ಮರ್ಕೆಲ್ ಎಫೆಕ್ಟ್ : ಬಾಷ್ ಸಂಸ್ಥೆಯಿಂದ 650 ಕೋಟಿ ರು ಹೂಡಿಕೆ

ಬೆಂಗಳೂರು, ಅ.07: ಬೆಂಗಳೂರಿನಲ್ಲಿ ಸುಮಾರು 650 ಕೋಟಿ ರೂ.ಬಂಡವಾಳ ಹೂಡಲಾಗುವುದು ಎಂದು ಜರ್ಮನಿಯ ಬಾಷ್ ಕಂಪನಿ ಘೋಷಿಸಿದೆ. ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಬೆಂಗಳೂರು ಭೇಟಿ ನೀಡಿದ ಬೆನ್ನಲ್ಲೇ ಈ ಪ್ರಕಟಣೆ ಹೊರ ಬಂದಿದೆ.

ಭಾರತದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ಮರ್ಕೆಲ್ ಅವರು ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ಧರಾಮಯ್ಯ ಅವರ ಜತೆಗೂಡಿ ಬೆಂಗಳೂರಿನ ಆಡುಗೋಡಿಯಲ್ಲಿರುವ ಬಾಷ್ ಘಟಕಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಘಟಕಗಳಲ್ಲಿ ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಯತ್ತ ಹೆಚ್ಚಿನ ಒತ್ತು ನೀಡಿಲಿದೆ ಎಂದು ಮರ್ಕೆಲ್ ಹೇಳಿದ್ದರು.[ಬೆಂಗಳೂರೆಂದರೆ ಜರ್ಮನಿ ಕಂಪನಿಗಳಿಗೆ ಏಕೆ ಇಷ್ಟ?]

Bosch to invest Rs.650 cr in India

ಭಾರತದಲ್ಲಿ ಮೊಬಿಲಿಟಿ, ಮೂಲಸೌಕರ್ಯ, ಉದ್ಯಮ, ಇಂಧನ ಮತ್ತು ಭದ್ರತೆ ಕ್ಷೇತ್ರದಲ್ಲಿ ನಮ್ಮ ಉತ್ಪನ್ನಗಳಿಗೆ ಸಾಕಷ್ಟು ಅವಕಾಶವಿದೆ. ಸ್ಮಾರ್ಟ್ ಉತ್ಪಾದನೆ ಕ್ಷೇತ್ರ ಕೂಡ ಭಾರತದಲ್ಲಿ ಬಾಷ್‌ಗೆ ಸಾಕಷ್ಟು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂದು ಭಾರತದಲ್ಲಿನ ಬಾಷ್ ಸಮೂಹದ ಅಧ್ಯಕ್ಷ ಡಾ. ಸ್ಟೆಫಿನ್ ಬರ್ನ್ಸ್ ಹೇಳಿದರು.

2015ರ ಸೆಪ್ಟೆಂಬರ್‌ನಲ್ಲಿ ಬಿಡದಿಯ ಹೊಸ ಆಟೊಮೇಟಿವ್ ಘಟಕ ಉತ್ಪಾದನೆ ಆರಂಭಿಸಿದೆ. ರ ವೇಳೆಗೆ ದೇಶದ ಎಲ್ಲ 14 ಉತ್ಪಾದನೆ ಕೇಂದ್ರಗಳಲ್ಲಿ ನಾವು ಸಂಪರ್ಕಿತ ಉತ್ಪಾದನೆ ಅಭಿವೃದ್ಧಿಗೊಳಿಸುವ ಗುರಿಯಿದೆ.

ಬಾಷ್ ಜಾಗತಿಕವಾಗಿ ಉದ್ಯಮದೊಂದಿಗೆ ಮುಂಚೂಣಿ ಪೂರೈಕೆದಾರನಾಗಿದ್ದು ಉದ್ಯಮ ಅಥವಾ ಉದ್ಯಮ 4.0ದೊಂದಿಗೆ ಸಂಪರ್ಕ ಹೊಂದಿದೆ. ತಂತ್ರಜ್ಞಾನ ಮತ್ತು ಸೇವೆಯನ್ನು ಒದಗಿಸುತ್ತಿದೆ. ವಾಹನ, ಸಾಫ್ಟ್‌ವೇರ್, ಸೆನ್ಸಾರ್ ಮೊದಲಾದ ಕ್ಷೇತ್ರದ ಉತ್ಪನ್ನಗಳನ್ನು ನೀಡುತ್ತಿದೆ.

ಬಿಡದಿಯಲ್ಲಿನ ಒಂದು ಘಟಕ ಸೇರಿದಂತೆ ತಮಿಳುನಾಡಿನ ಚೆನ್ನೈ ಹಾಗೂ ಗಂಗೈಕೊಂಡನ್ ನಲ್ಲಿ ಇನ್ನೆರಡು ಘಟಕಗಳನ್ನು ಆರಂಭಿಸಲಾಗುವುದು. 2014ರಲ್ಲಿ ಒಟ್ಟು 500 ಕೋಟಿ ರು ಹೂಡಿಕೆ ಮಾಡಲಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ.ಜರ್ಮನಿಯ ನಂತರ ಬಾಷ್‌ನ ಅತಿ ದೊಡ್ಡ ಉತ್ಪಾದನೆ ಕೇಂದ್ರ ಬೆಂಗಳೂರು ಮತ್ತು ಕೊಯ್ಯಮತ್ತೂರಿನಲ್ಲಿದೆ.ಮತ್ತು 12000ಕ್ಕೂ ಅಧಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಹಾಯಕರನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+