ಡಿ.30ರಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರು, ಡಿ. 30: ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಬುಧವಾರಂದು ಕೊಂಚ ಏರಿಕೆ ಕಂಡಿದೆ. ಮಂಗಳವಾರ ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ ಬುಧವಾರ ಈ ವಾರದ ಸರಾಸರಿಯಲ್ಲೂ 0,06% ಏರಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ 0.2%ರಷ್ಟು ಏರಿಕೆ ಕಂಡು ಪ್ರತಿ ಔನ್ಸಿಗೆ 1,881 ಡಾಲರ್ ನಷ್ಟಿದೆ. ಯುಎಸ್ ನಲ್ಲಿ ಕೊವಿಡ್ 19 ಸಾಂಕ್ರಾಮಿಕಕ್ಕಾಗಿ ಆರ್ಥಿಕ ಪ್ಯಾಕೇಜ್ ಘೋಷಣೆಯಾಗಿದ್ದು, ಚಿನಿವಾರ ಪೇಟೆ ಮೇಲೆ ಪರಿಣಾಮ ಬೀರಿದೆ.
ಆದರೆ, ಯುಕೆಯ ಹೊಸ ರೂಪಾಂತರಿ ವೈರಸ್ ನಿಂದ ಹಲವೆಡೆ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಚಿನ್ನದ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಉಂಟಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಬುಧವಾರ ಸ್ಪಾಟ್ ಗೋಲ್ಡ್ 50, 230 ರು ಪ್ರತಿ 10 ಗ್ರಾಂ ಹಾಗೂ ಫ್ಯೂಚರ್ ಗೋಲ್ಡ್ 50, 858 ಗ್ರು ಪ್ರತಿ 10 ಗ್ರಾಂನಂತೆ ವಹಿವಾಟು ನಡೆಸಿವೆ.
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ದೇಶದ ಪ್ರಮುಖ ನಗರಗಳಲ್ಲಿ ಕಳೆದ 5 ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 30: 46,700-50,950 (ಯಾವುದೇ ಬದಲಾವಣೆ ಇಲ್ಲ)
ಡಿಸೆಂಬರ್ 29: 46,700-50,950
ಡಿಸೆಂಬರ್ 28: 47,100-51,300
ಡಿಸೆಂಬರ್ 27: 46,710-50,950
ಡಿಸೆಂಬರ್ 26: 46,700-50,940

ದೆಹಲಿಯಲ್ಲಿ ಚಿನ್ನದ ಬೆಲೆ
ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 30: 48,850(+40)-53,300 (+60 ರೂ ಏರಿಕೆ)
ಡಿಸೆಂಬರ್ 29: 48,810-53,240
ಡಿಸೆಂಬರ್ 28: 48,800-53,230
ಡಿಸೆಂಬರ್ 27: 48,790-53,220
ಡಿಸೆಂಬರ್ 26: 48,780-53,210

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 30: 47,120 (-40)--51,420 (-40 ರೂ ಇಳಿಕೆ)
ಡಿಸೆಂಬರ್ 29: 47,160-51,460
ಡಿಸೆಂಬರ್ 28: 47,280-51,580
ಡಿಸೆಂಬರ್ 27: 47,310-51,610
ಡಿಸೆಂಬರ್ 26: 47,300-51,600

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 30: 48,930(-290 ರು)--49,930 (-290 ರು ಇಳಿಕೆ)
ಡಿಸೆಂಬರ್ 29: 49,220-50,220
ಡಿಸೆಂಬರ್ 28: 49,210-50,210
ಡಿಸೆಂಬರ್ 27: 48,730-49,730
ಡಿಸೆಂಬರ್ 26: 48,720-49,720












Click it and Unblock the Notifications