ಕನ್ನಡ ಸಿನಿಪ್ರಿಯರಿಗೆ ಗಿಫ್ಟ್ ನೀಡಿದ ಜಿಯೋ ಸಿನೆಮಾ
ಬೆಂಗಳೂರು, ಡಿಸೆಂಬರ್ 04: ಜಿಯೋ ಬಳಕೆದಾರರಿಗಾಗಿ ವಿಶೇಷವಾಗಿ ಸನ್ ಎನ್ಎಕ್ಸ್‌ಟಿಯ ಮೂಲಕ ದಕ್ಷಿಣ ಭಾರತದ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಪ್ರದರ್ಶಿಸಲಿದೆ ಜಿಯೋ ಸಿನಿಮಾ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಮತ್ತು ಮೊಲಿವುಡ್‌ನ ಸಿನಿಮಾಗಳನ್ನು ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ನೋಡಿ ಆನಂದಿಸಬಹುದು.
ಆನ್-ಡಿಮಾಂಡ್ ವೀಡಿಯೊ ಪ್ಲಾಟ್‌ಫಾರ್ಮ್ ಆಗಿರುವ ಜಿಯೋ ಸಿನಿಮಾ ಮತ್ತೆ ಲಕ್ಷಾಂತರ ಜಿಯೋ ಬಳಕೆದಾರರನ್ನು ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತೀಯರಿಗೆ ತಮ್ಮದೇ ಭಾಷೆಯ ಸೂಪರ್ ಹಿಟ್ ಸಿನಿಮಾಗಳನ್ನು ಪ್ರದರ್ಶಿಸಲು ಹೊಸ ಪ್ರಯತ್ನವನ್ನು ಮಾಡಿದೆ.
ಸನ್ ಟಿವಿ ನೆಟ್‌ವರ್ಕ್‌ನ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಸನ್ ಎನ್‌ಎಕ್ಸ್‌ಟಿ (Sun NXT) ಸಹಯೋಗದೊಂದಿಗೆ ದಕ್ಷಿಣ ಭಾರತದ ಚಲನಚಿತ್ರ ಕ್ಯಾಟಲಾಗ್ ಅನ್ನು ದೇಶಾದ್ಯಂತದ ಇರುವ ಜಿಯೋ ಬಳಕೆದಾರರಿಗೆ ಜಿಯೋ ಸಿನಿಮಾ ಪ್ರಸ್ತುತಪಡಿಸುತ್ತದೆ.

ದಕ್ಷಿಣ ಭಾರತದ 4 ಭಾಷೆಗಳ ಸಿನಿಮಾ
SUN NXT ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ದಕ್ಷಿಣ ಭಾರತದ 4 ಭಾಷೆಗಳಾದ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಲನಚಿತ್ರಗಳನ್ನು ಜಿಯೋ ಸಿಸಿಮಾದಲ್ಲಿಯೇ ಇನ್ನು ಮುಂದೆ ನೋಡಬಹುದಾಗಿದೆ. ಸನ್ ಎನ್‌ಎಕ್ಸ್‌ಟಿಯ ಲೈಬ್ರರಿಯಿಂದ 4,000 ಕ್ಕೂ ಹೆಚ್ಚು ದಕ್ಷಿಣ ಭಾರತದ ಚಲನಚಿತ್ರಗಳ ಜಿಯೋ ಬಳಕೆದಾರರ ನೋಡಬಹುದಾಗಿದೆ. ದಕ್ಷಿಣ ಭಾರತದ ಚಲನಚಿತ್ರಗಳೊಂದಿಗೆ ಜಿಯೋ ಸಿನಿಮಾದಲ್ಲಿ ವಿಶ್ವ ದರ್ಜೆಯ ವಿಡಿಯೋ ಸ್ಟ್ರೀಮಿಂಗ್ ಅನುಭವವನ್ನು ಪಡೆಯಬಹುದಾಗಿದೆ.

