ಮತ್ತೆ ಗಗನಕ್ಕೇರುತ್ತಿದೆ ಚಿನ್ನದ ಬೆಲೆ: ಕೈಗೆಟುಕದೆ ಏರುತ್ತಿದೆ!
ನವದೆಹಲಿ, ಡಿಸೆಂಬರ್ 18: ಭಾರತೀಯ ಮಾರುಕಟ್ಟೆಗಳಲ್ಲಿ ಹಳದಿ ಲೋಹದ ಬೆಲೆ ರಾಕೆಟ್ ವೇಗದಲ್ಲಿ ಸಾಗುತ್ತಿದೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಮತ್ತೆ ವೇಗವಾಗಿ ಏರಿಕೆಯಾಗತೊಡಗಿದ್ದು, ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,950 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 53,400 ರೂಪಾಯಿಗೆ ಏರಿಕೆಯಾಗಿದೆ. ಇದರ ನಡುವೆ ಶುಕ್ರವಾರ ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಹೆಚ್ಚಾಗಿ 67,700 ರೂಪಾಯಿ ಗಡಿ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 18: 46,800-51,050 (450 ರೂ. ಏರಿಕೆ)
ಡಿಸೆಂಬರ್ 17: 46,400-50,600
ಡಿಸೆಂಬರ್ 16: 46,200-50,400
ಡಿಸೆಂಬರ್ 15: 45,800-49,960

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 18: 48,950-53,400 (440 ರೂ. ಏರಿಕೆ)
ಡಿಸೆಂಬರ್ 17: 48,760-52,960
ಡಿಸೆಂಬರ್ 16: 48,350-52,750
ಡಿಸೆಂಬರ್ 15: 47,950-52,310

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 18: 47,200-51,200 (280 ರೂ. ಏರಿಕೆ)
ಡಿಸೆಂಬರ್ 17: 46,950-51,220
ಡಿಸೆಂಬರ್ 16: 46,880-51,150
ಡಿಸೆಂಬರ್ 15: 46,530-50,730

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 18: 48,700-49,700 (10 ರೂ. ಏರಿಕೆ)
ಡಿಸೆಂಬರ್ 17: 48,710-49,710
ಡಿಸೆಂಬರ್ 16: 48,310-49,310
ಡಿಸೆಂಬರ್ 15: 48,200-49,200

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 18: 48,950-53,400 (440 ರೂ. ಏರಿಕೆ)
ಡಿಸೆಂಬರ್ 17: 48,760-52,960
ಡಿಸೆಂಬರ್ 16: 48,350-52,750
ಡಿಸೆಂಬರ್ 15: 47,950-52,310

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 18: 49,140-53,100 (1,010 ರೂ. ಏರಿಕೆ)
ಡಿಸೆಂಬರ್ 17: 48,220-52,090
ಡಿಸೆಂಬರ್ 16: 48,210-52,080
ಡಿಸೆಂಬರ್ 15: 48,100-51,970

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications