ಫ್ರೀಡಂ 251 : ಸರ್ಕಾರದ ಸಬ್ಸಿಡಿ ಪಡೆದಿಲ್ಲ , ಸಂಸ್ಥೆ ಸ್ಪಷ್ಟನೆ

Posted By:
Subscribe to Oneindia Kannada

ನವದೆಹಲಿ, ಫೆ.19: ನೋಯ್ಡಾ ಮೂಲದ ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದನಾ ಸಂಸ್ಥೆ ರಿಂಗಿಂಗ್ ಬೆಲ್ ಪರಿಚಯಿಸಿದ ಫ್ರೀಡಂ 251 ಮೊಬೈಲ್ ಫೋನ್ ವಿವಾದದ ಬಗ್ಗೆ ಸಂಸ್ಥೆಯ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಸಂಸ್ಥೆ ವಿನೂತನ ಮಾರ್ಕೆಟಿಂಗ್ ತಂತ್ರ ಬಳಸುತ್ತಿದೆ ಹೊರತೂ ಜನರಿಗೆ ಮಂಕುಬೂದಿ ಎರಚುತ್ತಿಲ್ಲ ಎಂದಿದ್ದಾರೆ.

ಕೇವಲ 251 ರು ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸಲು ಮುಂದಾಗಿದ್ದ ಗ್ರಾಹಕರು ಈಗ ಆತಂಕದಲ್ಲಿದ್ದಾರೆ. ಆನ್ ಲೈನ್ ಬುಕ್ಕಿಂಗ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಕೆಲವರು 'ಯಾವಾಗಾದರೂ ಬರಲಿ' ಎಂಬ ಮನಸ್ಥಿತಿಯಲ್ಲಿದ್ದಾರೆ.[ಮೇಡ್ ಇನ್ ಇಂಡಿಯಾ ಫ್ರೀಡಂ 251ಗೆ ಕಾಪಿರೈಟ್ ಪ್ರಾಬ್ಲಂ!]

ಸುಮಾರು 4,000 ರು ಮುಖಬೆಲೆಯ ಆಡ್ ಕಾಮ್ ಐಕಾನ್ 4 ಮಾದರಿ ಮೊಬೈಲ್ ಫೋನನ್ನು 2546 ರು ಬೆಲೆ ತಗ್ಗಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿಯಿದೆ. [ಫ್ರೀಡಂ 251 ಮಾರಾಟದಿಂದ ರಿಂಗಿಂಗ್ ಬೆಲ್ ಗೆ ಲಾಭ ಎಷ್ಟು?]

ಇದಕ್ಕೆ ತಕ್ಕಂತೆ ಸಂಸ್ಥೆಯ ನಿರ್ದೇಶಕ ಅಶೋಕ್ ಛಡ್ಡಾ ಹಾಗು ಅವರ ಸಹೋದ್ಯೋಗಿ ಮೋಹಿ ಗೋಯಲ್ ಅವರು ಮೊಬೈಲ್ ಫೋನ್ ಬೆಲೆ ನಿರ್ಧಾರದ ಬಗ್ಗೆ ವಿವರಿಸಿದ್ದಾರೆ. ಝಾನ್ಸಿಯ ರಾಷ್ಟ್ರೀಯ ಹೆದ್ದಾರಿಯ ಧಾಬಾವೊಂದರಲ್ಲಿ ಮಧ್ಯರಾತ್ರಿ ನಮಗೆ ಈ ಐಡಿಯಾ ಹೊಳೆಯಿತು ಎಂದಿದ್ದಾರೆ.

ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ಮೊಬೈಲ್ ಫೋನ್ ರೂಪಿಸಲಾಗುವುದು ರಿಂಗಿಂಗ್ ಬೆಲ್ ಪ್ರೈ ಲಿಮಿಟೆಡ್ ಹೇಳಿದೆ.

251ರು ಬೆಲೆ ನಿಗದಿ ಮಾಡುವ ಗುರಿ

251ರು ಬೆಲೆ ನಿಗದಿ ಮಾಡುವ ಗುರಿ

251ರು ಬೆಲೆ ನಿಗದಿ ಮಾಡುವ ಗುರಿ ಹೊಂದಲಾಯಿತು. ಶೇ 13.8ರಷ್ಟು ತೆರಿಗೆ ಮೊತ್ತವನ್ನು ಗ್ರಾಹಕರ ಮೇಲೆ ಹೇರದಿರಲು ನಿರ್ಧರಿಸಲಾಯಿತು ಇದರಿಂಅ 450 ರಿಂದ 470 ರು ಇಳಿಕೆ ಮಾಡಲಾಯಿತು. ಹೆಚ್ಚೆಚ್ಚು ಉತ್ಪಾದನೆ ಮಾಡುವ ಮೂಲಕ ಉತ್ಪಾದನಾ ವೆಚ್ಚ ತಗ್ಗಿಸಲು ನಿರ್ಧರಿಸಲಾಯಿತು. ಆನ್ ಲೈನ್ ಸೇಲ್ ಮಾಡುವುದರಿಂದ 460 ರು ಸೇವ್ ಆಗುತ್ತದೆ. ಹೀಗೆ 251 ರು ಬೆಲೆ ನಿಗದಿಯಾಯಿತು.

