ಹ್ಯಾಕ್ ಆಗಿದ್ದ 230 ಕೋಟಿ ಖಾತೆಗಳನ್ನು ರೀಸ್ಟಾರ್ಟ್ ಮಾಡಿದ ಫೇಸ್‌ಬುಕ್
ಕ್ಯಾಲಿಫೋರ್ನಿಯಾ, ಅಕ್ಟೋಬರ್ 01: ಮೊನ್ನೆಯಷ್ಟೆ 5 ಕೋಟಿ ಫೇಸ್‌ಬುಕ್ ಖ್ಯಾತೆಗಳು ಹ್ಯಾಕ್ ಆಗಿರುವುದನ್ನು ಒಪ್ಪಿಕೊಂಡಿದ್ದ ಫೇಸ್‌ಬುಕ್, ಶನಿವಾರ 230 ಫೇಸ್‌ಬುಕ್ ಖಾತೆಗಳನ್ನು ರೀಸ್ಟಾರ್ಟ್ ಮಾಡಿದೆ.
230 ಕೋಟಿ ಫೇಸ್‌ಬುಕ್ ಖಾತೆಗಳನ್ನು ಲಾಗೌಟ್ ಮಾಡಿ, ಖಾತೆದಾರರು ಮತ್ತೆ ಲಾಗಿನ್ ಮಾಡುವಂತೆ ಫೇಸ್‌ಬುಕ್ ಮಾಡಿದೆ. ಈ ಖಾತೆಗಳ ಆಕ್ಸೆಸ್ ಟೋಕನ್ (ಆಪ್ ಪ್ರವೇಶ ಭದ್ರತೆ) ಅನ್ನು ಬದಲಾಯಿಸಿದ ಕಾರಣ ಹೀಗೆ ಲಾಗೌಟ್ ಮಾಡಿ ಮತ್ತೆ ಲಾಗಿನ್ ಮಾಡಲಾಗಿದೆ ಎಂದು ಫೇಸ್‌ಬುಕ್ ಹೇಳಿದೆ.
ಇತ್ತೀಚೆಗೆ ಫೇಸ್‌ಬುಕ್ ಭಾರಿ ಪ್ರಮಾಣದ ಭದ್ರತಾ ಸಮಸ್ಯೆಯಿಂದ ಪದೇ ಪದೇ ಅನುಮಾನಕ್ಕೆ ಗುರಿ ಆಗುತ್ತಿದೆ. ಈಗ ಮತ್ತೆ ಹೀಗೆ ಏಕಾ-ಏಕಿ ಖಾತೆದಾರರ ಖಾತೆಗಳನ್ನು ಲಾಗೌಟ್ ಮಾಡಿಸಿ ಮತ್ತೆ ಅನುಮಾನ ಹುಟ್ಟುಹಾಕಿದೆ.

ಹ್ಯಾಕರ್‌ಗಳು ಫೇಸ್‌ಬುಕ್‌ನ ಕೆಲವು ಆಕ್ಸಸ್ ಟೋಕನ್ ಹ್ಯಾಕ್ ಮಾಡಿ ಫೇಸ್‌ಬುಕ್‌ನ ಕೆಲವು ಆಯ್ಕೆಗಳನ್ನು ತಿರುಚಿದ್ದರು. ಇದು ಭಾರಿ ಆತಂಕ ಮೂಡಿಸಿತ್ತು. ಫೇಸ್‌ಬುಕ್ ಸಹ ಈ ಹ್ಯಾಕರ್ ದಾಳಿಯನ್ನು ಒಪ್ಪಿಕೊಂಡಿತ್ತು. ಹಾಗೂ ಈ ಬಗ್ಗೆ ದೂರು ಸಹ ನೀಡಿತ್ತು.
ಏನಿದು ಆಕ್ಸಸ್ ಟೋಕನ್?
ಫೇಸ್‌ಬುಕ್ ಖಾತೆಯನ್ನು ಲಾಗೌಟ್ ಮಾಡದೆ ಸಿಸ್ಟಂ ಅನ್ನು ಆಫ್ ಮಾಡಿ ಆ ನಂತರ ಮತ್ತೆ ಆನ್ ಮಾಡಿ ಫೇಸ್‌ಬುಕ್ ತೆರೆದಾಗ ಅದು ನೇರವಾಗಿ ನಿಮ್ಮ ಖಾತೆಗೆ ಪ್ರವೇಶ ಪಡೆಯುತ್ತದೆ. ಮತ್ತೆ ಬಳಕೆದಾರರು ಈಮೇಲ್, ಪಾಸ್‌ವರ್ಡ್ ಹಾಕುವ ಅವಶ್ಯಕತೆ ಇರುವುದಿಲ್ಲ. ಇದನ್ನೇ ಆಕ್ಸಸ್ ಟೋಕನ್ ಎನ್ನುತ್ತಾರೆ. ಆಕ್ಸಸ್ ಟೋಕನ್‌ಗಳು ಬಳಕೆದಾರರ ಖಾತೆಗಳು ಸದಾ ಜಾಗೃತವಾಗಿರುವಂತೆ ನೋಡಿಕೊಂಡಿರುತ್ತವೆ. ಆದರೆ ಇದನ್ನೇ ಹ್ಯಾಕರ್‌ಗಳು ಕದ್ದು ಬಳಸಿದ್ದಾರೆ.
ಆದರೆ ಈಗ ಫೇಸ್‌ಬುಕ್ ಆಕ್ಸಸ್ ಟೋಕನ್ ಅನ್ನು ಸುರಕ್ಷಿತಗೊಳಿಸಿರುವುದಾಗಿ ಹೇಳಿದೆ. ಭದ್ರತೆ ಅಪ್‌ಗ್ರೇಡ್ ಮಾಡಿರುವ ಕಾರಣ ಖಾತೆಗಳನ್ನು ಲಾಗೌಟ್ ಮಾಡಿ ಲಾಗಿನ್ ಮಾಡುವುದು ಅವಶ್ಯಕತವಾಗಿತ್ತು ಹಾಗಾಗಿ ಬಳಕೆದಾರರ ಖಾತೆಗಳನ್ನು ಲಾಗೌಟ್ ಮಾಡಲಾಗಿತ್ತು ಎಂದು ಫೇಸ್‌ಬುಕ್ ಹೇಳಿದೆ.












Click it and Unblock the Notifications