Get Updates
Get notified of breaking news, exclusive insights, and must-see stories!

ಗಮನಿಸಿ: ಪಿಎಫ್‌ಗೆ ಖಾತೆಗೆ ನಾಮಿನಿ ಸೇರ್ಪಡೆಗೆ ಮಾರ್ಚ್ 31 ಕೊನೆಯ ದಿನ

ನವದೆಹಲಿ, ಮಾರ್ಚ್ 27: ನಿಮ್ಮ ಭವಿಷ್ಯ ನಿಧಿ(ಪಿಎಫ್‌) ಖಾತೆಗೆ ನಾಮಿನಿ ಸೇರ್ಪಡೆ ಮಾಡಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮತ್ತೊಮ್ಮೆ ತನ್ನ ಚಂದಾದಾರರಿಗೆ ತಮ್ಮ ಪಿಎಫ್ ಖಾತೆಗಳ ಇ-ನಾಮಿನೇಷನ್‌ ಸೇರ್ಪಡೆ ಮಾಡುವ ಪ್ರಕ್ರಿಯೆಯನ್ನು ಮಾರ್ಚ್ 31 ರೊಳಗೆ ಪೂರ್ಣಗೊಳಿಸುವಂತೆ ಒತ್ತಾಯಿಸಿದೆ.

ಇನ್ನು ಈ ಬಗ್ಗೆ ಎಚ್ಚರಿಕೆಯನ್ನು ಕೂಡಾ ಇಪಿಎಫ್‌ಒ ನೀಡಿದೆ. ಈ ದಿನಾಂಕಕ್ಕೂ ಮುನ್ನ ಇಪಿಎಫ್‌ಒ ಚಂದಾದಾರರು ಇ ನಾಮಿನೇಷನ್‌ ಮಾಡಲು ವಿಫಲರಾದರೆ ನಿವೃತ್ತಿ ಸಂದರ್ಭದಲ್ಲಿ ಈ ಸಂಸ್ಥೆಯಿಂದ ಒದಗಿಸಲಾದ ಕೆಲವು ಸೌಲಭ್ಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

ಈ ಬಗ್ಗೆ ಹೇಳಿಕೆಯನ್ನು ನೀಡಿದ ಇಪಿಎಫ್‌ಒ "ಚಂದಾದಾರರು ತಮ್ಮ ಸಂಗಾತಿ, ಮಕ್ಕಳು ಮತ್ತು ಪೋಷಕರನ್ನು ನೋಡಿಕೊಳ್ಳಲು ಮತ್ತು ಆನ್‌ಲೈನ್ ಪಿಎಫ್, ಪಿಂಚಣಿ ಮತ್ತು ವಿಮೆಯ ಮೂಲಕ ಅವರನ್ನು ರಕ್ಷಿಸಲು ಇಪಿಎಫ್‌ ಖಾತೆಗೆ ನಾಮಿನೇಷನ್‌ ಮಾಡುವುದು ಬಹಳ ನಿರ್ಣಾಯಕವಾಗಿದೆ," ಎಂದು ಹೇಳಿದೆ.

EPFO Urges Subscribers to File e-nomination by March 31: How, Heres details

ಇ-ನಾಮಿನೇಷನ್‌ ಸಲ್ಲಿಸುವುದರಿಂದ ಯಾವುದೇ ಅಪಘಾತದ ಸಂದರ್ಭದಲ್ಲಿ ಪಿಎಫ್‌ ಖಾತೆದಾರರ ಅವಲಂಬಿತರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇ ನಾಮಿನೇಷನ್‌ ಮಾಡಿದ ಬಳಿಕ ಖಾತೆದಾರರಿಗೆ ಯಾವುದೇ ಅವಘಡಗಳು ಸಂಭವಿಸಿದರೆ ನಾಮಿನಿಯು ವಿಮೆ ಮತ್ತು ಪಿಂಚಣಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

PF ಖಾತೆದಾರರು EPFO ​​ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಇ-ನಾಮಿನಿ ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ನಾಮಿನೇಷನ್‌ ಅನ್ನು ಸಲ್ಲಿಸಬಹುದು. ಹಾಗಾದರೆ ನಾಮಿನಿಯನ್ನು ಸೇರಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ..

ನಿಮ್ಮ PF ಖಾತೆಗೆ ಇ-ನಾಮಿನೇಷನ್‌ ಅನ್ನು ಹೇಗೆ ಸಲ್ಲಿಸುವುದು?

* ಮೊದಲು EPFO ವೆಬ್‌ಸೈಟ್‌ epfindia.gov.in. ಗೆ ಭೇಟಿ ನೀಡಿ
* 'Services' ಆಯ್ಕೆಯ ಕೆಳಗೆ 'For Employees' ಅನ್ನು ಆಯ್ಕೆ ಮಾಡಿ
* 'Member UAN/Online Service (OCS/OTCP)' ಆಯ್ಕೆಯನ್ನು ಕ್ಲಿಕ್‌ ಮಾಡಿ
* ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ
* 'Manage' ಪೇಜ್‌ನಲ್ಲಿ e-nomination ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ, ಅದನ್ನು ಸಕ್ರಿಯಗೊಳಿಸಿ
* ನಿಮ್ಮ ಕುಟುಂಬದ ಡಿಕ್ಲೆರೇಷನ್‌ ಹಾಗೂ ಕುಟುಂಬದ ವಿವರಗಳನ್ನು ಸೇರಿಸಲು ಅಥವಾ ನಾಮಿನಿ ವಿವರಗಳನ್ನು ಬದಲಾಯಿಸಲು, 'yes' ಎಂದು ಕ್ಲಿಕ್‌ ಮಾಡಿ
* ನಾಮಿನಿಯ ಎಲ್ಲಾ ಮಾಹಿತಿಯನ್ನು ಇಲ್ಲಿ ಸಲ್ಲಿಕೆ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ
* ನೀವು ಹೆಚ್ಚು ನಾಮಿನಿಯನ್ನು ಸೇರ್ಪಡೆ ಮಾಡಲು ಬಯಸಿದರೆ 'Add New' ಆಯ್ಕೆ ಮಾಡಿ
* ಹೆಚ್ಚುವರಿ ನಾಮಿನಿಗಳ ಮಾಹಿತಿಯನ್ನು ಉಲ್ಲೇಖ ಮಾಡಿದರೆ ಪ್ರಕ್ರಿಯೆಯು ಅಂತ್ಯವಾಗಲಿದೆ.

ಒಮ್ಮೆ ನೀವು ನಿಮ್ಮ ಕುಟುಂಬದ ಮಾಹಿತಿಯನ್ನು ಹಾಕಿದರೆ ನಿಮ್ಮ ಇ-ನಾಮಿನೇಷನ್‌ ನಿಮ್ಮ PF ಖಾತೆಗೆ ಸಲ್ಲಿಸಲಾಗುತ್ತದೆ. ಕೊನೆಯ ದಿನಾಂಕವಾದ ಮಾರ್ಚ್ 31, 2022 ರ ಮೊದಲು ನಾಮಿನಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿದೆ ಎಂಬುವುದನ್ನು ನೆನಪಿನಲ್ಲಿ ಇಡಿ.

ಪಿಎಫ್‌ ಬಡ್ಡಿದರ ಕನಿಷ್ಠ ಮಟ್ಟಕ್ಕೆ ಇಳಿಕೆ!

ಉದ್ಯೋಗಿಗಳ 2021-22ರ ವರ್ಷದ ಭವಿಷ್ಯ ನಿಧಿ ಬಡ್ಡಿದರವನ್ನು ಶೇಕಡ 8.5ರಿಂದ ಶೇಕಡ 8.1ಕ್ಕೆ ಇಳಿಕೆ ಮಾಡಲಾಗಿದೆ. 021-22 ರ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರವನ್ನು 2021-22 ಕ್ಕೆ ಅಸ್ತಿತ್ವದಲ್ಲಿರುವ ಶೇಕಡಾ 8.5 ರಿಂದ 8.1 ಕ್ಕೆ ಕಡಿತಗೊಳಿಸಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ. 1977-78ರ ನಂತರದ ಅತ್ಯಂತ ಕಡಿಮೆ ದರ ಇದಾಗಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಸುಮಾರು ಐದು ಕೋಟಿ ಚಂದಾದಾರರನ್ನು ಹೊಂದಿದ್ದು, ಈ ಚಂದಾದಾರರಿಗೆ 2021-22ರ ತಮ್ಮ ಪಿಎಫ್‌ ಬಡ್ಡಿದರವು 8.1ಕ್ಕೆ ಆಗಿದೆ.

Recommended Video

      ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುತ್ತಿರುವ ಸ್ನೇಹಿತರು! | K L Rahul | Hardik Pandya | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+