ಸರ್ಕಾರದ ಸಬ್ಸಿಡಿ ಪಡೆದುಕೊಂಡಿಲ್ಲ

ಸರ್ಕಾರದ ಸಬ್ಸಿಡಿ ಪಡೆದುಕೊಂಡಿಲ್ಲ

ಫ್ರೀಡಂ 251 ಮೊಬೈಲ್ ಉತ್ಪಾದನೆ ಮಾಡಲು ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆದುಕೊಂಡಿಲ್ಲ. ಮೇಡ್ ಇನ್ ಇಂಡಿಯಾ ಯೋಜನೆಗೆ ಅನುಸಾರವಾಗಿ ಮೊಬೈಲ್ ಉತ್ಪಾದನೆ ಹಾಗೂ ಮಾರಾಟ ಮಾಡಲಾಗುತ್ತಿದೆ. ಶೇ 13.8 ರಷ್ಟು ತೆರಿಗೆ ಮೊತ್ತ ಉಳಿಸಲಾಗುತ್ತಿದೆ ಎಂದಿದ್ದಾರೆ.

ಎರಡು ಕಡೆ ಉತ್ಪಾದನಾ ಘಟಕ

ಎರಡು ಕಡೆ ಉತ್ಪಾದನಾ ಘಟಕ

ನೋಯ್ಡಾ ಹಾಗೂ ಉತ್ತರಾಂಚಲ್ ನಲ್ಲಿ ಎರಡು ಘಟಕಗಳನ್ನು ಸ್ಥಾಪಿಸಲಾಗಿದ್ದು, 250 ಕೋಟಿ ರು ಹೂಡಿಕೆ ಮಾಡಲಾಗಿದೆ. 5 ಲಕ್ಷ ಫೋನ್ ಉತ್ಪಾದನೆ ಗುರಿ ಹೊಂದಲಾಗಿದೆ. 1.5:1 ಅನುಪಾತದಲ್ಲಿ ಸಾಲ ಹಾಗೂ ಈಕ್ವಿಟಿ ಮೂಲಕ ಹಣವನ್ನು ಹಿಂಪಡೆಯಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಫ್ರೀಡಂ 251 ಫೋನ್ ನ ವಿಶೇಷತೆ

ಫ್ರೀಡಂ 251 ಫೋನ್ ನ ವಿಶೇಷತೆ

* 4 ಇಂಚಿನ qHD IPS ಡಿಸ್​ಪ್ಲೇ
* 5.1 ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್
* ಫ್ರಂಟ್ ಕ್ಯಾಮರಾ 0.3 ಮೆಗಾ ಪಿಕ್ಸೆಲ್,
* 3.2 ಮೆಗಾ ಪಿಕ್ಸೆಲ್ ರೇರ್ ಕ್ಯಾಮರಾ,
* 3ಜಿ
* 1 ಜಿಬಿ ರಾಮ್ 8 ಜಿಬಿ ಸಂಗ್ರಹ ಸಾಮರ್ಥ್ಯ 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ.
* 1450 ಎಮ್​ಎಚ್ ಬ್ಯಾಟರಿ ಹೊಂದಿದೆ.
* ದೇಶದ 650 ಸರ್ವೀಸ್ ಸೆಂಟರ್ ಗಳನ್ನು ಆರಂಭಿಸಲಾಗಿದೆ.
* ಸ್ವಚ್ಛ ಭಾರತ್, ಮಹಿಳಾ ಸುರಕ್ಷತೆ, ವಾಟ್ಸಪ್, ಫೇಸ್ ಬುಕ್, ಟ್ವಿಟ್ಟರ್ apps

ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿಕೊಳ್ಳಿ

ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿಕೊಳ್ಳಿ

ಇದರ ಮೂಲ ಬೆಲೆ 500ರೂ ಆಗಿದ್ದರೂ, ಲಾಂಚಿಂಗ್ ಆಫರ್ ಆಗಿ ಕೇವಲ 251 ರೂಗೆ ಸ್ಮಾರ್ಟ್ ಪೋನ್ ನೀಡಲು ಕಂಪನಿ ನಿರ್ಧರಿಸಿದೆ. ಫೆ 18ರ ಬೆಳಿಗ್ಗೆ 6 ಗಂಟೆಯಿಂದ ಫೆ 21ರ ರಾತ್ರಿ 8ಗಂಟೆವರೆಗೆ ಈ ಆಫರ್ ಇರುತ್ತದೆ. ವೆಬ್ ಸೈಟ್ : www.freedom251.com

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
By going for Made in India components, we can save on the 13.8 per cent duty. Also, we will be selling online first and thus save the costs incurred on large distribution network," he said. Chaddha also rejected speculations of the handset being subsidised by the government.
Please Wait while comments are loading...