ಮತ್ತಷ್ಟು ಕಡಿಮೆಯಾಗಲಿದೆ ಜಿಡಿಪಿ ದರ: ಮೋದಿ ಸರ್ಕಾರಕ್ಕಿದೆ ಸವಾಲು!

Recommended Video

      ಮೋದಿ ಸರ್ಕಾರಕ್ಕಿದೆ ಸವಾಲಾಗಿರೋ ಜಿಡಿಪಿ ದರ | Oneindia Kannada

      ನವದೆಹಲಿ, ಜನವರಿ 06: ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆ 2017-18 ನೇ ಹಣಕಾಸು ವರ್ಷದಲ್ಲಿ 6.5 ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಸೆಂಟ್ರಲ್ ಸ್ಟೆಟಿಸ್ಟಿಕ್ಸ್ ಆಫೀಸ್ ತಿಳಿಸಿದೆ.

      ಅಪನಗದೀಕರಣ ಮತ್ತು ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ಜಾರಿ, ಜಿಡಿಪಿ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಡಿಪಿ ಇಳಿಕೆಯಾಗಲಿದೆ. ಕಳೆದ ವರ್ಷ ಮಾರ್ಚ್ ಸಮಯದಲ್ಲಿ ಜಿಡಿಪಿ ದರ 7.1 % ಇತ್ತು. ಆದರೆ ಈ ಬಾರಿ 6.5ಕ್ಕೆ ಇಳಿಯಲಿದ್ದು, ಕಳೆದ ನಾಲ್ಕು ವರ್ಷಗಳಲ್ಲೇ ಇದು ಅತ್ಯಂತ ಕನಿಷ್ಠ ಮಟ್ಟ ತಲುಪಿದಂತಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

      ಅಷ್ಟೇ ಅಲ್ಲ ಭಾರತದ ತಲಾದಾಯ(ಜಿಡಿಐ) ಕೂಡ ಈ ಹಣಕಾಸು ವರ್ಷದಲ್ಲಿ(2017-18) 8.3 ಕ್ಕೆ ಇಳಿಕೆಯಾಗಬಹುದೆಂದು ಅಂದಾಜಿಸಲಾಗಿದೆ.

      GDP growth may slowdown to 6.5% in 2018 financian year

      ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಡಿಸಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಇದೊಂದು ಸವಾಲಿನ ಸನ್ನಿವೇಶವಾಗಲಿದೆ. ಅದರಲ್ಲೂ 2019 ರಲ್ಲಿ ಲೋಕಸಭಾ ಚುನಾವಣೆಯೂ ಇರುವುದರಿಂದ ಜಿಡಿಪಿ ದರದಲ್ಲಿ ಇಳಿಕೆಯಾಗುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲೂ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+