ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಜಿಡಿಪಿ 5%; ಆರು ವರ್ಷದಲ್ಲೇ ಕನಿಷ್ಠ

ನವದೆಹಲಿ, ಆಗಸ್ಟ್ 30: ಏಪ್ರಿಲ್- ಮೇ ಹಾಗೂ ಜೂನ್ 30ಕ್ಕೆ ಕೊನೆಗೊಂಡ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ದೇಶದ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) 5%ಗೆ ಕುಸಿಯುವ ಮೂಲಕ ಪಾತಾಳ ತಲುಪಿದೆ. ಈ ಅಂಕಿ- ಅಂಶವನ್ನು ಕೇಂದ್ರ ಸರಕಾರದಿಂದ ಶುಕ್ರವಾರ ಬಹಿರಂಗ ಮಾಡಲಾಗಿದೆ. ಆರ್ಥಿಕ ತಜ್ಞರು ನಿರೀಕ್ಷೆ ಮಾಡಿದ್ದಕ್ಕಿಂತ ಜಿಡಿಪಿ ಪ್ರಗತಿ ಪ್ರಮಾಣ ಇಳಿಕೆ ಆಗಿದೆ.

ರಾಯಿಟರ್ಸ್ ಸುದ್ದಿ ಸಂಸ್ಥೆಯು ನಡೆಸಿದ ಆರ್ಥಿಕ ತಜ್ಞರ ಅಭಿಪ್ರಾಯ ಸಂಗ್ರಹದಲ್ಲಿ, ವರ್ಷದ ಮೊದಲ ತ್ರೈ ಮಾಸಿಕದಲ್ಲಿ ದೇಶದ GDP 5.7% ಆಗಬಹುದು ಎಂದು ಅಂದಾಜಿಸಿತ್ತು. ಆದರೆ ಆ ಗುರಿಯನ್ನು ತಲುಪುವುದಕ್ಕೆ ಕೂಡ ಸಾಧ್ಯವಾಗಿಲ್ಲ. ಕಳೆದ ವರ್ಷ ಇದೇ ಅವಧಿಯ ತ್ರೈ ಮಾಸಿಕದಲ್ಲಿ (ಏಪ್ರಿಲ್- ಜೂನ್) ಜಿಡಿಪಿ ಪ್ರಗತಿ 8 ಪರ್ಸೆಂಟ್ ದಾಖಲಾಗಿತ್ತು.

GDP At 5 Percent For First Quarter Of Year April To June; 6 Year Low

ಕೃಷಿ, ನಿರ್ಮಾಣ ಹಾಗೂ ಉತ್ಪಾದನಾ ವಲಯದಲ್ಲಿ ನಿಧಾನ ಗತಿಯ ಪ್ರಗತಿಯ ಕಾರಣಕ್ಕೆ ಜಿಡಿಪಿ ಮೇಲೆ ದೊಡ್ಡ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಡಲಾಗಿದೆ. ಈ ಬಾರಿ ಐದು ಪರ್ಸೆಂಟ್ ಗೆ ಜಿಡಿಪಿ ಕುಸಿಯುವ ಮೂಲಕ ಐದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+