Free Gold Coins: ಅಕ್ಷಯ ತೃತೀಯಕ್ಕೆ ಭರ್ಜರಿ ಆಫರ್‌ಗಳನ್ನು ಘೋಷಿಸಿದ ಹಲವು ಚಿನ್ನದ ಅಂಗಡಿಗಳು
ನವದೆಹಲಿ, ಮೇ. 02 : ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಮಂಗಳಕರ ದಿನವೆಂದು ಪರಿಗಣಿಸಲಾಗುವ ಅಕ್ಷಯ ತೃತೀಯ ಹಬ್ಬಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿಯಿದೆ. ಚಿನ್ನದ ಬೆಲೆ ಗಗನಕ್ಕೆ ಏರಿರುವ ಈ ಸಮಯದಲ್ಲಿ ಚಿನ್ನ ಕೊಳ್ಳುವವರನ್ನು ತಮ್ಮತ್ತ ಸೆಳೆಯರು ಹಲವು ಜ್ಯುವೆಲರ್ಸ್ ಭರ್ಜರಿ ಆಫರ್‌ಗಳನ್ನು ಘೋಷಿಸಿವೆ.
ಹಲವು ಜ್ಯುವೆಲರ್ಸ್ ಬೃಹತ್ ರಿಯಾಯಿತಿಗಳು, ಉಚಿತ ಚಿನ್ನದ ನಾಣ್ಯಗಳು, ರಾಫೆಲ್ ಡ್ರಾ ಮತ್ತು ಜೀರೋ ಮೇಕಿಂಗ್ ಚಾರ್ಚ್ ಸೇರಿದಂತೆ ಹಲವು ಆಕರ್ಷಕ ಕೊಡುಗೆಗಳ್ನು ನೀಡುತ್ತಿವೆ. ಮಲಬಾರ್ ಗೋಲ್ಡ್ ಅಂಡ್ ಡೈಮೆಂಡ್ಸ್, ಬಾಫ್ಲೆ ಜ್ಯುವೆಲರ್ಸ್, ತಾನಿಷ್ಕ್, ಜೋಯಾಲುಕ್ಕಾಕ್ಸ್ ಗ್ರೂಪ್, ಕಲ್ಯಾಣ್ ಜ್ಯುವೆಲರ್ಸ್, ಭೀಮಾ ಜ್ಯುವೆಲ್ಲರ್ಸ್ ಕೂಡ ಆಫರ್ ಘೋಷಿಸಿವೆ.

ಚಿಲ್ಲರೆ ವ್ಯಾಪಾರಿಗಳು ದೇಶದ ಎಲ್ಲಿಂದಲಾದರೂ ಖರೀದಿಸಿದ ಹಳೆಯ ಚಿನ್ನದ ಆಭರಣಗಳ ವಿನಿಮಯದ ಮೇಲೆ ಶೂನ್ಯ ಕಡಿತವನ್ನು ನೀಡುತ್ತಿದ್ದಾರೆ. ಅಕ್ಷಯ ತೃತೀಯದಲ್ಲಿ ಚಿನ್ನದ ಬೆಲೆಗಳು ಹೆಚ್ಚಿದ್ದರೂ, ಚಿನ್ನಾಭರಣಗಳನ್ನು ಖರೀದಿಸಲು ಮಂಗಳಕರ ದಿನವೆಂದು ಪರಿಗಣಿಸಲಾದ ಅಂದು ಆಭರಣಗಳ ಮಾರಾಟವು ಚುರುಕಾಗಿರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ವ್ಯಾಪಾರಿಗಳು. ಈ ಬಾರಿ ಮೇ 10 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮೇ 12 ರವರೆಗೆ ವಜ್ರಗಳು ಮತ್ತು ಬೆಲೆಬಾಳುವ ರತ್ನದ ಆಭರಣಗಳ ಖರೀದಿಯ ಮೇಲೆ ಉಚಿತ ಚಿನ್ನದ ನಾಣ್ಯಗಳನ್ನು ನೀಡುವ ಘೋಷಣೆ ಮಾಡಿದೆ. ಮೇ 12 ರವರೆಗೆ ಎಲ್ಲಿಂದಲಾದರೂ ಖರೀದಿಸಿದ ಹಳೆಯ ಆಭರಣಗಳನ್ನು ಶೂನ್ಯ ಕಡಿತದಲ್ಲಿ ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ನೀಡಿದೆ. ಇತರ ಕೊಡುಗೆಗಳಲ್ಲಿ 8 ಗ್ರಾಂ ಚಿನ್ನದ ನಾಣ್ಯಗಳು ಜೀರೋ ಮೇಕಿಂಗ್ ಶುಲ್ಕ ಮತ್ತು ಆಯ್ದ ಆಭರಣ ವಿನ್ಯಾಸಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ.
ಬಫ್ಲೆ ಜ್ಯುವೆಲರ್ಸ್ ಶಾರ್ಜಾ ಪ್ರದೇಶದಲ್ಲಿನ ತನ್ನ ಆಯ್ದ ಅಂಗಡಿಗಳಲ್ಲಿ ವಜ್ರದ ಆಭರಣಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿಯನ್ನು ನೀಡಲು ಯೋಜಿಸುತ್ತಿದೆ. ಜೊತೆಗೆ 10 ಗ್ರಾಂ ಚಿನ್ನದ ರಾಫೆಲ್ ಡ್ರಾ ಜೊತೆಗೆ ಉಚಿತ ಉಡುಗೊರೆಗಳನ್ನು ಸ್ಕ್ರ್ಯಾಚ್ ಮಾಡಿ ಮತ್ತು ಗೆಲ್ಲುವ ಕೊಡುಗೆಗಳನ್ನು ಪ್ಲ್ಯಾನ್ ಮಾಡುತ್ತಿದೆ.

