ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್‌ನ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ

|
Google Oneindia Kannada News

ನವದೆಹಲಿ, ನವೆಂಬರ್‌ 4: ಮೆಟಾದ ( ಫೇಸ್‌ಬುಕ್‌ನ) ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥ ಅಜಿತ್ ಮೋಹನ್ ಅವರು ನವೆಂಬರ್ 3ರಂದು ರಾಜೀನಾಮೆ ನೀಡಿದ್ದಾರೆ.

ಅಜಿತ್ ಮೋಹನ್ ಅವರು ಸ್ಟ್ರೀಮಿಂಗ್ ಮೀಡಿಯಾ ಪ್ಲಾಟ್‌ಫಾರ್ಮ್ ಹಾಟ್‌ಸ್ಟಾರ್ ಸೇರಿದಂತೆ ಹೊಸ ವ್ಯವಹಾರಗಳನ್ನು ಪ್ರಾರಂಭಿಸಿದ ಇತಿಹಾಸವನ್ನು ಹೊಂದಿದ್ದಾರೆ. ಅಲ್ಲಿ ಅವರು ಅದರ ಮೊದಲ ಸಿಇಒ ಆಗಿ ಸೇವೆ ಸಲ್ಲಿಸಿದ್ದರು. ಸ್ನ್ಯಾಪ್‌ನ ಎಪಿಎಸಿ ವ್ಯವಹಾರದ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳುವ ಸಲುವಾಗಿ ಮೋಹನ್ ಅವರು ಮೆಟಾದ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಫೇಸ್‌ಬುಕ್‌ನಲ್ಲಿ 118 ಮಿಲಿಯನ್ ಫಾಲೋವರ್ಸ್ ಕಳೆದುಕೊಂಡ ಜುಕರ್‌ಬರ್ಗ್ಫೇಸ್‌ಬುಕ್‌ನಲ್ಲಿ 118 ಮಿಲಿಯನ್ ಫಾಲೋವರ್ಸ್ ಕಳೆದುಕೊಂಡ ಜುಕರ್‌ಬರ್ಗ್

ಗ್ಲೋಬಲ್ ಬ್ಯುಸಿನೆಸ್ ಗ್ರೂಪ್‌ನ ಮೆಟಾದ ಉಪಾಧ್ಯಕ್ಷ ನಿಕೋಲಾ ಮೆಂಡೆಲ್‌ಸೋನ್, ಕಂಪನಿಯಿಂದ ಹೊರಗೆ ಮತ್ತೊಂದು ಅವಕಾಶವನ್ನು ಪಡೆಯಲು ಅಜಿತ್ ಮೆಟಾದಲ್ಲಿನ ತನ್ನ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

Facebook India head Ajit Mohan resigns

ಕಳೆದ ನಾಲ್ಕು ವರ್ಷಗಳಲ್ಲಿ ಅವರು ನಮ್ಮ ಭಾರತದ ಕಾರ್ಯಾಚರಣೆಗಳನ್ನು ರೂಪಿಸುವಲ್ಲಿ ಮತ್ತು ಸ್ಕೇಲಿಂಗ್ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಆದ್ದರಿಂದ ಅವರು ಲಕ್ಷಾಂತರ ಭಾರತೀಯ ವ್ಯವಹಾರಗಳು, ಪಾಲುದಾರರು ಮತ್ತು ಜನರಿಗೆ ಸೇವೆ ಸಲ್ಲಿಸದ್ದಾರೆ. ನಾವು ಭಾರತಕ್ಕೆ ಬದ್ಧರಾಗಿದ್ದೇವೆ. ನಮ್ಮ ಎಲ್ಲಾ ಕೆಲಸ ಮತ್ತು ಪಾಲುದಾರಿಕೆಗಳನ್ನು ಮುಂದುವರಿಸಲು ಪ್ರಬಲ ನಾಯಕತ್ವದ ತಂಡವನ್ನು ಹೊಂದಿದ್ದೇವೆ. ಅಜಿತ್ ಅವರ ನಾಯಕತ್ವ ಮತ್ತು ಕೊಡುಗೆಗೆ ನಾವು ಕೃತಜ್ಞರಾಗಿರುತ್ತೇವೆ ಮತ್ತು ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇವೆ ಎಂದು ಅವರು ಹೇಳಿದರು.

Facebook India head Ajit Mohan resigns

2019 ರ ಜನವರಿಯಲ್ಲಿ ಅಜಿತ್ ಮೋಹನ್ ಅವರು ಮೆಟಾದ ಇಂಡಿಯಾ ವ್ಯವಹಾರದ ವ್ಯವಸ್ಥಾಪಕ ನಿರ್ದೇಶಕರ ಪಾತ್ರವನ್ನು ವಹಿಸಿಕೊಂಡಿದ್ದರು. 2017 ರ ಅಕ್ಟೋಬರ್‌ನಲ್ಲಿ ಮಾಜಿ ಫೇಸ್‌ಬುಕ್ ಮುಖ್ಯಸ್ಥ ಉಮಂಗ್ ಬೇಡಿ ಅವರನ್ನು ಬದಲಾಯಿಸಲಾಯಿತು. ಮೋಹನ್ ಅವರು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಮತ್ತು ಮ್ಯೂಸಿಯಂ ಆಫ್ ಆರ್ಟ್ ಮತ್ತು ಫೋಟೋಗ್ರಫಿ ಸದಸ್ಯರಾಗಿದ್ದಾರೆ. ಅವರು ಹಿಂದೆ ಆರ್ಥರ್ ಡಿ. ಲಿಟಲ್ ಮತ್ತು ಮೆಕಿನ್ಸೆ & ಕಂಪನಿಗೆ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

English summary
Meta Facebook's India operations chief Ajit Mohan resigned on November 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X