ಉಚಿತವಾಗಿ ಜಿಯೋ ಸಿನಿಮಾ ಆಪ್ ಬಳಕೆ
ಜಿಯೋ ಬಳಕೆದಾರರು ಉಚಿತವಾಗಿ ಜಿಯೋ ಸಿನಿಮಾ ಆಪ್ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕ ಜಿಯೋ ಸಿನೆಮಾದ "ಸೂಪರ್ ಸೌತ್ ಸ್ವಾಗ್'' ನ ಭಾಗವಾಗಿ ಸೂಪರ್ ಸ್ಟಾರ್‌ಗಳಾದ ಸೆಂಚುರಿ ಸ್ಟಾರ್ ಶಿವಣ್ಣ, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ತಲೈವರ್ ರಜನಿಕಾಂತ್, ಇಳೆಯದಳಪತಿ ವಿಜಯ್, ಅಲ್ಲು ಅರ್ಜುನ್, ತಲಾ ಅಜಿತ್ ಕುಮಾರ್, ಮಮ್ಮುಟ್ಟಿ, ಮಹೇಶ್ ಬಾಬು ಮತ್ತು ಇನ್ನೂ ಅನೇಕ ಸ್ಟಾರ್‌ಗಳ ಸಿನಿಮಾವನ್ನು ನೋಡಬಹುದಾಗಿದೆ.

ಸನ್ ಎನ್‌ಎಕ್ಸ್‌ಟಿಯ ಎಲ್ಲಾ ಶೋಗಳು ಲಭ್ಯ
ಜಿಯೋ ಸಿನಿಮಾ ವ್ಯಾಪಕ ಶ್ರೇಣಿಯ ಮತ್ತು ಬಹುಮುಖ ಬೇಡಿಕೆಯ ವೀಡಿಯೊ ಅನುಭವಗಳಿಗೆ ಹೆಸರುವಾಸಿಯಾಗಿದೆ, ಸ್ಥಳೀಯ ಭಾಷೆಗಳಲ್ಲಿ ವಿಶೇಷ ವೀಡಿಯೊಗಳನ್ನು ನೋಡಬಹುದಾಗಿದೆ. ದಕ್ಷಿಣ ಭಾರತದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಸನ್ ಎನ್‌ಎಕ್ಸ್‌ಟಿ ಯಲ್ಲಿ ಕಾಣಬಹುದಾಗಿದೆ. ದಕ್ಷಿಣ ಪ್ರದೇಶದ ಇತ್ತೀಚಿನ ಮತ್ತು ಅತ್ಯಂತ ಜನಪ್ರಿಯ ಟಿವಿ ಶೋಗಳನ್ನು ಇಲ್ಲಿ ನೋಡಬಹುದು.

ಎರಡು ಡಿಜಿಟಲ್ ಪ್ಲಾಟ್‌ಫಾರ್ಮ್
ಈ ಎರಡು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ನಡುವಿನ ಒಡನಾಟವು ದಕ್ಷಿಣ ಭಾರತದ ಅತ್ಯುತ್ತಮ ವೀಡಿಯೊ ಕಂಟೆಂಟ್‌ಗಳನ್ನು ದಕ್ಷಿಣ ಭಾರತದ ಚಲನಚಿತ್ರ ಅಭಿಮಾನಿಗಳಿಗೆ ತಲುಪಿಸಲು ಸಹಾಯವಾಗುತ್ತದೆ.
ಜಿಯೋ ಸಿನೆಮಾ ಈಗಾಗಲೇ 10,000+ ಚಲನಚಿತ್ರಗಳು, 1 ಲಕ್ಷ + ಟಿವಿ ಶೋ ಸಂಚಿಕೆಗಳು ಮತ್ತು ಓರ್ಜಿನಲ್ ಶೋಗಳನ್ನು ಒಳಗೊಂಡಿದೆ ಮತ್ತು ಈಗ, ಸನ್‌ಎನ್‌ಎಕ್ಸ್‌ಟಿಯ ಚಲನಚಿತ್ರ ಕ್ಯಾಟಲಾಗ್‌ನೊಂದಿಗೆ, ಅನಿಯಮಿತ ದಕ್ಷಿಣ ಭಾರತೀಯ ಬ್ಲಾಕ್‌ಬಸ್ಟರ್‌ಗಳನ್ನು ಬಳಕೆದಾರರಿಗೆ ನೀಡಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications