8 ತಿಂಗಳಲ್ಲೇ ಇದೇ ಮೊದಲು, ಪೆಟ್ರೋಲ್ ಬೆಲೆ 75ರು ರೊಳಗೆ
ನವದೆಹಲಿ, ನವೆಂಬರ್ 28: ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಕಳೆದ 8 ತಿಂಗಳ ಹಿಂದೆ ಇದ್ದ ದರಕ್ಕೆ ಕುಸಿದಿದ್ದು, ಬೆಂಗಳೂರಲ್ಲಿ 75ರು ನಂತೆ ಪೆಟ್ರೋಲ್ ಸಿಗುತ್ತಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬುಧವಾರ (ನವೆಂಬರ್ 28)ದಂದು ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿವೆ. ನಿರಂತರವಾಗಿ ಏರಿಕೆ ಕಾಣುತ್ತಿದ್ದ ಇಂಧನ ದರ ಈಗ ಇಳಿಕೆಯಾಗುತ್ತಿದ್ದು, ವಾಹನ ಸವಾರರಿಗೆ ಸಂತಸ ತಂದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬೆಲೆ 60 ಡಾಲರ್ ನಷ್ಟಿದೆ. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು. ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ (ಪ್ರತಿ 1 ಡಾಲರ್ =70.72ರುಪಾಯಿ) ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸತತವಾಗಿ ಕುಸಿತಗೊಳ್ಳುತ್ತಿರುವ ಹಿನ್ನೆಲೆ ಬುಧವಾರವೂ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾಗಿ ಗ್ರಾಹಕರ ಮೊಗದಲ್ಲಿ ನಗೆ ಮೂಡಿಸಿದೆ. ಬಹುತೇಕ ದೇಶದೆಲ್ಲೆಡೆ 80 ರು ರೊಳಗೆ ಪೆಟ್ರೋಲ್ ಸಿಗುವಂತಾಗಿದೆ.
ಕಳೆದ 15 ದಿನಗಳಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗುತ್ತಲೇ ಇದೆ. ಇರಾನ್ ಮೇಲಿನ ನಿರ್ಬಂಧವನ್ನು ಯುನೈಟೆಡ್ ಸ್ಟೇಟ್ಸ್ ತಕ್ಕಮಟ್ಟಿಗೆ ಹಿಂದಕ್ಕೆ ಪಡೆದುಕೊಂಡಿದೆ. ಇದರಿಂದಾಗಿ, ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ಗೆ ಅನುಕೂಲವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ
ಬುಧವಾರ(ನವೆಂಬರ್ 28)ದಂದು ಪೆಟ್ರೋಲ್ 74.15 ರು(50 ಪೈಸೆ ಇಳಿಕೆ)
ಮಂಗಳವಾರದಂದು ಪೆಟ್ರೋಲ್ 74.65 ರು(43 ಪೈಸೆ ಇಳಿಕೆ) ಸೋಮವಾರದಂದು ಪೆಟ್ರೋಲ್ 75.08ರು (35 ಪೈಸೆ ಕಡಿತ)
ಡೀಸೆಲ್ ಬೆಲೆ ಇಳಿಕೆ
ಬುಧವಾರ(ನವೆಂಬರ್ 28)ದಂದು ಡೀಸೆಲ್ 68.85 ರು(40 ಪೈಸೆ ಇಳಿಕೆ)
ಮಂಗಳವಾರದಂದು ಡೀಸೆಲ್ 69.25 ರು(40 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 69.65ರು (42 ಪೈಸೆ ಕಡಿತ)

ನವದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ
ನವದೆಹಲಿಯಲ್ಲಿ ತೈಲ ಬೆಲೆ
ಬುಧವಾರ(ನವೆಂಬರ್ 28)ದಂದು ಪೆಟ್ರೋಲ್ 73.57ರು(50 ಪೈಸೆ ಇಳಿಕೆ)
ಮಂಗಳವಾರದಂದು ಪೆಟ್ರೋಲ್ 74.07 ರು(42 ಪೈಸೆ ಇಳಿಕೆ) ಸೋಮವಾರದಂದು ಪೆಟ್ರೋಲ್ 74.49 ರು (35 ಪೈಸೆ ಕಡಿತ)
ಡೀಸೆಲ್ ಬೆಲೆ ಇಳಿಕೆ
ಬುಧವಾರ(ನವೆಂಬರ್ 28)ದಂದು ಡೀಸೆಲ್ 68.49 ರು(40 ಪೈಸೆ ಇಳಿಕೆ)
ಮಂಗಳವಾರದಂದು ಡೀಸೆಲ್ 68.89 ರು(40 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 69.29ರು (41 ಪೈಸೆ ಕಡಿತ)

ಮುಂಬೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಮುಂಬೈಯಲ್ಲಿ ತೈಲ ದರ ಬೇರೆ ನಗರಗಳಿಗೆ ಹೋಲಿಸಿದರೆ ಅಧಿಕವಾಗಿದೆ.
ಬುಧವಾರ(ನವೆಂಬರ್ 28)ದಂದು ಪೆಟ್ರೋಲ್ 79.12 ರು(50 ಪೈಸೆ ಇಳಿಕೆ)
ಮಂಗಳವಾರದಂದು ಪೆಟ್ರೋಲ್ 79.62 ರು(41 ಪೈಸೆ ಇಳಿಕೆ) ಸೋಮವಾರದಂದು ಪೆಟ್ರೋಲ್ 80.03ರು (35 ಪೈಸೆ ಕಡಿತ)
ಡೀಸೆಲ್ ಬೆಲೆ ಇಳಿಕೆ
ಬುಧವಾರ(ನವೆಂಬರ್ 28)ದಂದು ಡೀಸೆಲ್ 71.71 ರು(42 ಪೈಸೆ ಇಳಿಕೆ)
ಮಂಗಳವಾರದಂದು ಡೀಸೆಲ್ 72.13 ರು(43 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 72.56ರು (43 ಪೈಸೆ ಕಡಿತ)

ಚೆನ್ನೈಯಲ್ಲಿ ಇಂಧನ ದರ ಎಷ್ಟಿದೆ.
ಬುಧವಾರ(ನವೆಂಬರ್ 28)ದಂದು ಪೆಟ್ರೋಲ್ 76.35 ರು(53 ಪೈಸೆ ಇಳಿಕೆ)
ಮಂಗಳವಾರದಂದು ಪೆಟ್ರೋಲ್ 76.88 ರು(44 ಪೈಸೆ ಇಳಿಕೆ) ಸೋಮವಾರದಂದು ಪೆಟ್ರೋಲ್ 77.32ರು (37 ಪೈಸೆ ಕಡಿತ)
ಡೀಸೆಲ್ ಬೆಲೆ ಇಳಿಕೆ
ಬುಧವಾರ(ನವೆಂಬರ್ 28)ದಂದು ಡೀಸೆಲ್ 72.34 ರು(43 ಪೈಸೆ ಇಳಿಕೆ)
ಮಂಗಳವಾರದಂದು ಡೀಸೆಲ್ 72.77ರು(43 ಪೈಸೆ ಇಳಿಕೆ)
ಸೋಮವಾರದಂದು ಡೀಸೆಲ್ 73.20ರು (43 ಪೈಸೆ ಕಡಿತ)












Click it and Unblock the Notifications