ಈ ಮೊತ್ತದ ಪಿಎಫ್ ವಿಥ್ ಡ್ರಾಗೆ ಆನ್ಲೈನ್ ಕ್ಲೇಮ್ ಕಡ್ಡಾಯ!

ಬೆಂಗಳೂರು, ಫೆಬ್ರವರಿ 28: ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪಿಎಫ್ ವಿಥ್ ಡ್ರಾ ಮಾಡಲುಆನ್​ಲೈನ್ ಕ್ಲೇಮ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಪಿಎಫ್ ಪ್ರಕ್ರಿಯೆಗಳನ್ನು ಕಾಗದ ರಹಿತವಾಗಿಸಿ, ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವುದು ಇಪಿಎಫ್​ಒ ಉದ್ದೇಶವಾಗಿದೆ.

ಇದಲ್ಲದೆ,ಉದ್ಯೋಗಿಗಳ ಪಿಂಚಣಿ ಯೋಜನೆ 1995 ಅಡಿಯಲ್ಲಿ 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಿತ್ ​ಡ್ರಾಗಳಿಗೂ ಆನ್​ಲೈನ್ ಕ್ಲೇಮ್ ಸಲ್ಲಿಸುವುದು ಅನಿವಾರ್ಯವಾಗಿದೆ.

For Provident Fund (PF) Withdrawal Above Rs. 10 Lakh, Online Filing A Must Now

ಕಳೆದ ಜನವರಿ 17ರಂದು ಕೇಂದ್ರ ಭವಿಷ್ಯ ನಿಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಹೊಸ ನಿಯಮಗಳನ್ನು ಅಳವಡಿಸಲು ನಿರ್ಧರಿಸಲಾಯಿತು. ಚಂದಾದಾರರ ಬ್ಯಾಂಕ್ ಖಾತೆ ಇಪಿಎಫ್ ವ್ಯವಸ್ಥೆಯಲ್ಲಿ ನೋಂದಣಿಯಾಗಿದ್ದು, ನಂತರದಲ್ಲಿ ಆನ್​ಲೈನ್ ಕ್ಲೇಮ್ ಮಾಡಿಕೊಳ್ಳಬಹುದಾಗಿದೆ.

ಇಪಿಎಫ್ ಒ ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರು ಗೂ ಅಧಿಕ ಮೊತ್ತವಿದೆ. ಎನ್ ಪಿಎಸ್ ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರು ಮೊತ್ತವಿದೆ.

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+