Fake: ಜೂಮ್ ವಿರುದ್ಧವಾಗಿ ಕೇಂದ್ರ ಸರ್ಕಾರದಿಂದ ''ನಮಸ್ತೆ'' App
ನವದೆಹಲಿ, ಏಪ್ರಿಲ್ 22: ಚೀನಾ ಮೂಲದ ವಿಡಿಯೋ ಕಾನ್ಫರೆನ್ಸ್ ಆಪ್ಲಿಕೇಷನ್ ಜೂಮ್ ಸುರಕ್ಷತಾ ವಿಧಾನವನ್ನು ಪಾಲಿಸುತ್ತಿಲ್ಲ ಎಂಬ ದೂರಿದೆ. ದೇಶಿ ನಿರ್ಮಿತ ಆಪ್ ಗಳನ್ನು ವಿನ್ಯಾಸಗೊಳಿಸುವವರಿಗೆ ಕೋಟ್ಯಂತರ ಮೊತ್ತದ ಬಹುಮಾನವನ್ನು ಸರ್ಕಾರ ಘೋಷಿಸಿದೆ. ಆದರೆ, ಸರ್ಕಾರದ ಘೋಷಣೆಯನ್ನೇ ಮುಂದಿಟ್ಟುಕೊಂಡು ''ನಮಸ್ತೆ'' ಹೆಸರಿನ ಅಪ್ಲಿಕೇಷನ್ ಬಿಡುಗಡೆ ಮಾಡಿದೆ ಎಂಬ ಸುಳ್ಳು ಸುದ್ದಿ ಹಬ್ಬಿದೆ.
ಜೂಮ್ ಬದಲಿಗೆ ಭಾರತದಿಂದ ಸ್ವದೇಶಿ ನಿರ್ಮಿತ ನಮಸ್ತೆ ಆಪ್ ಬಂದಿದೆ. ಇದೇ ವಾರದಲ್ಲಿ ಐಒಎಸ್ ಹಾಗೂ ಆಂಡ್ರಾಯ್ಡ್ ಆವೃತ್ತಿಯ ನಮಸ್ತೆ ಆಪ್ ಲಭ್ಯವಾಗಲಿದೆ, ಇದು ಸರ್ಕಾರದ ಅಧಿಕೃತ ಅಪ್ಲಿಕೇಷನ್ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಸತ್ಯಾಸತ್ಯತೆ: ಈ ರೀತಿ ಯಾವುದೇ ಅಪ್ಲಿಕೇಷನ್ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಲ್ಲ. ವಿಡಿಯೋ ಕಾನ್ಫರೆನ್ಸ್ ಆಪ್ ಅಭಿವೃದ್ಧಿಪಡಿಯುವ ಉತ್ಸಾಹಿಗಳಿಗೆ ಪ್ರೋತ್ಸಾಹ ಧನ ಘೋಷಿಸಲಾಗಿದೆ. ಆದರೆ, ಅಪ್ಲಿಕೇಷನ್ ಅಭಿವೃದ್ಧಿಯಾಗಿಲ್ಲ, ಸರ್ಕಾರದ ಅಧಿಕೃತ ವಿಡಿಯೋ ಕಾನ್ಫರೆನ್ಸ್ ಆಪ್ ಎಂದು ಯಾವುದಕ್ಕೂ ಮಾನ್ಯತೆ ನೀಡಿಲ್ಲ ಎಂದು ಪಿಐಬಿ ಚೆಕ್ ಟ್ವೀಟ್ ಮಾಡಿದೆ.

ಕಳೆದ ವಾರ ಸುರಕ್ಷತಾ ದೃಷ್ಟಿಯಿಂದ ಜೂಮ್ ಆಪ್ ಬಳಕೆ ನಿಯಂತ್ರಿಸುವಂತೆ ಕೇಂದ್ರ ಗೃಹ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿತ್ತು. ಜೂಮ್ ಆಪ್ ಬಳಕೆ ಮಾಡಲೇಬೇಕಾದರೆ ಕೆಲವು ನಿಯಮ ಪಾಲಿಸುವಂತೆ ಸೂಚಿಸಲಾಗಿತ್ತು. ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಇಲ್ಲದ ಜೂಮ್ ಆಪ್ ನಿಂದ ಖಾಸಗಿತನಕ್ಕೆ ಧಕ್ಕೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications