸ್ಟ್‌ 27: 50,600-55,200 (750 ರೂಪಾಯಿ ಏರಿಕೆ)

ಆಗಸ್ಟ್‌ 26: 49,850-54,380

ಆಗಸ್ಟ್ 25: 50,250-54,870

ಆಗಸ್ಟ್‌ 24: 50,700-55,310

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 27: 49,750-54,270 (560 ರೂಪಾಯಿ ಏರಿಕೆ)

ಆಗಸ್ಟ್‌ 26: 49,190-53,660

ಆಗಸ್ಟ್ 25: 49,480-54,050

ಆಗಸ್ಟ್‌ 24: 50,030-54,580

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಆಗಸ್ಟ್‌ 27: 50,350-51,350 (50 ರೂಪಾಯಿ ಇಳಿಕೆ)

ಆಗಸ್ಟ್‌ 26: 50,400-51,400

ಆಗಸ್ಟ್ 25: 50,350-51,350

ಆಗಸ್ಟ್‌ 24: 50,710-51,710

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಆಗಸ್ಟ್‌ 27: 50,600-55,200 (750 ರೂಪಾಯಿ ಏರಿಕೆ)

ಆಗಸ್ಟ್‌ 26: 49,850-54,380

ಆಗಸ್ಟ್ 25: 50,250-54,870

ಆಗಸ್ಟ್‌ 24: 50,700-55,310

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಆಗಸ್ಟ್‌ 27: 49,900-53,300 (90 ರೂಪಾಯಿ ಏರಿಕೆ)

ಆಗಸ್ಟ್‌ 26: 49,990-53,300

ಆಗಸ್ಟ್ 25: 50,500-53,800

ಆಗಸ್ಟ್‌ 24: 50,500-53,800

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+