ತನಿಷ್ಕ್‌ನಲ್ಲೂ ರಿಯಾಯಿತಿ
ಆಭರಣ ಬ್ರ್ಯಾಂಡ್ ತನಿಷ್ಕ್ 18K ಮತ್ತು 22K ಚಿನ್ನ ಮತ್ತು ವಜ್ರಗಳು, ಸಾಲಿಟೇರ್‌ಗಳು, ಕುಂದನ್, ಪೋಲ್ಕಿ ಮತ್ತು ಬಣ್ಣದ ಸ್ಟೋನ್ ಮೇಲೆ ಚಿನ್ನದ ತಯಾರಿಕೆ ಶುಲ್ಕಗಳು ಮತ್ತು ವಜ್ರದ ಬಿಲ್ ಮೌಲ್ಯದ ಮೇಲೆ ಶೇಕಡಾ 25 ರಷ್ಟು ರಿಯಾಯಿತಿಯನ್ನು ನೀಡುತ್ತುದೆ. ಚಿನ್ನದ ದರ ಏರಿಳಿತವಾಗುತ್ತಿರುವ ಕಾರಣ ಈಗಲೇ ಕೇವಲ 10% ಮುಂಗಡ ಪಾವತಿಸಿ ಚಿನ್ನವನ್ನು ಬುಕ್ ಮಾಡಬಹುದು.
ಜೋಯಾಲುಕ್ಕಾಸ್ ಗ್ರೂಪ್ ಕೂಡ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದೆ. ಮೇ 9 ಮತ್ತು ಮೇ 12, 2024 ರ ನಡುವೆ Dh3,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸುವವರಿಗೆ Dh50 ಗಿಫ್ಟ್ ವೋಚರ್ ಅನ್ನು ನೀಡುತ್ತಿದೆ. ಜೊತೆಗೆ ಗ್ರಾಹಕರು ಮೇ 10, 2024 ರವರೆಗೆ ಮುಂಗಡವಾಗಿ 10% ಪಾವತಿಸಿ ಒಡವೆ ಬುಕ್ ಮಾಡಬಹುದು. ಇದಲ್ಲದೆ, 8 ಗ್ರಾಂ ಚಿನ್ನದ ನಾಣ್ಯಗಳ ಮೇಲೆ ಜೀರೋ ಮೇಕಿಂಗ್ ಚಾರ್ಜ್, ವಜ್ರದ ವಿನಿಮಯದ ಮೇಲೆ ಶೇಕಡಾ 100 ಮೌಲ್ಯ ಮತ್ತು ಹಳೆಯ ಚಿನ್ನದ ವಿನಿಮಯದ ಮೇಲೆ ಆಕರ್ಷಕ ಕೊಡುಗೆಗಳಿವೆ.
ಕಲ್ಯಾಣ್ ಜ್ಯುವೆಲ್ಲರ್ಸ್ ಚಿನ್ನದ ನಾಣ್ಯ ಕೊಡುಗೆಗಳನ್ನು ಘೋಷಿಸಿದೆ. ಇಲ್ಲೂ ಕೂಡ ಗ್ರಾಹಕರಿಗಾಗಿ 10% ಪಾವತಿಸಿ ಒಡವೆ ಬುಕ್ ಮಾಡಬಹುದಾದ ಕೊಡುಗೆ ನೀಡಿದೆ. ಚಿನ್ನದ ಬೆಲೆಯಲ್ಲಿನ ಏರಿಳಿತದಿಂದಾಗಿ ಮುಂಗಡ ಬುಕಿಂಗ್ ಸೌಲಭ್ಯವು ಈ ಸೀಸನ್‌ನಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಅಕ್ಷಯ ತೃತೀಯಕ್ಕೆ ಭೀಮಾ ಜ್ಯುವೆಲರ್ಸ್ ಕೂಡ ಮೇ 9 ರಿಂದ ಮೇ 12 ರವರೆಗೆ, ಗ್ರಾಹಕರು ಚಿನ್ನದ ಆಭರಣಗಳ ಮೇಲೆ ಪ್ರತಿ ಗ್ರಾಂಗೆ 500 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು ಎಂದು ಘೋಷಿಸಿದೆ. ವಜ್ರಗಳನ್ನು ಕೊಳ್ಳಲು ಬಯಸುವವರಿಗೆ, ಭೀಮಾ ಜ್ಯುವೆಲರ್ಸ್ ಪ್ರತಿ ಕ್ಯಾರೆಟ್‌ಗೆ INR 7000 ಫ್ಲಾಟ್ ಕ್ಯಾಶ್‌ಬ್ಯಾಕ್ ಜೊತೆಗೆ 1 ಲಕ್ಷದವರೆಗಿನ ಉಚಿತ ಉಡುಗೊರೆ ಕಾರ್ಡ್ ಅನ್ನು ನೀಡುತ್ತಿದೆ. ಬೆಳ್ಳಿಗೆ ಪ್ರತಿ ಕೆಜಿಗೆ 5000 ವರೆಗೆ ರಿಯಾಯಿತಿ. ಇದಲ್ಲದೆ, ಲಕ್ಕಿ ಡ್ರಾಗಳ ಮೂಲಕ 1 ಕೆಜಿ ಚಿನ್ನದ ನಾಣ್ಯಗಳನ್ನು ಗೆಲ್ಲಲು ಅವಕಾಶವಿದೆ.












Click it and Unblock the Notifications